
ದೊಡ್ಡಬಳ್ಳಾಪುರ : ಸ್ಥಳೀಯ ಯುವಕರಲ್ಲಿ ಕ್ರೀಡಾಮನೋಭಾವ ಹೆಚ್ಚಿಸುವ ಉದ್ದೇಶದಿಂದ ಕಬ್ಬಡಿ ಕ್ರೀಡೆಯನ್ನು ಆಯೋಜನೆ ಮಾಡಲಾಗಿದೆ. ಇಂದಿನ ಪೀಳಿಗೆ ಕೇವಲ ಮೊಬೈಲ್ ಅನ್ನು ಹಿಡಿದು ವಿಡಿಯೋ ಗೇಮ್ ಆಡುವುದರಲ್ಲಿ ತಲ್ಲಿನರಾಗಿದ್ದಾರೆ ಅಂತಹ ಮಕ್ಕಳಿಗೆ ದೇಸಿ ಕ್ರೀಡೆಗಳ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿರುತ್ತದೆ ಎಂದು ದೊಡ್ಡಬಳ್ಳಾಪುರ ತಾಲೂಕಿನ ಮಾಜಿ ಶಾಸಕರಾದ ಟಿ ವೆಂಕಟರಮಣಯ್ಯ ತಿಳಿಸಿದರು
ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ದೊಡ್ಡಬಳ್ಳಾಪುರ ತಾಲ್ಲೂಕು ಅಮೇಜಿಂಗ್ ಕಬ್ಬಡಿ ಅಸೋಸಿಯೇಷನ್ ವತಿಯಿಂದ ಕಬ್ಬಡಿ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು. ಕಬ್ಬಡಿ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಯುವಕರಲ್ಲಿ ಕ್ರೀಡಾ ಮಾಡುವ ಹೆಚ್ಚಿಸುವ ಸಲುವಾಗಿ ಎಂಎಸ್ ರಾಮಯ್ಯ ಅವರ ಮೊಮ್ಮಗ ರಕ್ಷಾ ರಾಮಯ್ಯ ರವರು ಸ್ಥಳೀಯರ ಮನವಿಗೆ ಸ್ಪಂದಿಸಿ ಈ ಕಬ್ಬಡಿ ಪಂದ್ಯಾವಳಿಯು ಅದ್ದೂರಿಯಾಗಿ ನಡೆಯಲು ಕಾರಣಕರ್ತರಾಗಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲ ತಂಡಗಳಿಗೂ ಶುಭವಾಗಲಿ ಸ್ಪರ್ಧೆಯಲ್ಲಿ ಗೆದ್ದು ಪ್ರಥಮ ಸ್ಥಾನ ಗಳಿಸಿ ಬಹುಮಾನ ಪಡೆಯುವ ಸ್ಪರ್ಧಾರ್ಥಿಗಳು ಮುಂದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ದೊಡ್ಡಬಳ್ಳಾಪುರದ ಹೆಸರನ್ನು ಪ್ರತಿನಿಧಿಸುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯ ಪ್ರಬಲ ಆಕಾಂಕ್ಷಿ ರಕ್ಷಾ ರಾಮಯ್ಯ ಮಾತನಾಡಿ ಯುವಕರ ಆರೋಗ್ಯ ಕಾಪಾಡಲು ಹಾಗೂ ಗ್ರಾಮೀಣ ಕ್ರೀಡೆಗಳನ್ನು ಕುರಿತು ಯುವಕರಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಕಾರ್ಯಕ್ರಮ ಆಯೋಜನೆ ಮಾಡಿದ್ದು ಮುಂದಿನ ದಿನಗಳಲ್ಲಿ ನಮ್ಮ ಫೌಂಡೇಶನ್ ವತಿಯಿಂದ ಗ್ರಾಮೀಣ ಕ್ರೀಡೆಗಳನ್ನು ಮತ್ತಷ್ಟು ಪ್ರೋತ್ಸಾಹಿಸುವ ಸಲುವಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಎಂದರು. ಈ ಕಾರ್ಯಕ್ರಮದ ಶಕ್ತಿ ಮಾಜಿ ಶಾಸಕರಾದ ವೆಂಕಟರಮಣಯ್ಯ ಮತ್ತು ಬೆಂಬಲಿಗರು ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬಂದಿದೆ. ಎಂದು ತಿಳಿಸಿದರು
ಕಾರ್ಯಕ್ರಮದ ಆಯೋಜಕ ಮಂಜುನಾಥ್ ಮಾತನಾಡಿ ಸ್ಪರ್ಧೆಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು ತಂಡಗಳ ಮಾಲೀಕರು ಅತ್ಯಂತ ಶ್ರಮಪಟ್ಟಿದ್ದಾರೆ. ಸ್ಪರ್ಧೆಯಲ್ಲಿ ಜಯಗಳಿಸಿದ ಮೊದಲ ತಂಡಕ್ಕೆ ಪ್ರತಿಷ್ಠಿತ ಎಂ ಎಸ್ ಆರ್ ಕಪ್ ನೊಂದಿಗೆ 55,555 ರೂಗಳ ನಗದು ಬಹುಮಾನ , ದ್ವಿತೀಯವಾಗಿ ಎಂಎಸ್ಆರ್ ಕಪ್ ಸಹಿತ 33,333 ರೂ ನಗದು ಬಹುಮಾನ, ತೃತೀಯವಾಗಿ ಎಮ್ ಎಸ್ ಆರ್ ಕಪ್ ಸಹಿತ 11,111 ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು. ಗ್ರಾಮೀಣ ಕ್ರೀಡೆಗಳ ಉತ್ತೇಜನಕ್ಕಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಯುವಕರು ತುಂಬಾ ಉತ್ಸಾಹಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಮಗೆ ಮತ್ತಷ್ಟು ಸಂತೋಷ ತಂದಿದೆ ಕಾರ್ಯಕ್ರಮದ ಆಯೋಜನೆಗೆ ಎಂ ಎಸ್ ರಾಮಯ್ಯ ಫೌಂಡೇಶನ್ ಸಹಕರಿಸಿದ್ದು ಮತ್ತಷ್ಟು ಸಂತಸ ಉಂಟುಮಾಡಿದೆ ಎಂದು ತಿಳಿಸಿದರು
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಡ್ಯಾಶಿಂಗ್ ಬುಲ್ಸ್ ತಂಡ ಪಡೆದಿದ್ದು ದ್ವಿತೀಯ ಸ್ಥಾನವನ್ನು ಸೂಪರ್ ಲಯನ್ಸ್ ತೃತೀಯ ಸ್ಥಾನವನ್ನು ಸ್ಟಾರ್ ಹಂಟರ್ಸ್ ಅಂತಯೇ ಚತುರ್ಥ ಸ್ಥಾನವನ್ನು ಗ್ರೀನ್ ಫೈಟರ್ಸ್ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾರ್ಯಕ್ರಮದಲ್ಲಿ ಆಯೋಜಕರಾದ ಮಂಜುನಾಥ್, ಹರೀಶ್, ಪರಮೇಶ, ಪುಟ್ಟರಾಜು, ಮನು, ಶ್ರೀ ಹರಿ, ಮುಬಾರಕ್, ಮಧುಸೂಧನ್, ಹಾಗೂ ಕಾಂಗ್ರೆಸ್ ಮುಖಂಡರಾದ ಶಿವಶಂಕರ್, ಬೈರೇಗೌಡ, ಅಂಜನಮೂರ್ತಿ, ವಿಶ್ವಾಸ್ ಗೌಡ,ಸೇರಿದಂತೆ ತಾಲೂಕಿನ ಹಲವು ಗಣ್ಯರು ಭಾಗವಹಿಸಿದ್ದರು