ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡ ಜೀ ಯವರ ಅದೇಶದಂತೆ ನಮ್ಮ ರಾಜ್ಯದ ಪ್ರತಿಯೊಂದು ಬೂತ್ ಗಳಿಗೆ ಭೇಟಿ ನೀಡುವ ಸಲುವಾಗಿ ಇದು ಮದುರೆ ಗ್ರಾಮದ ಗ್ರಾಮಚಲೋ ಅಭಿಯಾನದಲ್ಲಿ ಪಾಲ್ಗೊಂಡಿದ್ದೇವೆ.ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಕೇಂದ್ರ ಸರ್ಕಾರ ನೀಡಿರುವ ಯೋಜನೆಗಳ ಅನುಕೂಲಗಳನ್ನು ಪಡೆದುಕೊಂಡಿರುವ
ಪಲಾನುಭವಿಗಳ ಭೇಟಿ ಮಾಡುವುದಾಗಿದೆ ಹಾಗೂ ಪಕ್ಷದ ಕಾರ್ಯಕರ್ತರು ಪ್ರತಿ ಗ್ರಾಮಗಳ ಪ್ರತಿ ಮನೆ ಮನೆಗೆ ಭೇಟಿ ನೀಡಿ ಮೋದಿ ಜೀ ಯವರು ನೀಡಿರುವ ಯೋಜನೆಗಳನ್ನು ಕುರಿತು ಮಾಹಿತಿ ನೀಡಲಿದ್ದೆವೆ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ತಿಳಿಸಿದರು.

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಗ್ರಾಮದಲ್ಲಿ ಆಯೋಜನೆ ಮಾಡಲಾಗಿದ್ದ ಗ್ರಾಮಚಲೋ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದೇಶದ ಮಹಿಳೆಯರ,ಯುವಕರ, ರೈತರಪರವಾಗಿ ನೀಡಿರುವ ಯೋಜನೆಗಳ ಸದ್ಭಾಳಕೆ ಮಾಡಿಕೊಂಡಿರುವ ಹಲವಾರು ಪಲಾನುಭವಿಗಳನ್ನು ಭೇಟಿ ಮಾಡುವ ಉದ್ದೇಶ ನಮ್ಮ ಈ ಗ್ರಾಮಚಲೋ ಅಭಿಯನ. ದೇಶದಲ್ಲಿ ಮುಖ್ಯವಾಗಿ
ಬಡವರು, ರೈತರು, ಯುವಕರು, ಮಹಿಳೆಯರು ಎಂಬ ನಾಲ್ಕು ಜಾತಿಗಳಿದ್ದು ಸನ್ಮಾನ್ಯ ಮೋದಿ ಜೀ ನೀಡಿರುವ ಯೋಜನೆಗಳು ಈ ಸಮುದಾಯಗಳ ಮೇಲೆ ಕೇಂದ್ರೀಕೃತವಾಗಿದ್ದು. ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜೀ ಯವರು ಸದಾ ದೇಶದ ಅಭಿವೃದ್ಧಿಯ ತಪ್ಪಾಸು ಮಾಡುತ್ತಿದ್ದಾರೆ. ಗ್ರಾಮಚಲೋ ಅಭಿಯಾನದ ಮೂಲಕ ರಾಜ್ಯದ ಎಲ್ಲಾ ಬೂತ್ ಗಳಿಗೆ ಭೇಟಿ ನೀಡಿ ಬೂತ್ ಮಟ್ಟದ ನಾಯಕರಿಗೆ ವಿಶೇಷ ಟಾಸ್ಕ್ ನೀಡಲಾಗುತ್ತಿದೆ . ಪ್ರತಿ ಬೂತ್ ನಲ್ಲಿ 100ರಿಂದ 150ಕ್ಕೂ ಹೆಚ್ಚಿನ ಮತಗಳನ್ನು ನೀಡುವ ಟಾಸ್ಕ್ ನೀಡಲಾಗುತ್ತಿದ್ದು. ಲೋಕಸಭಾ ಚುನಾವಣೆಯಲ್ಲಿ
ರಾಜ್ಯದ ಎಲ್ಲಾ ಬೂತ್ ಗಳಲ್ಲಿ ಗೆಲುವು ಸಾಧುಸುವುದೇ ನಮ್ಮ ಉದ್ದೇಶ

ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನೆಡೆಸಿದ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವು ಅನುದಾನಗಳ ಹಂಚಿಕೆಯಲ್ಲಿ ಮಲತಾಯಿ ದೋರಣೆ ಮಾಡುತ್ತಿದ್ದು ಕಾಂಗ್ರೆಸ್ ನಿಂದಾಗಿ ನಮ್ಮ ಕರ್ನಾಟಕ ರಾಜ್ಯವು ಅಭಿವೃದ್ಧಿ ಶೂನ್ಯ ರಾಜ್ಯವಾಗಿದೆ,ಕಾಂಗ್ರೆಸ್ ನೀಡಿರುವ ಗ್ಯಾರೆಂಟಿಗಳು ಕೇವಲ ಘೋಷಣೆಯಾಗಿ ಉಳಿದಿದೆ ಇನ್ನೂ ರಾಜ್ಯದ ಹಲವು ಸಾರ್ವಜನಿಕರಿಗೆ ಯಾವುದೇ ಗ್ಯಾರೆಂಟಿ ಯೋಜನೆಗಳು ತಲುಪಿಲ್ಲ, ಆಶಾಕಾರ್ಯಕರ್ತೆಯರಿಗೆ ನೀಡಿದ ವೇತನ ಹೆಚ್ಚಳ ಭರವಸೆಯೂ ಇನ್ನೂ ಭಾರವಸೆಯಾಗಿಯೇ ಉಳಿದಿದೆ ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ನುಡಿದಂತೆ ನೆಡೆದಿದ್ದೆವೆ ಎಂದು ಹೆಮ್ಮೆಯಿಂದ ಸ್ವಯಂ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ , ಬರಗಾಲದ ಸಂದರ್ಭದಲ್ಲಿ ರೈತರಿಗೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ನಾಟಕೀಯವಾಗಿ ಕೇಂದ್ರ ಸರ್ಕಾರದ ವಿರುದ್ಧ ದುರುತ್ತಾ ದೆಹಲಿಯಲ್ಲಿ ಮೋದಿ ಜೀ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ರಾಜ್ಯದ ಜನತೆಗೆ ಮೋಸಮಾಡುತ್ತಿದ್ದಾರೆ ಎಂದು ಆರೋಪಿಸಿದರು
ಜಿ ಎಸ್ ಟಿ ವಿಚಾರದಲ್ಲಿ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿರುವ ಮುಖ್ಯಮಂತ್ರಿಗಳು ಒಂದು ವಿಷಯವನ್ನು ಅರಿಯ ಬೇಕಿದೆ ಅದೇನೆಂದರೆ ನರೇಂದ್ರ ಮೋದಿ ಜೀ ಯವರು ಕೇವಲ ಕರ್ನಾಟಕ ರಾಜ್ಯಕ್ಕೆ ಪ್ರಧಾನ ಮಂತ್ರಿಗಳಲ್ಲ ಅವರು ದೇಶದ ಎಲ್ಲಾ ರಾಜ್ಯಗಳಿಗೂ ಪ್ರಧಾನ ಮಂತ್ರಿಗಳಾಗಿದ್ದಾರೆ ಎಲ್ಲೂ ಇಲ್ಲದ ಪ್ರತಿಭಟನೆ ನಮ್ಮ ರಾಜ್ಯದಲ್ಲೇ ಏಕೆ ಎಂದು ಪ್ರಶ್ನಿಸಿದರು. ಬಿಜೆಪಿ ಪಕ್ಷದ ಮೇಲೆ ಚುನಾವಣಾ ಸಮಯದಲ್ಲಿ ಅನೇಕ ಆರೋಪಗಳನ್ನು ಮಾಡಿದ್ದ ಕಾಂಗ್ರೆಸ್ ಮಾತನ್ನು ನಂಬಿ ರಾಜ್ಯದ ಜನತೆ ಮೋಸ ಹೋಗಿದ್ದಾರೆ ಆದರೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ರಾಜ್ಯದಲ್ಲಿ ವಿಶೇಷವಾಗಿದ್ದು ರಾಜ್ಯದ 28 ಕ್ಷೇತ್ರ ಗೆಲುವು ಸಾಧಿಸುವ ಭರವಸೆ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು,ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಆರ್ ವಿಶ್ವನಾಥ್, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷರಾದ ರಾಮ ಕೃಷ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ವೆಂಕಟೇಶ್ (ಬಂತಿ ), ಮುಖಂಡರಾದ ವಾಣಿ ನಂದಕುಮಾರ್, ರಂಗರಾಜು ಸೇರಿದಂತೆ ಹಲವಾರು ಉಪಸ್ಥಿತರಿದ್ದರು
