Blog

  • ಸಮಸಮಾಜದ ನಿರ್ಮಾಣ ಅಂಬೇಡ್ಕರ್ ಆಶಯ ಪರಿಪೂರ್ಣ – ಮಂಜುನಾಥ್

    ದೊಡ್ಡಬಳ್ಳಾಪುರ : ಲಾವಣ್ಯ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜು ವತಿಯಿಂದ ಸಂವಿಧಾನ ಶಿಲ್ಫಿ ಬಾರತರತ್ನ ಡಾ:ಬಿ ಆರ್ ಅಂಬೇಡ್ಕರ್ ರವರ 135 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

     

    ಅಂಬೇಡ್ಕರ್ ರವರ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಪ್ರಾಂಶುಪಾಲ ಎಂ ಸಿ. ಮಂಜುನಾಥ್ ಮಾಡನಾಡಿದರು ವಿಶ್ವದಲ್ಲೇ ದೊಡ್ಡದಾದ ಲಿಖಿತ ಸಂವಿಧಾನ ನಮ್ಮದು ಎಲ್ಲಾ ಜಾತಿ ದರ್ಮದವರಿಗೂ ಸಮಾನ ಅವಕಾಶವನ್ನು ನಮ್ಮ ಸಂವಿಧಾನ ನೀಡಿದೆ ನಮ್ಮ ಸಂವಿಧಾನ ನಮ್ಮ ಹೆಮ್ಮೆ ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ತಮ್ಮ ನಡವಳಿಕೆಯಿಂದ ಸಂವಿಧಾನದ ಆಶಯಗಳಿಗೆ ದಕ್ಕೆ ತರುತಿದ್ದಾರೆ ಎಂದರು.

     

    ಇನ್ನೂ ಅನೇಕ ಗ್ರಾಮಗಳಲ್ಲಿ ಪಟ್ಟಣಗಳಲ್ಲಿ ಅಸ್ಪೃಶ್ಯತೆ ಇದೆ ಈ ಅಸ್ಪೃಶ್ಯತೆಯನ್ನು ಹೊಗಲಾಡಿಸಿ ಸಮಾನತೆ ಸಾದಿಸಿದಾಗ ಮಾತ್ರ ಅಂಬೇಡ್ಕರ್ ರವರ ಆಶಯಗಳನ್ನು ಈಡೇರಿಸಲು ಸಾದ್ಯ ಎಂದು ಹೇಳಿದರು.

     

    ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಕಾರ್ತಿಕ್ ಎನ್ ರಶ್ಮಿ, ಗಂಗಮೂರ್ತಿ, ಆರ್ ಎಲ್ ಅನುಷಾ ಹಾಗೂ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

  • ಜಿಲ್ಲಾಡಳಿತ ಭವನದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರ 135 ನೇ ಜಯಂತಿ ಆಚರಣೆ

    ಬೆಂಗಳೂರು ಗ್ರಾಮಾಂತರ : ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ರವರ ಜೀವನ ಚರಿತ್ರೆ, ಸಾಧನೆಯನ್ನು ಓದಿದರೆ ಸಾಲದು, ಜತೆಗೆ ಅವರ ಸಂದೇಶ, ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಅವರು ಹೇಳಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಳವಾಗಿ, ಅರ್ಥಪೂರ್ಣವಾಗಿ ಆಯೋಜಿಸಿದ್ದ ಡಾ.ಬಿ.ಆರ್ ಅಂಬೇಡ್ಕರ್ ರವರ 135 ನೇ ಜಯಂತಿ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಅವರು ಪುಷ್ಪನಮನ ಸಲ್ಲಿಸಿ, ನಂತರ ಮಾತನಾಡಿದರು ಭಾರತ ದೇಶ ಕಂಡ ಅಪ್ರತಿಮ ಮಹಾನ್ ಧೀಮಂತ ವ್ಯಕ್ತಿ, ಸಂವಿಧಾನವನ್ನು ರಚಿಸಿಕೊಟ್ಟ ಅದ್ಭುತ ಜ್ಞಾನಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕೊಡುಗೆ ಅಪಾರ ವಾದದ್ದು. ನಾವೆಲ್ಲರೂ ಮುಂದಿನ ಪೀಳಿಗೆಗೆ ಡಾ.ಬಿ.ಆರ್. ಅಂಬೇಡ್ಕರ್ ರವರ ಜೀವನಾದರ್ಶ, ಮೌಲ್ಯಗಳು, ದೇಶಕ್ಕಾಗಿ ನೀಡಿದ ಸಂವಿಧಾನದ ಆಶಯವನ್ನು ತಿಳಿಸುವ ಜತೆಗೆ ರೂಡಿಸಿಕೊಳ್ಳುವಂತೆ ಮಾಡಬೇಕು ಎಂದರು.

    ವಿದೇಶಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ-ಸಿದ್ದಾಂತ, ಜೀವನಾದರ್ಶ ಕುರಿತು ಸಂಶೋಧನಾ ವಿಷಯಗಳಾಗಿ ಅಧ್ಯಯನ ಮಾಡಲಾಗುತ್ತಿದೆ. ಇದು ಭಾರತೀಯರು ಬಹಳಷ್ಟು ಹೆಮ್ಮೆ ಪಡುವಂತಹ ಸಂಗತಿ  ಅಂಬೇಡ್ಕರ್ ಅವರು ಹಲವು ಪದವಿ ಪಡೆದಿದ್ದರು ಅವರಂತೆ ಇಂದಿನ ಯುವ ಸಮೂಹವು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವುದರಿಂದ ದೇಶದಲ್ಲಿ ಇನ್ನೂ ಮಹತ್ತರವಾದ ಬದಲಾವಣೆಯನ್ನು ನೋಡಬಹುದು ಎಂದರು.

     

    ಉಪನ್ಯಾಸಕ ಶಿವಮೂರ್ತಿ ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿದರು. ಮುಖಂಡರುಗಳಾದ ರವಿಕಲಾ, ಮ್ಯಾಥ್ಯು ಮುನಿಯಪ್ಪ ಮಾತನಾಡಿದರು.

    ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್, ಯೋಜನಾ ನಿರ್ದೇಶಕ ವಿಠ್ಠಲ್ ಕಾವ್ಳೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪ್ರೇಮಾ, ದಲಿತ ಸಂಘಟನೆಗಳು, ವಿವಿಧ ಸಮುದಾಯದ ಮುಖಂಡರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

     

  • ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದಿಂದ 50ನೇ ಮಾಸಿಕ ರಂಗ ಕಲಾಜ್ಯೋತಿ ಕಾರ್ಯಕ್ರಮ

    *ದೊಡ್ಡಬಳ್ಳಾಪುರ*: ಪೌರಾಣಿಕ ನಾಟಕಗಳನ್ನು ಅಭಿನಯಿಸುವ ಜೊತೆಗೆ ಸಾಮಾಜಿಕ, ಐತಿಹಾಸಿಕ ನಾಟಕಗಳ ಪ್ರದರ್ಶನಕ್ಕೂ ಉತ್ತೇಜನ ಅಗತ್ಯವಾಗಿದೆ. ಸಮಕಾಲೀನ ಆಶೋತ್ತರಗಳಿಗೆ ತಕ್ಕಂತೆ ನಾಟಕಗಳ ವಸ್ತು, ಅಭಿವ್ಯಕ್ತಿ ಮತ್ತು ಆಶಯಗಳಲ್ಲಿ ಮಾರ್ಪಾಟು ಮಾಡಿಕೊಳ್ಳುವುದು ಅಗತ್ಯ ಎಂದು ಬೆಂ.ಗ್ರಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಹೇಳಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಭೂಮಿ ಕಲಾವಿದರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಮುದ್ದನಾಯಕನಪಾಳ್ಯ ಬಳಿ ಇರುವ ಜಿಲ್ಲಾ ಕಲಾ ಭವನದಲ್ಲಿ ಶನಿವಾರ ನಡೆದ 50ನೇ ಮಾಸಿಕ ರಂಗ ಕಲಾಜ್ಯೋತಿ ಕಾರ್ಯಕ್ರಮ, ರಂಗಗೀತೆ ಗಾಯನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಸೃಜನಶೀಲ ಅಭಿವ್ಯಕ್ತಿಯ ಪ್ರಖರ ಮಾಧ್ಯಮವಾಗಿರುವ ರಂಗ ಕಲೆ ಸಾಂಸ್ಕೃತಿಕ ಅನನ್ಯತೆಯ ಜೊತೆಗೆ ಸಮಕಾಲೀನ ಸಾಮಾಜಿಕ ವಾತಾವರಣವನ್ನು ವಿಮರ್ಶಿಸುವ ವೇದಿಕೆಯೂ ಆಗಬೇಕು. ಯುವ ಕಲಾವಿದರನ್ನು ಪ್ರೋತ್ಸಾಹಿಸಲು, ಕಲಾ ಪರಂಪರೆಯ ಇತಿಹಾಸ, ವರ್ತಮಾನ ಮತ್ತು ಭವಿಷ್ಯದ ಚಿಂತನೆಯನ್ನು ಉತ್ತೇಜಿಸಲು ಮಾರ್ಗದರ್ಶಿ ಶಿಬಿರಗಳನ್ನು ಹಮ್ಮಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

    ಜಾಗತಿಕ ಸಂದಿಗ್ಧತೆಯ ಸಂದರ್ಭದಲ್ಲಿ ಲಲಿತ ಕಲೆಗಳು ಪ್ರಖರ ಅಭಿವ್ಯಕ್ತಿ ಮಾಧ್ಯಮವಾಗಿ ಗಮನ ಸೆಳೆದಿವೆ. ಇರಾನ್‌-ಅಮೆರಿಕಾ ಯುದ್ದದ ವೇಳೆ ಇರಾನ್‌ನ ಪ್ರಜೆಯೊಬ್ಬ ಸಂಗೀತ ವಾದ್ಯ ನುಡಿಸುವ ಮೂಲಕ ಸಾಮ್ರಾಜ್ಯಶಾಹಿಯ ದಬ್ಬಾಳಿಕೆಯನ್ನು ಪ್ರಶ್ನಿಸಿದ ಮತ್ತು ಶಾಂತಿ ಸ್ಥಾಪನೆಯ ಸಂದೇಶವನ್ನು ಸಾರಿದ ಘಟನೆ ಅತ್ಯಂತ ಮಾರ್ಮಿಕವಾಗಿದೆ. ಸಂಗೀತ, ಕಲೆಗಳಿಗೆ ರೋಗನಿರೋಧಕ ಸಾಮರ್ಥ್ಯವಿದ್ದು, ಮನಸ್ಸು ಹಾಗೂ ದೇಹವನ್ನು ಪ್ರಫುಲ್ಲಗೊಳಿಸುವ ಸಂವೇದನೆ ಇದೆ ಎಂದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಬೆಂ.ಗ್ರಾ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಗೌರವಾಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ರಂಗ ಕಲೆ ಸೃಜನಶೀಲ ಭಾವನೆಗಳ ಅಭಿವ್ಯಕ್ತಿಯ ಜೊತೆಗೆ ಸಾಂಸ್ಕೃತಿಕ ಹಾಗೂ ಪಾರಂಪರಿಕ ಮೌಲ್ಯಗಳ ಬಗ್ಗೆ ನಿರಂತರ ಜಾಗೃತಿಯನ್ನು ಮೂಡಿಸುತ್ತದೆ. ಸತತ 50 ತಿಂಗಳುಗಳಿಂದ ಪ್ರತಿ ತಿಂಗಳು ಒಬ್ಬೊಬ್ಬ ಕಲಾವಿದರನ್ನು ಗುರ್ತಿಸಿ ಗೌರವಿಸುವ ಪ್ರಕ್ರಿಯೆ ನಡೆಯುತ್ತಿದೆ. ಕಲಾ ಚೇತನಗಳ ಉತ್ತೇಜನಕ್ಕೆ ಇದೊಂದು ಉತ್ತಮ ಮಾರ್ಗವೂ ಆಗಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಮಾತನಾಡಿ, ಇಡೀ ಜಿಲ್ಲೆಯ ಅಸಂಖ್ಯಾತ ಕಲಾವಿದರುಗಳನ್ನು ಗುರ್ತಿಸಿ, ಪ್ರೋತ್ಸಾಹಿಸುವುದು ರಂಗ ಕಲಾ ಜ್ಯೋತಿ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ರಂಗ ಕಲಾಜ್ಯೋತಿ 50 ಮಾಸಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದರು.

    ಕಲಾವಿದ ನಾರಾಯಣಸ್ವಾಮಿ ಅವರಿಗೆ ರಂಗ ಕಲಾ ಜ್ಯೋತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಂಘದ ಉಪಾಧ್ಯಕ್ಷ ಎಸ್.ಎ.ಶ್ರೀಧರಗೌಡ, ಖಜಾಂಚಿ ಆರ್.ವಿ.ಮಂಜುನಾಥ್, ನಿರ್ದೇಶಕರಾದ ಮುನಿರಾಜು, ಕೆ.ನಾಗರತ್ನಮ್ಮ, ಆರ್.ಎ.ಸಂಜೀವರಾಯಪ್ಪ, ಮುನಿಕೃಷ್ಣಪ್ಪ, ಸುಬ್ರಹ್ಮಣ್ಯಾಚಾರ್, ಚಂದ್ರಣ್ಣ, ಸರ್ವೇಶ್‌ ಸೇರಿದಂತೆ ಸಂಘದ ಪದಾಧಿಕಾರಿಗಳು, ಸಲಹಾ ಸಮಿತಿ, ಸಂಚಾಲನಾ ಸಮಿತಿಯ ಸದಸ್ಯರು ಪಾಲ್ಗೊಂಡರು.

     

     

    ದೊಡ್ಡಬಳ್ಳಾಪುರದ ಮುದ್ದನಾಯಕನಪಾಳ್ಯದ ಬೆಂ.ಗ್ರಾ ಜಿಲ್ಲಾ ಕಲಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದ ನರಸಿಂಹಮೂರ್ತಿ ಅವರಿಗೆ ರಂಗ ಕಲಾಜ್ಯೋತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

  • ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕಾರ್ಯ ಪತ್ರಕರ್ತರಿಂದಾಗಬೇಕು – ಸಿ ಎಂ ಸಿದ್ದರಾಮಯ್ಯ

    ಬೀದರ್ : ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ಇಬ್ಬರೂ ಪತ್ರಕರ್ತರಾಗಿ ಧ್ವನಿ ಇಲ್ಲದವರ ಧ್ವನಿಯಾಗಿದ್ದರು. ಸಮಾಜದಲ್ಲಿರುವ ನ್ಯೂನ್ಯತೆಗಳನ್ನು ಹೋಗಲಾಡಿಸಿ ಸಮಾಜವನ್ನು ಕಟ್ಟುವ ಕಾಯಕವನ್ನು ಬಸವಾದಿ ಶರಣರು ಮಾಡಿದ್ದರು. ಶರಣರ ಆಶಯದ ಸಮಸಮಾಜ ಆಗದಿದ್ದರೆ ಅಸಮಾನತೆ ಮುಂದುವರೆಯುತ್ತದೆ.‌ ಅದು ಮುಂದುವರೆಯಲಿ ಎನ್ನುವುದು ಪಟ್ಟಭದ್ರರ ಹಿತಾಸಕ್ತಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

    ಬೀದರ್ ನಗರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು ಯಾವ ದೇವರೂ ಯಾರನ್ನೂ ಕೂಡ ಅವಿದ್ಯಾವಂತನಾಗು ಅಂತಾಗಲೀ, ಕೆಳ ಜಾತಿಯಲ್ಲೇ ಹುಟ್ಟು ಎಂದು ಬಯಸುವುದಿಲ್ಲ. ಈ ಅರಿವನ್ನು ಜನರಲ್ಲಿ ಹೆಚ್ಚಿಸುವ ಕೆಲಸ ಪತ್ರಕರ್ತರಿಂದ ಆಗಬೇಕು. ಪತ್ರಕರ್ತರು ಕೇವಲ ಮಾಹಿತಿ ಕೊಡುವವರಾಗದೆ, ಸಮಾಜ ಸುಧಾರಣೆಗೂ ಒತ್ತು ನೀಡಬೇಕು ಎಂದರು.

    ಅಂಬೇಡ್ಕರ್ ಅವರ ಆಶಯದಂತೆ ಎಲ್ಲರಿಗೂ ಆರ್ಥಿಕ, ಸಾಮಾಜಿಕ‌ ಶಕ್ತಿ ಕೊಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ 2013 ರಲ್ಲೂ ಮಾಡಿತ್ತು. ಈಗಲೂ ಮುಂದುವರೆಸಿದೆ. ನಾವು ಬಡವರ ಪರವಾದ ಯೂನಿವರ್ಸಲ್ ಬೇಸಿಕ್ ಇನ್ ಕಂ ಆರ್ಥಿಕತೆಯನ್ನು ಪಾಲುಸುತ್ತಿದ್ದೇವೆ. ಇದನ್ನು ಪತ್ರಕರ್ತರು ಅರ್ಥ ಮಾಡಿಕೊಳ್ಳಬೇಕು.ಕೆಲವು ಒಳ್ಳೆ ಪತ್ರಕರ್ತರೂ ಇದ್ದಾರೆ. ಆದರೆ ಬಹಳಷ್ಟು ಮಾಧ್ಯಮ‌ ಸಂಸ್ಥೆಗಳು ಕಾರ್ಪೋರೇಟ್ ಹಿಡಿತಕ್ಕೆ ಒಳಪಟ್ಟಿವೆ. ಪತ್ರಕರ್ತರು ಸತ್ಯ ಬರೆದರೂ ಕೆಲವೊಮ್ಮೆ ಸಂಪಾದಕರುಗಳು ಮಾಲೀಕರ ಒತ್ತಡಕ್ಕೆ ಮಣಿದು ಬದಲಾಯಿಸಿ ಬಿಡುತ್ತಾರೆ. ನಾನು ಮಂತ್ರಿಯಾಗಿ 40 ವರ್ಷ ಆಯ್ತು. ನಮ್ಮ ಸರ್ಕಾರದ ಪರವಾಗಿ ಬರೆಯಿರಿ ಎಂದು ಇವತ್ತಿನವರೆಗೂ ನಾನು ಯಾರನ್ನೂ ಕೇಳಿಲ್ಲ‌ ಎಂದರು.

    ಜನಸಾಮಾನ್ಯರು ಇನ್ನೂ ಪತ್ರಿಕೆಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾನೂ ನಂಬಿಕೆ ಇಟ್ಟಿದ್ದೇನೆ.
    ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಸವಲತ್ತನ್ನು ಜಾರಿ ಮಾಡಿದ್ದೇ ನಾನು. ಇದರಲ್ಲಿನ ನಿಯಮಗಳಲ್ಲಿ ತೊಂದರೆ ಇದ್ದರೆ, ಆ ಬಗ್ಗೆ ಚರ್ಚಿಸಿ ನಿವಾರಣೆಗೊಳಿಸಲಾಗುವುದು ಎಂದರು.

  • ದಡಘಟ್ಟಮಡುಗು ಜಮೀನು ವಿವಾದ :ಆರೋಪಿ ಲೋಕೇಶ್ ಬಂಧಿಸಿರುವ ಪೊಲೀಸರು ವಕೀಲ ಪ್ರತಾಪ್ ನನ್ನು ಬಂಧಿಸಿಲ್ಲ ಯಾಕೆ… – ಕಲ್ಯಾಣ್ 

    ದೊಡ್ಡಬಳ್ಳಾಪುರ : ತಾಲ್ಲೂಕಿನ ಸಾಸಲು ಹೋಬಳಿಯ ದಡಘಟ್ಟಮಡುಗು ಗ್ರಾಮ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳ ಹಿಂದೆ ವಕೀಲ ಪ್ರತಾಪ್ ಹಾಗೂ ಸ್ಥಳೀಯರ ನಡುವೆ ಜಮೀನು ವಿವಾದ ಸೃಷ್ಟಿಯಾಗಿದ್ದು ಸದರಿ ಜಮೀನು ವಿಚಾರದ ಗಲಾಟೆ ಕುರಿತು ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದ್ದು ಸದರಿ ಇಬ್ಬರ ಮೇಲೂ ಎಫ್ ಐ ಆರ್ ದಾಖಲಾಗಿತ್ತು ಆದರೆ ಈಗ ಆರೋಪಿ ಲೋಕೇಶ್ ನನ್ನು ಯಾವುದೇ ಮಾಹಿತಿ ನೀಡದೆ ಬಂಧಿಸಿರುವ ಪೊಲೀಸರು ಮತ್ತೋರ್ವ ಆರೋಪಿ ಪ್ರತಾಪ್ ನನ್ನ ಬಂಧಿಸಿಲ್ಲ ಏಕೆ ಎಂದು ಸಾಸಲು ಹೋಬಳಿ ಮುಖಂಡ ಕಲ್ಯಾಣ್ ಅಗ್ರಹಿಸಿದರು.

     

     

    ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಹಣವಂತರಿಗೊಂದು ನ್ಯಾಯ ಬಡವರಿಗೊಂದು ನ್ಯಾಯವಾಗುತ್ತಿದೆ. ಯಾವುದೇ ಮಾಹಿತಿ ನೀಡದೆ ಇಂದು ಮುಂಜಾನೆ ಲೋಕೇಶ್ ರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಆದರೆ ಇದೆ ಪ್ರಕರಣದ ಮತ್ತೋರ್ವ ಆರೋಪಿ ಪ್ರತಾಪ್ ಸೇರಿದಂತೆ ಒಟ್ಟು 7ಮಂದಿ ವಿರುದ್ಧ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ , ಕೂಡಲೇ ವಕೀಲ ಪ್ರತಾಪ್ ಹಾಗೂ ಪ್ರಕರಣದಲ್ಲಿ ದಾಖಲಾಗಿರುವ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆಯಬೇಕು ನಮಗೆ ನ್ಯಾಯ ಒದಗಿಸಬೇಕು ಎಂದರು.

     

     

    ಸಾಸಲು ಹೋಬಳಿಯಲ್ಲಿ ಭೂ ಮಾಫಿಯ ಹೆಚ್ಚಾಗಿದ್ದು ಬಡವರ ಭೂಮಿಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಇದಕ್ಕೆ ಉತ್ತಮ ನಿದರ್ಶನವಾಗಿ ಈ ಪ್ರಕರಣ ನಡೆದಿದ್ದು ಬಡ ಕುಟುಂಬಕ್ಕೆ ಭೂಮಿ ಇಲ್ಲದಂತಾಗಿದೆ. ಭೂಮಿ ಕೇಳಲು ಹೋದ ಜಮೀನು ಮಾಲೀಕರ ಮೇಲೆ ಹಲ್ಲೆ ಪ್ರಕರಣ, ಜಾತಿ ನಿಂದನೆ ಪ್ರಕರಣ ಸೇರಿದಂತೆ ಹಲವು ಪ್ರಕರಣ ದಾಖಲಿಸಿ ತೊಂದರೆ ಕೊಡುತ್ತಿದ್ದಾರೆ ಲೋಕೇಶ್ ಮತ್ತು ವರಲಕ್ಷ್ಮಿ ಕುಟುಂಬಕ್ಕೆ ಆಧಾರವಾಗಿರುವ ಜಮೀನು ಕಸಿದುಕೊಂಡರೆ ಹೇಗೆ ಬಡವರ ಪರ ನಿಲ್ಲಬೇಕಾಗಿರುವ ಅಧಿಕಾರಿಗಳೇ ಬಡ ರೈತರ ವಿರುದ್ಧವಾದರೆ ಹೇಗೆ ಈ ಕೂಡಲೇ ತಪ್ಪಿತಸ್ಥರನ್ನು ವಶಕ್ಕೆ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

  • ಕೆಆರ್‌ಎಸ್ ಪಕ್ಷದ ಮುಖಂಡ ನಿಖಿಲ್ ಹಾಗೂ ಸಹಚರರ ಮೇಲೆ FIR : ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರ ಅಗ್ರಹ

    ದೇವನಹಳ್ಳಿ : ಜೀವನಪಾಯಕ್ಕಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿದ್ದೇವೆ ಆದರೆ ಕೆಆರ್‌ಎಸ್ ಪಕ್ಷದ ಮುಖಂಡ ನಿಖಿಲ್ ಹಾಗೂ ಸಹಚರರು ರಾತ್ರೋ ರಾತ್ರಿ ಬಂದು ನಮ್ಮನ್ನು ಬೆದರಿಸಿ ನಮ್ಮ ಮೇಲೆ ಹಲ್ಲೆ ಮಾಡಿ ಮೊಬೈಲ್ ಹಾಗೂ 25ಸಾವಿರ ಹಣವನ್ನು ಕಸಿದುಕೊಂಡಿದ್ದಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಲ್ಲೆಗೊಳಗಾದ ವ್ಯಕ್ತಿ ಮಧುಸೂದನ್ ಒತ್ತಾಯಿಸಿದ್ದಾರೆ.

     

     

    ತಾಲೂಕಿನ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಏಪ್ರಿಲ್ 06ರಂದು ರಂದು ಕಬ್ಬಿಣದ ಸರಳುಗಳನ್ನು ತುಂಬಿದ್ದ ಲಾರಿಯನ್ನು ಕೆ ಆರ್ ಎಸ್ ಪಕ್ಷದ ಮುಖಂಡ ನಿಖಿಲ್ ಹಾಗೂ ಸಹಚರರು ತಡೆದ್ದಿದ್ದ ವಿಡಿಯೋ ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಹರೆದಾಡಿತ್ತು . ಆದರೆ ಈಗ ಪ್ರಕರಣ ಬೇರೆ ಆಯಾಮ ಪಡೆದಿದೆ. ಕೇವಲ ಹಣಕ್ಕಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗಿದೆ ನಾವು ನ್ಯಾಯ ಬದ್ಧವಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಚಾಲಕರಿಗೆ ವಿಶ್ರಾಂತಿ ಪಡೆಯಲಷ್ಟೇ ಜಾಗ ನೀಡಿದ್ದು ಅದನ್ನು ನಿಖಿಲ್ ಹಾಗೂ ಸಹಚರರು ಬೇಕಂತಲೇ ಅಕ್ರಮದೊಂದೇ ಬಣ್ಣ ಕಟ್ಟಿ ಹಣ ದೋಚಲು ಸಂಚು ಮಾಡಿದ್ದರು ಎಂದು ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವ ಮಧುಸೂದನ್ ಆರೋಪಿಸಿದ್ದಾರೆ.

     

    ಈ ಕುರಿತು ಮಾತನಾಡಿರುವ ಅವರು ನಾನು ಬಿಸಿನೆಸ್ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ, ದೇವನಹಳ್ಳಿ ತಾಲೂಕಿನ ಕುಂದಾಣ ಸರ್ಕಲ್ ನಲಿರುವ ಜಯಶ್ರೀ ರವರಿಗೆ ಸೇರಿದ ಜಮೀನನು ಉಸ್ತುವಾರಿ ನೋಡಿಕೊಳ್ಳಲು ನನಗೆ ವಹಿಸಿದ್ದು, ಅದರಂತೆ ನಾನು ಜಮೀನನ್ನು ನೋಡಿಕೊಳ್ಳುತ್ತಿದ್ದೇನೆ , ಜಮೀನಿನಲ್ಲಿ ತೆಂಗಿನ ಮರಗಳಿದ್ದು, ತೋಟದ ಕೆಲಸಕ್ಕೆ 4 ಜನ ಕೂಲಿ ಆಳುಗಳನ್ನು ನೇಮಿಸಿಕೊಂಡಿದ್ದು, ಅದರಂತೆ ಕೂಲಿ ಆಳುಗಳಾದ ಪುನೀತ್, ರವಿ, ರಾಹುಲ, ಜಗನಾಥ್ ರವರು ಕೂಲಿ ಕೆಲಸ ಮಾಡಿಕೊಂಡು ಅಲ್ಲೇ ಇರುವ ಶೆಡ್ಡಿನಲ್ಲಿ ವಾಸವಿದ್ದಾರೆ ಈ ಜಮೀನಿನಲ್ಲಿ ಸ್ವಲ್ಪ ಭಾಗ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿದ್ದು.ಬೆಂಗಳೂರಿನ ಕಡೆಗೆ ಮಾಲುಗಳನ್ನು ತುಂಬಿಕೊಂಡು ಹೋಗುವ ಲಾರಿಯ ಚಾಲಕರುಗಳು ಊಟಕ್ಕೆಂದು ನಾನು ಮಾಡಿರುವ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಲಾರಿಗಳನ್ನು ನಿಲ್ಲಿಸಿ ಊಟ ಮಾಡಿಕೊಂಡು ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಂಡು ಹೋಗುತ್ತಾರೆ , ವಾಹನಗಳನ್ನು ಪಾರ್ಕಿಂಗ್ ಮಾಡಿದ್ದಕ್ಕೆ ನನಗೆ ಸ್ವಲ್ಪ ಹಣವನ್ನು ಕೊಡುತ್ತಾರೆ .

     

    ಅಂತೆಯೇ ಏಪ್ರಿಲ್ 06ರಂದು ಕಬ್ಬಿಣದ ಸರಳುಗಳನ್ನು ತುಂಬಿದ್ದ ಲಾರಿಯ ಚಾಲಕ ಪಾರ್ಕಿಂಗ್ ಸ್ಥಳಕ್ಕೆ ಬಂದು ಲಾರಿಯನ್ನು ನಿಲ್ಲಿಸಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದು, ಅದೇ ಸಮಯಕ್ಕೆ ಕಬ್ಬಿಣದ ಸರಳುಗಳನ್ನು ತುಂಬಿದ್ದ ಮತ್ತೊಂದು ಗೂಡ್ಸ್‌ ವಾಹನ ಪಾರ್ಕಿಂಗ್ ಸ್ಥಳಕ್ಕೆ ವಿಶ್ರಾಂತಿಗೆಂದು ಬಂದಿದ್ದು. ಈ ವೇಳೆ 6-7 ಜನ ಅಪರಿಚಿತರು ಕಾರುಗಳಲ್ಲಿ ನಮ್ಮ ಪಾರ್ಕಿಂಗ್ ಸ್ಥಳಕ್ಕೆ ಬಂದು ಊಟ ಮಾಡುತ್ತಿದ್ದ ನನಗೆ ಮತ್ತು ನಮ್ಮ ಕೂಲಿ ಆಳುಗಳನ್ನು ಕುರಿತು ಅವಾಚ್ಯ ಶಬ್ದಗಳಿಂದ ಬೈದು ತೆರಿಗೆ ಉಳಿಸಲು ನೀವು ಲಾರಿಯನ್ನು ಪಾರ್ಕಿಂಗ್ ಮಾಡಿಸಿಕೊಳ್ಳುತ್ತಿದ್ದೀರಾ, ಇಲಿ. ಅಕ್ರಮ ಮಾಡುತ್ತಿದ್ದೀರಾ ಎಂದು ಬೆದರಿಸಿ ನಮ್ಮ ಬಳಿ ಇದ್ದ ಮೊಬೈಲ್ ಮತ್ತು ಹಣವನ್ನು ಕಸಿದುಕೊಂಡಿದ್ದಾರೆ.

     

     

     

    ಅಕ್ರಮ ಗುಂಪು ಕಟ್ಟಿಕೊಂಡು ನಮ್ಮ ಪಾರ್ಕಿಂಗ್ ಸ್ಥಳಕ್ಕೆ ಬಂದು, ನನಗೆ ಮತ್ತು ನಮ್ಮ ಕೂಲಿ ಆಳುಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ನಮ್ಮ ಮೇಲೆ ಹಲ್ಲೆ ಮಾಡಿ, ಮೊಬೈಲ್ ಗಳನ್ನು ಮತ್ತು 25,000/- ರೂ ನಗದು ಹಣವನ್ನು ಕಸಿದುಕೊಂಡು ನಮಗೆ ಪ್ರಾಣ ಬೆದರಿಕೆ ಹಾಕಿರುವ ನಿಖಿಲ್, ನಾಗಿ ಹಾಗೂ ಅವರ ಸಹಚರರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಮನವಿ ಮಾಡುತ್ತೇನೆ ಎಂದರು

     

     

  • 14 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ತಪ್ಪದೇ ಎಚ್.ಪಿ.ವಿ ಲಸಿಕೆ ಹಾಕಿಸಿ: ಡಿಸಿ ಅನುರಾಧ

    ಗರ್ಭಕಂಠ ಕ್ಯಾನ್ಸರ್ ಬಾರದಂತೆ ತಡೆಯುವಲ್ಲಿ ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್.ಪಿ.ವಿ) ಲಸಿಕೆಯು ಅತ್ಯಂತ ಪರಿಣಾಮಕಾರಿಯಾಗಿದ್ದು 14 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ತಪ್ಪದೇ ಎಚ್.ಪಿ.ವಿ ಲಸಿಕೆ ಹಾಕಿಸಿ ಎಂದು ಜಿಲ್ಲಾಧಿಕಾರಿ ಡಾ.ಕೆ ಎನ್ ಅನುರಾಧ ಅವರು ತಿಳಿಸಿದ್ದಾರೆ.

     

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಹ್ಯೂಮನ್ ಪ್ಯಾಪಿಲೋಮ ವೈರಸ್ ಗರ್ಭಕಂಠ ಸೇರಿದಂತೆ ಅನೇಕ ಮಾದರಿಯ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಲಸಿಕೆ ಹಾಕಿಸಿಕೊಳ್ಳುವುದರಿಂದ ಕ್ಯಾನ್ಸರ್ ಸೇರಿದಂತೆ ಇತರ ಗಂಭೀರ ಕಾಯಿಲೆಗಳು ಬರದಂತೆ ತಡೆಯಬಹುದು’ ಎಂದರು.

     

    ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಜಿಲ್ಲೆಯಲ್ಲಿ ಎಚ್.ಪಿ.ವಿ ಲಸಿಕಾಕರಣ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಅಭಿಯಾನದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 14ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತವಾಗಿ ಹಾಕಲಾಗುತ್ತದೆ. ಪೋಷಕರು ತಪ್ಪದೇ ತಮ್ಮ 14 ರಿಂದ 15 ವರ್ಷ ವಯೋಮಿತಿಯೊಳಗಿರುವ ಮಕ್ಕಳಿಗೆ ಲಸಿಕೆ ಹಾಕಿಸಿ ಎಂದರು.

     

    ಜಿಲ್ಲೆಯಲ್ಲಿ ಸಮೀಕ್ಷಾ ವರದಿಯಂತೆ 14 ವರ್ಷದಿಂದ 15 ವರ್ಷದೊಳಗಿನ 12097 ಹೆಣ್ಣು ಮಕ್ಕಳಿದ್ದಾರೆ. ಇವರಿಗೆ ಲಸಿಕೆ ಹಾಕುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಈಗಾಗಲೇ 1803 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಇನ್ನುಳಿದ ಮಕ್ಕಳಿಗೆ ಕೂಡ ತಪ್ಪದೇ ಲಸಿಕೆ ಹಾಕಿಸಿ ಶೇಕಡ 100 ರಷ್ಟು ಪ್ರಗತಿ ಸಾಧಿಸಿ ಎಂದು ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

     

    *ಎಚ್.ಪಿ.ವಿ ಲಸಿಕೆಗಳು ಸುರಕ್ಷಿತವೇ?*

    ಹೌದು. ಎಲ್ಲಾ ಲಸಿಕೆಗಳಂತೆ, HPV ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಬಹಳ ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ. ಅಧ್ಯಯನಗಳು HPV ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಪ್ರದರ್ಶಿಸಿವೆ. 2006 ರಲ್ಲಿ ಪರವಾನಗಿ ಪಡೆದ ನಂತರ, 50 ಕೋಟಿಗೂ ಹೆಚ್ಚು ಡೋಸ್ಗಳ HPV ಲಸಿಕೆಗಳನ್ನು ವಿತರಿಸಲಾಗಿದೆ. ಪರವಾನಗಿ ನಂತರದ ಕಣ್ಗಾವಲು ಅನಾಫಿಲ್ಯಾಕ್ಸಿಸ್ನ ಅಪರೂಪದ ವರದಿಗಳನ್ನು ಹೊರತುಪಡಿಸಿ ಇಲ್ಲಿಯವರೆಗೆ ಯಾವುದೇ ಗಂಭೀರ ಸುರಕ್ಷತಾ ಸಮಸ್ಯೆಗಳನ್ನು ಪತ್ತೆಹಚ್ಚಿಲ್ಲ.

     

    *ಎಚ್.ಪಿ.ವಿ ಲಸಿಕೆ ಹೇಗೆ ಕೆಲಸ ಮಾಡುತ್ತದೆ?*

    ಇತರ ಯಾವುದೇ ಲಸಿಕೆಯಂತೆ, HPV ಲಸಿಕೆ (ವೈರಸ್ ತರಹದ ಕಣಗಳು -VLP ಗಳು), ಒಮ್ಮೆ ಪರಿಚಯಿಸಲ್ಪಟ್ಟ ನಂತರ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ, ನಿರ್ದಿಷ್ಟ ಕ್ಯಾನ್ಸರ್-ಉಂಟುಮಾಡುವ HPV ಪ್ರಕಾರಗಳಿಂದ ಭವಿಷ್ಯದ ಸೋಂಕಿನಿಂದ ರಕ್ಷಿಸುವ ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ.

     

    *ಎಚ್.ಪಿ.ವಿ ಲಸಿಕೆಗಳು ಎಷ್ಟು ಪರಿಣಾಮಕಾರಿ?*

    ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ 93-100% ರಷ್ಟು, HPV ಲಸಿಕೆಗಳು ಹೆಚ್ಚು ರೋಗನಿರೋಧಕ ಶಕ್ತಿಯನ್ನು ಹೊಂದಿವೆ. ಲಸಿಕೆಗೆ ಸೀರಮ್ ಶಾಸ್ತ್ರದ ಪ್ರತಿಕ್ರಿಯೆಯು ನೈಸರ್ಗಿಕ ಸೋಂಕಿನ ನಂತರದ ಪ್ರತಿಕ್ರಿಯೆಗಿಂತ ಹೆಚ್ಚು ಬಲವಾಗಿರುತ್ತದೆ.

     

    *ಎಚ್.ಪಿ.ವಿ ಲಸಿಕೆ ಎಲ್ಲಿ ಹಾಕಿಸಬೇಕು?*

    ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತವಾಗಿ ಹಾಕಲಾಗುತ್ತದೆ. ಪೋಷಕರು ತಪ್ಪದೇ ತಮ್ಮ 14 ರಿಂದ 15 ವರ್ಷ ವಯೋಮಿತಿಯೊಳಗಿರುವ ಮಕ್ಕಳಿಗೆ ಲಸಿಕೆ ಹಾಕಿಸಿ.

     

    ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಲಕ್ಕಾ ಕೃಷ್ಣ ರೆಡ್ಡಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ, ಸೀಮಾ ಮಾಬಳೆ, ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ. ನಾಗೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

  • ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ : ವದಂತಿಗಳಿಗೆ ಕಿವಿಗೊಡಬೇಡಿ :ಸಾರ್ವಜನಿಕರಿಗೆ ಕರೆ

    ರಾಜ್ಯದ ವಿವಿಧ ಆಟೋ ಗ್ಯಾಸ್ ಬಂಕ್‌ಗಳಲ್ಲಿ ಅನಿಲದ ದಾಸ್ತಾನು ಕೊರತೆಯಿದೆ ಎಂಬ ತಪ್ಪು ಮಾಹಿತಿಯ ಆಧಾರದ ಮೇಲೆ, ಕಳೆದ ಕೆಲವು ದಿನಗಳಿಂದ ಆಟೋ ಮಾಲೀಕರು ಮತ್ತು ಚಾಲಕರು ಬಂಕ್‌ಗಳ ಮುಂದೆ ಸುದೀರ್ಘ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಅಂಶ ಸರ್ಕಾರದ ಗಮನಕ್ಕೆ ಬಂದಿದೆ. ಈ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಕೇವಲ ವದಂತಿಗಳಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸ್ಪಷ್ಟಪಡಿಸಿದೆ.

     

    ​ಕೆಲವು ಖಾಸಗಿ ಆಟೋ ಗ್ಯಾಸ್ ಸರಬರಾಜು ಸಂಸ್ಥೆಗಳಲ್ಲಿ ಮಾತ್ರ ಅಲ್ಪಮಟ್ಟಿನ ಕೊರತೆ ಕಂಡುಬಂದಿದ್ದು, ಇದನ್ನು ಸರಿಪಡಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ IOC (ಇಂಡಿಯನ್ ಆಯಿಲ್), BPC (ಭಾರತ್ ಪೆಟ್ರೋಲಿಯಂ) ಮತ್ತು HPC (ಹಿಂದೂಸ್ತಾನ್ ಪೆಟ್ರೋಲಿಯಂ) ಮೂಲಕ ಹೆಚ್ಚಿನ ಪ್ರಮಾಣದ ಅನಿಲವನ್ನು ಪೂರೈಕೆ ಮಾಡಲಾಗುತ್ತಿದೆ.

     

    ​ಹಿಂದೆ ಈ ಮೂರು ಸಂಸ್ಥೆಗಳು ಸರಾಸರಿ 56.67 ಮೆಟ್ರಿಕ್ ಟನ್ ಆಟೋ ಗ್ಯಾಸ್ ಅನ್ನು ಸರಬರಾಜು ಮಾಡುತ್ತಿದ್ದವು. ಆದರೆ ಪ್ರಸ್ತುತ ಬೇಡಿಕೆಯನ್ನು ಪೂರೈಸಲು ಸರಬರಾಜು ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಸದ್ಯ ಪ್ರತಿದಿನ ಸರಾಸರಿ 83.58 ಮೆಟ್ರಿಕ್ ಟನ್ ಗ್ಯಾಸ್ ಅನ್ನು ಚಿಲ್ಲರೆ ಮಾರಾಟ ಮಳಿಗೆಗಳಿಗೆ ಪೂರೈಸಲಾಗುತ್ತಿದೆ.

     

    ಕಳೆದ ಐದು ದಿನಗಳ ಪೂರೈಕೆ ವಿವರ

    ಕಳೆದ ಏಪ್ರಿಲ್ 2 ರಿಂದ ಏಪ್ರಿಲ್ 6 ರವರೆಗಿನ ಅಂಕಿಅಂಶಗಳನ್ನು ಗಮನಿಸಿದರೆ, ಪೂರೈಕೆಯಲ್ಲಿ ಸ್ಥಿರತೆ ಇರುವುದು ಕಂಡುಬರುತ್ತದೆ. ಏಪ್ರಿಲ್ 2 ರಂದು 87.78 ಮೆಟ್ರಿಕ್ ಟನ್, ಏಪ್ರಿಲ್ 3 ರಂದು 86.05 ಮೆಟ್ರಿಕ್ ಟನ್, ಏಪ್ರಿಲ್ 4 ರಂದು 84.80 ಮೆಟ್ರಿಕ್ ಟನ್, ಏಪ್ರಿಲ್ 5 ರಂದು ಗರಿಷ್ಠ 94.11 ಮೆಟ್ರಿಕ್ ಟನ್ ಹಾಗೂ ಏಪ್ರಿಲ್ 6 ರಂದು 83.58 ಮೆಟ್ರಿಕ್ ಟನ್ ಅನಿಲವನ್ನು ಈ ಮೂರು ಪ್ರಮುಖ ಸಂಸ್ಥೆಗಳು ಯಶಸ್ವಿಯಾಗಿ ಪೂರೈಕೆ ಮಾಡಿವೆ.

     

    ​ಆದ್ದರಿಂದ, ರಾಜ್ಯದ ಆಟೋ ಮಾಲೀಕರು ಮತ್ತು ಚಾಲಕರು ಇಂತಹ ಯಾವುದೇ ಸುಳ್ಳು ವದಂತಿಗಳನ್ನು ನಂಬಬಾರದು ಮತ್ತು ಆತಂಕಕ್ಕೊಳಗಾಗಿ ಬಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲಬಾರದು ಎಂದು ಸರ್ಕಾರ ಮನವಿ ಮಾಡಿದೆ. ಅನಿಲ ಪೂರೈಕೆ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

  • ಫಾಕ್ಸ್ಕಾನ್ ಕಂಪನಿಯ ಸಿ ಇ ಆರ್ (CER) ಯೋಜನೆಯಡಿಯಲ್ಲಿ ಉದ್ಯಾನವನ ನಿರ್ಮಾಣ : ಪಾರ್ಕ್ ಉದ್ಘಾಟಿಸಿ ಶುಭ ಹಾರೈಸಿದ ಗಣ್ಯರು

    ದೊಡ್ಡಬಳ್ಳಾಪುರ : ನಗರದ 7ನೇ ವಾರ್ಡ್ ಕೆಂಪೇಗೌಡ ನಗರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪರಿಸರ ಉದ್ಯಾನವನ ಲೋಕಾರ್ಪಣೆ ಮಾಡಲಾಯಿತು.

     

    ಫಾಕ್ಸ್ಕಾನ್ ಕಂಪನಿಯ ಸಿ ಇ ಆರ್ (CER) ಯೋಜನೆಯಡಿ ಸುಮಾರು 5ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಉದ್ಯಾನವನವನ್ನು ತಾಲ್ಲೂಕಿನ ಶಾಸಕ ಧೀರಜ್ ಮುನಿರಾಜು, ನಗರಸಭೆ ಪೌರಯುಕ್ತ ಕಾರ್ತಿಕೇಶ್ವರ್, ನಗರಸಭೆ ಉಪಾಧ್ಯಕ್ಷ ಮಲ್ಲೇಶ್ ಹಾಗೂ ಫಾಕ್ಸ್ಕಾನ್ ಕಂಪನಿಯ ಅಧಿಕಾರಿಗಳು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

    ಈ ವೇಳೆ ಸ್ಥಳೀಯ ಸದಸ್ಯ ಹಾಗೂ ನಗರಸಭೆ ಉಪಾಧ್ಯಕ್ಷ ಮಲ್ಲೇಶ್ ಮಾತನಾಡಿ ಸಾರ್ವಜನಿಕರಿಗೆ ಸದಾ ಉಪಯೋಗವಾಗುವ ಪರಿಸರ ಸ್ನೇಹಿ ಅತ್ಯಾದುನಿಕ ಉದ್ಯಾನವನವನ್ನು ಫಾಕ್ಸ್ಕಾನ್ ಕಂಪನಿಯ ಸಿ ಇ ಆರ್ (CER) ಯೋಜನೆಯಡಿಯಲ್ಲಿ ನಿರ್ಮಿಸಿದ್ದು ಇಂದು ಲೋಕಾರ್ಪಣೆಗೊಂಡಿದೆ.ನಮ್ಮ ತಾಲ್ಲೂಕಿನಲ್ಲಿ ಸಾಕಷ್ಟು ಕಾರ್ಖಾನೆಗಳಿದ್ದು ತಮ್ಮ ಸಿ ಎಸ್ ಆರ್ ಹಾಗೂ ಸಿ ಇ ಆರ್ ಅನುದಾನಗಳನ್ನು ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

    ಈ ವೇಳೆ ಸ್ಥಳೀಯ ಮುಖಂಡರು, ಫಾಕ್ಸ್ಕಾನ್ ಕಂಪನಿಯ ಆಡಳಿತ ವರ್ಗ, ಸಾರ್ವಜನಿಕರು ಹಾಜರಿದ್ದರು.

     

     

     

  • ಪಾಲನಜೋಗಿಹಳ್ಳಿಯಲ್ಲಿ ನಿಲ್ಲದ ರಸ್ತೆ ಅಪಘಾತ : ಮತ್ತೆ ಆಕ್ಸಿಡೆಂಟ್ ಮಹಿಳೆಗೆ ಕಾಲು ಮುರಿತ 

    ದೊಡ್ಡಬಳ್ಳಾಪುರ: ಪಾಲನಜೋಗಿಹಳ್ಳಿಯಲ್ಲಿ ನಿನ್ನೆತಾನೇ ಕೆಎಸ್ ಆರ್ ಟಿಸಿ ಬಸ್ ಹರಿದು ಯುವಕ ಮೃತಪಟ್ಟಿದ್ದರು ಇಂದುಮತ್ತೆ ಅದೇ ರಸ್ತೆಯಲ್ಲಿ ವೇಗವಾಗಿ ಬಂದ ಬೈಕ್ ಮಹಿಳೆಗೆ ಗುದ್ದಿದೆ ಈ ಅಪಘಾತದಲ್ಲಿ ಮಹಿಳೆಯ ಕಾಲು ಮುರಿದಿದ್ದು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

     

    ಹೌದು ದೊಡ್ಡಬಳ್ಳಾಪುರ ತಾಲೂಕಿನ ಪಾಲನಜೋಗಹಳ್ಳಿ ರಸ್ತೆಯಲ್ಲಿ ಅಪಘಾತಗಳು ಸರ್ವೇ ಸಾಮಾನ್ಯವಾದಂತಿದೆ ಯಲಹಂಕ-ಹಿಂದೂಪುರ ರಸ್ತೆಯ ಪಾಲನಜೋಗಿಹಳ್ಳಿಯ ಗಣೇಶ್ ದೇವಸ್ಥಾನದ ಮುಂಭಾಗ ಈ ಘಟನೆ ಸಂಭವಿಸಿದ್ದು ಮಜಾನ್ ಬಿ (55) ಗಾಯಗೊಂಡ ಮಹಿಳೆ, ಬೈಕ್ ಆಟೋ ಮತ್ತು ಮಹಿಳೆಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

    ಆಟೋಗಾಗಿ ಕಾಯುತ್ತಿದ್ದ ಮಜಾನ್ ಬಿ (55) ರವರಿಗೆ ವೇಗವಾಗಿ ಬಂದ ಬೈಕ್ ಆಟೋ ಮತ್ತು ಮಹಿಳೆಗೆ ಡಿಕ್ಕಿ ಹೊಡೆದಿದೆ ಇದರ ಪರಿಣಾಮ ಮಹಿಳೆಯ ಕಾಲು ಮುರಿದಿದೆ.

     

    ಹಿಂದೂಪುರ-ಯಲಹಂಕ ಟೋಲ್ ರಸ್ತೆಯಾಗಿದ್ದು, ರಸ್ತೆಯ ನಿರ್ವಹಣೆಯನ್ನ ಟೋಲ್ ನವರು ಮಾಡುತ್ತಿದ್ದಾರೆ, ರಸ್ತೆಯಲ್ಲಿ ಸೂಚನ ಫಲಕ, ಜಿಬ್ರಾ ಕ್ರಾಸ್, ಸ್ಪೀಡ್ ಬ್ರೇಕರ್ ಹಾಕದೆ ಇರುವುದು ಅಪಘಾತಗಳಿಗೆ ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.