
ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ವೀರಯೋಧ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ರವರಿಗೆ ಗೌರವ ಸಮರ್ಪಣೆ ಮಾಡಲಾಯಿತು
ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಕಾಳಗದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ರವರ ಸ್ಮರಣೆಯನ್ನು ನೆನೆದು ವೀರಯೋಧನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೇಣದಬತ್ತಿ ಬೆಳಗಿಸಿ ಕನ್ನಡ ಪರ ಹೋರಾಟಗಾರರು ಭಾವುಕರಾದರು.
ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ನಂಜಪ್ಪ ಮಾತನಾಡಿ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಸೇರಿದಂತೆ ಸೇನೆಯಲ್ಲಿ ಹುತಾತ್ಮರಾದ ವೀರ ಯೋಧರು ಸದಾ ಅಮರರು ಅವರಿಗೆ ಸಾವಿಲ್ಲ ದೇಶಕ್ಕಾಗಿ ಮಡಿಯುವ ಯೋಧರು ನಿಜವಾದ ಹೀರೋಗಳು ಭಾರತ ಸರ್ಕಾರ ಈ ಸಾವಿಗೆ ತಕ್ಕ ಉತ್ತರ ನೀಡಬೇಕಿದೆ ಉಗ್ರರನ್ನು ಮಟ್ಟ ಹಾಕಬೇಕಿದೆ ಎಂದು ತಿಳಿಸಿದರು
ಕನ್ನಡ ಪರ ಹೋರಾಟಗಾರ್ತಿ ಪ್ರಮೀಳಾ ಮಹದೇವ್ ಮಾತನಾಡಿ ಸದಾ ದೇಶದ ರಕ್ಷಣೆಯಲ್ಲಿ ತೊಡಗಿರುವ ಯೋಧರು ನಮ್ಮ ಹೋರಾಟಕ್ಕೆ ಮಾದರಿ ಉಗ್ರರೊಂದಿಗೆ ಹೋರಾಡಿ ಹುತಾತ್ಮ ರಾಗಿರುವ ಕ್ಯಾಪ್ಟನ್ಎಂ ವಿ ಪ್ರಾಂಜಲ್ ರವರು ನವ ಪೀಳಿಗೆಗೆ ಮಾದರಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವುದು ದೇಶಕ್ಕಾಗಿ ಶ್ರಮಿಸುವುದು ದೇಶ ಪ್ರೇಮದ ಕಿಚ್ಚು ಪ್ರತಿಯೊಬ್ಬರಲ್ಲೂ ಮೂಡಲಿ ಎಂದು ತಿಳಿಸಿದರು
ಈ ಸಂದರ್ಭದಲ್ಲಿಜಿಲ್ಲಾ ಅಧ್ಯಕ್ಷ ಎ.ನಂಜಪ್ಪ, ನಾಗರಾಜ್, ಪ್ರಮೀಳಮಹದೇವ್, ಪ್ರವೀಣ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು