
ದೊಡ್ಡಬಳ್ಳಾಪುರದಲ್ಲಿ ಪ್ರಪ್ರಥಮ ಬಾರಿಗೆ ನಮ್ಮಲ್ಲಿ 2 ಅಲ್ಟ್ರಾ ಸೌಂಡ್ ಯಂತ್ರಗಳನ್ನು ಒಳಗೊಂಡಿದೆ 2ಡಿ 3ಡಿ ಹಾಗೂ 4ಡಿ ಸೇವೆಗಳು ನಮ್ಮಲ್ಲಿ ಲಭ್ಯವಿದ್ದು , 300 mA ಕ್ಷ – ಕಿರಣ ಯಂತ್ರ ಸೇರಿದಂತೆ ಸಂಪೂರ್ಣ ಸ್ವಯಂ ಚಾಲಿತ ಲ್ಯಾಬ್ ವ್ಯವಸ್ಥೆ ಹಾಗೂ 32 ಸ್ಲೈಸ್ ಸಿಟಿ ಸ್ಕ್ಯಾನ್ ಯಂತ್ರ ಹೊಂದಿರುವ ನಮ್ಮ ಶ್ರೇಷ್ಠ ಡಯಾಗ್ನೋಸ್ಟಿಕ್ಸ್ ತಾಲ್ಲೂಕಿನ ಸಾರ್ವಜನಿಕರಿಗೆ ಕಡಿಮೆ ಸಮಯದಲ್ಲಿ ಉತ್ತಮ ಹಾಗೂ ನಿಖರ ಪಲಿತಂಶ ನೀಡುವ ಸಾಮರ್ಥ್ಯ ಹೊಂದಿದ್ದೇವೆ ಎಂದು ಡಾಕ್ಟರ್. ರಕ್ಷಿತ್ ತಿಳಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ನೂತನವಾಗಿ ಸೇವೆಯನ್ನು ಪ್ರಾರಂಭಿಸಿರುವ ಶ್ರೇಷ್ಠ ಡಯಾಗ್ನೋಸ್ಟಿಕ್ಸ್ ಅನ್ನು ಉದ್ಘಟಿಸಿ ಮಾತನಾಡಿದ ಅವರು ಎ ಯೂನಿಟ್ ಆಫ್ ಧನ್ವಂತರಿ ಹೆಲ್ತ್ ಸರ್ವಿಸಸ್ ಅಡಿಯಲ್ಲಿ ನಮ್ಮ ಸಂಸ್ಥೆ ಪ್ರಾರಂಭಿಸಿದ್ದು ನಮ್ಮಲ್ಲಿ 2ಡಿ ಎಕೋ, ಸಿಟಿ ಸ್ಕ್ಯಾನ್ ಮತ್ತು ಎಂ ಆರ್ ಐ ,ಯು, ಎಸ್. ಜಿ ರಿದಂತೆ ಹೈಟೆಕ್ ಲ್ಯಾಬ್ ಸೇವೆಗಳು ನಮ್ಮಲ್ಲಿ ಲಭ್ಯವಿದ್ದು ಅನುಭವಿ ವೈದ್ಯರ ತಂಡ ಹಾಗೂ ನುರಿತ ಸಿಬ್ಬಂದಿಗಳೊಂದಿಗೆ ಸೇವೆ ಸಲ್ಲಿಸಲ್ಲಿದ್ದೇವೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು , ಸಾರ್ವಜನಿಕರ ಅನುಕೂಲಕ್ಕಾಗಿ ನಮ್ಮಲ್ಲಿ ಇಬ್ಬರು ರೇಡಿಯೋಲಜಿಸ್ಟ್ ನೇಮಿಸಲಾಗಿದೆ ಹಾಗೂ ಪರೀಕ್ಷೆಗೆ ಬಂದ ಸಾರ್ವಜನಿಕರ ಸಹಾಯಕ್ಕೆ ವಿಶೇಷ ಪಿ ಆರ್ ಓ ಗಳನ್ನು ನೇಮಿಸಲಾಗಿದೆ ಮೂಲಭೂತ ಸೌಕರ್ಯಗಳಲ್ಲಿ ಯಾವುದು ಕೊರತೆ ಇಲ್ಲದಂತೆ ಸಾರ್ವಜನಿಕರಿಗೆ ಅತ್ಯುತ್ತಮ ರೀತಿಯ ಸೇವೆ ಒದಗಿಸಲು ನಾವು ಶ್ರಮಿಸಲಿದ್ದೆವೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಡಾಕ್ಟರ್.ವಿನಯ್,ಡಾಕ್ಟರ್. ದತ್ತ ಎಂ. ತೂಗಲೂರೆ ,ಡಾಕ್ಟರ್. ಸಚಿನ್,ಡಾಕ್ಟರ್. ಸಂಗಮೇಶ್ ಎಂ.ತೂಗಲೂರೆ, ಎಂ. ಜಿ ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು