
ದೊಡ್ಡಬಳ್ಳಾಪುರ : ಯುವ ಸಮುದಾಯವನ್ನು ಮುನ್ನಡೆಸುವ ಕಾರ್ಯಕ್ಕೆ ನನ್ನನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ ಅಂತೆಯೇ ಜವಾಬ್ದಾರಿಯು ಹೆಚ್ಚಿದೆ. ಮುಂದೆ ನಮ್ಮ ಸಮುದಾಯದ ವತಿಯಿಂದ ತಾಲೂಕಿನಾದ್ಯಂತ ಉತ್ತಮ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿಗೆ ತಾಲೂಕಿನಾದ್ಯಂತ ಶ್ರಮಿಸಿ ನೂತನ ಸದಸ್ಯರ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಸಮಿತಿಯ ಬಲವನ್ನು ಹೆಚ್ಚಿಸಲಾಗುವುದು , ನಮ್ಮ ಸಮುದಾಯಕ್ಕೆ ಸರ್ಕಾರದ ವತಿಯಿಂದ ಸಿಗಬೇಕಿರುವ ಸೌಲತ್ತುಗಳನ್ನು ಸೂಕ್ತ ರೀತಿಯಲ್ಲಿ ಸೂಕ್ತ ಸಮಯಕ್ಕೆ ತಲುಪಿಸುವ ಪ್ರಯತ್ನ ಮಾಡಲಾಗುವುದು , ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಮೂಲಕ ಸಮಿತಿಯ ಗೌರವವನ್ನು ಮತ್ತಷ್ಟು ಹೆಚ್ಚಿಸಲಾಗುವುದು .ಎಂದು ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿಯ ನೂತನ ಅಧ್ಯಕ್ಷರಾದ ಚಂದ್ರು ಶೆಟ್ಟಿ ತಿಳಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ಲಕ್ಷ್ಮಿ ಚಿತ್ರಮಂದಿರ ಸಮೀಪವಿರುವ ಗಾಣಿಗ ಸಮುದಾಯ ಕಚೇರಿಯಲ್ಲಿ ಸಮಿತಿಯ ಸರ್ವ ಸದಸ್ಯರ ಅಭಿಪ್ರಾಯದಂತೆ ಅವಿರೋಧವಾಗಿ ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಕನ್ನಡಪರ ಹೋರಾಟಗಾರರು ಹಾಗೂ ಸಮಾಜ ಸೇವಕರಾದ ಚಂದ್ರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಸಮಿತಿ ಸಭೆಯ ನಂತರ ಮಾತನಾಡಿದ ಅವರು ಇಂದು ಲಭಿಸಿರುವ ಅವಕಾಶ ನನಗೆ ಅನಿರೀಕ್ಷಿತ. ಸರ್ವ ಸದಸ್ಯರ ಅನುಮೋದನೆಯೊಂದಿಗೆ ಅವಿರೋಧವಾಗಿ ಗಾಣಿಗ ಸಮುದಾಯದ ಯುವ ಸೇವಾ ಸಮಿತಿಯ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ತಾಲ್ಲೂಕಿನಲ್ಲಿ ನಮ್ಮ ಗಾಣಿಗ ಸಮುದಾಯಕ್ಕೆ ಸಮಸ್ಯೆಗಳು ಸಾಕಷ್ಟು ಇದೆ ಸಾಧ್ಯವಾದಷ್ಟು ಪರಿಹಾರ ಕೊಡುವುದೇ ನಮ್ಮ ಸಮಿತಿಯ ಮೊದಲ ಆದ್ಯತೆ ಸಮುದಾಯ ಮುನ್ನಡೆಸುವ ಜವಾಬ್ದಾರಿ ಬಹಳ ದೊಡ್ಡದು, ತಾಲ್ಲೂಕಿನ ಯುವ ಪೀಳಿಗೆಗೆ ನಮ್ಮ ಸಮುದಾಯದ ಇತಿಹಾಸ ತಿಳಿಸುವ ಮೂಲಕ ಮುಂದೆ ಸಮುದಾಯವನ್ನು ಮತ್ತಷ್ಟು ಬಲಿಷ್ಠತೆಯಿಂದ ಕಟ್ಟಲು ಸಮಿತಿಯ ವತಿಯಿಂದ ಸೇವಾ ಕಾರ್ಯಗಳನ್ನು ನಡೆಸಲು ಸರ್ವಾನುಮತಿಯಿಂದ ಶ್ರಮಿಸುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಿತಿಯ ಕಾರ್ಯದರ್ಶಿಗಳಾದ ಪ್ರಸನ್ನ ಕುಮಾರ್ ಮಾತನಾಡಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದಿದ್ದು ತಾಲೂಕಿನ ಮುಖಂಡರು ಸಮಾಜ ಸೇವಕರು ಕನ್ನಡಪರ ಹೋರಾಟಗಾರರಾದ ಚಂದ್ರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಸಮುದಾಯದ ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶನ ದೊರೆಯುವಲ್ಲಿ ಯಾವುದೇ ಸಂಶಯವಿಲ್ಲ. ಸರ್ವ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸಲ್ಲಿಸುವ ಮೂಲಕ ನೂತನ ಅಧ್ಯಕ್ಷರ ಆಯ್ಕೆ ನಡೆದಿದ್ದು ಸಮಿತಿಯ ಬೆಳವಣಿಗೆಗೆ ಅನುಕೂಲಕರವಾಗಿದೆ . ತಾಲೂಕಿನಾದ್ಯಂತ ತಮ್ಮ ಹೋರಾಟಗಳ ಮೂಲಕ ಯುವ ಪೀಳಿಗೆಗೆ ಹತ್ತಿರವಾಗಿರುವ ಚಂದ್ರಶೆಟ್ಟಿಯವರು ಇನ್ನು ಮುಂದೆ ಉತ್ತಮ ಸೇವಾ ಕಾರ್ಯಗಳ ಮೂಲಕ ನಮ್ಮ ಸಮುದಾಯವನ್ನು ಕೂಡ ನಡೆಸಲಿದ್ದಾರೆ . ಈಗಾಗಲೇ ಸಮುದಾಯದ ಬೆಳವಣಿಗೆಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು ಅತಿ ಶೀಘ್ರವಾಗಿ ತರಲಾಗುವುದು ಎಂದು ತಿಳಿಸಿದರು
ನೂತನ ಪದಾಧಿಕಾರಿಗಳ ಪಟ್ಟಿ ಇಂತಿದೆ:
ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿಯ ನೂತನ ತಾಲ್ಲೂಕುಅಧ್ಯಕ್ಷರಾಗಿ ಚಂದ್ರ ಶೆಟ್ಟಿ, ಉಪಾಧ್ಯಕ್ಷರಾಗಿ ಮಧುಚಂದ್ರ, ಕಾರ್ಯದರ್ಶಿಗಳಾಗಿ ಪ್ರಸನ್ನ ಕುಮಾರ್ ,ಸಹ ಕಾರ್ಯದರ್ಶಿಗಳಾಗಿ ವೆಂಕಟೇಶ್ ವಿ, ವಿಜಯ್ ಕುಮಾರ್ , ಖಜಾಂಚಿಗಳಾಗಿ ಲಕ್ಷ್ಮಣ್, ಸಲಹೆಗಾರರಾಗಿ ಸಂತೋಷ್ ತೂಬಗೆರೆ, ಸಂಚಾಲಕರಾಗಿ ಗೋಪಾಲಕೃಷ್ಣ ,ಸಹ ಸಂಚಾಲಕರಾಗಿ ಮಲ್ಲಿಕಾರ್ಜುನ್, ಆಯ್ಕೆಯಾಗಿದ್ದಾರೆ ಎಂದು ಸಮಿತಿಯು ತಿಳಿಸಿದೆ
ಈ ಸಂದರ್ಭದಲ್ಲಿ ನಿರ್ದೇಶಕರಾದ ತೂಪಗೆರೆ ಸುಬ್ರಮಣಿ. ಜೆ. ವಿ. ಸುಬ್ರಮಣಿ,ಜೆ. ಆರ್. ರಾಜು,ಚಲಪತಿ ಭಾಶೆಟ್ಟಳ್ಳಿ,ಅಜಯ್ ಎನ್ ಸೇರಿದಂತೆ ತಾಲ್ಲೂಕಿನ ಗಾಣಿಗ ಸಮುದಾಯದ ಮುಖಂಡರು, ಸಮಿತಿಯ ಪದಾಧಿಕಾರಿಗಳು, ಚಂದ್ರ ಶೆಟ್ಟಿ ಅವರ ಅಭಿಮಾನಿ ಬಳಗ ಉಪಸ್ಥಿತರಿದ್ದರು.