
ಸೋಮವಾರ ದೊಡ್ಡಬಳ್ಳಾಪುರ ನಗರ ದೇವತೆ ಮುತ್ಯಾಲಮ್ಮ ಹಾಗೂ ಗ್ರಾಮ ದೇವತೆ ದೊಡ್ಡಮ್ಮ ಹಾಗೂ ಆಂಜನೇಯ ದೇವರಿಗೆ ವಿಶೇಷವಾಗಿ ಪೂಜೆ ಸಲ್ಲಿಸುವ ಮೂಲಕ ನಮ್ಮ ಗ್ರಾಮಕ್ಕೆ ಕರೆತರಲಾಗಿದ್ದು. ಮಂಗಳವಾರ ಗ್ರಾಮದ ಮಹಿಳೆಯರಿಂದ ದೇವರಿಗೆ ಆರತಿಗಳನ್ನು ಶ್ರದ್ದಾ ಭಕ್ತಿಯಿಂದ ಮಾಡುವ ಮೂಲಕ ಗ್ರಾಮಸ್ತರು ಸಂಭ್ರಮಿಸಿದ್ದಾರೆ ಇಂದು ದೇವರ ಉತ್ಸವ ಮೂರ್ತಿಗಳನ್ನು ಗ್ರಾಮದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡುವ ಮೂಲಕ ತಳಗವಾರ ಗ್ರಾಮದ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಸ್ಥಳೀಯ ಮುಖಂಡರಾದ ತಳಗವಾರ ಪ್ರದೀಪ್ ತಿಳಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ತಳಗವಾರ ಗ್ರಾಮದಲ್ಲಿ ಮೂರು ದಿನಗಳ ಅದ್ದೂರಿ ಜಾತ್ರ ಮಹೋತ್ಸವ ನೆಡೆಯುತ್ತಿದ್ದು. ಜಾತ್ರಮಹೋತ್ಸವಕ್ಕೆ ಎಂದಿನಂತೆ ದೊಡ್ಡಬಳ್ಳಾಪುರ ನಗರ ದೇವತೆ ಮುತ್ಯಾಲಮ್ಮ ಹಾಗೂ ಗ್ರಾಮ ದೇವತೆಗಳಾದ ದೊಡ್ಡಮ್ಮ ಮತ್ತು ಆಂಜನೇಯ ಸ್ವಾಮಿ ಉತ್ಸವ ಮೂರ್ತಿಗಳನ್ನು ಕರೆತಂದು ಪೂಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ರಾಮಸ್ತರು ಅತ್ಯಂತ ಆಸಕ್ತರಾಗಿ ದೈವಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಮಸ್ತ ಗ್ರಾಮಸ್ಥರ ಸಹಯೋಗದೊಂದಿಗೆ ಈ ಜಾತ್ರ ಮಹೋತ್ಸವ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಳಗವಾರ ಗ್ರಾಮದ ಮುಖಂಡರಾದ ಗಂಗಾಧರಯ್ಯ,ಮುನಿಯಪ್ಪ,ಟಿ.ಮುನಿಯಪ್ಪ, ಹನುಮಂತರಾಯಪ್ಪ ಸೇರಿದಂತೆ ಸ್ಥಳೀಯ ಯುವಕರು, ಹಾಗೂ ಗ್ರಾಮಸ್ತರು ಉಪಸ್ಥಿತರಿದ್ದರು