
ದೊಡ್ಡಬಳ್ಳಾಪುರ ಏಪ್ರಿಲ್ 16 ( ವಿಜಯಮಿತ್ರ ) : ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಆಚರಣೆ ಅಷ್ಟೇ ಅಲ್ಲದೆ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಇದು ನಮ್ಮ ನಾಯಕ ಅಂಬೇಡ್ಕರ್ ರವರಿಗೆ ನಾವು ನೀಡುವ ಉಡುಗೊರೆಯಾಗಿದೆ ಎಂದು ಖ್ಯಾತ ವಕೀಲರಾದ ಆರ್ ವಿ ಮಹೇಶ್ ತಿಳಿಸಿದರು
ತಾಲೂಕಿನ ಗಾಳಿ ಪೂಜೆ ಗ್ರಾಮದಲ್ಲಿ ಆಯೋಜನೆ ಮಾಡಲಾಗಿದ್ದ 133ನೇ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ ಭಾಗವಹಿಸಿ ಮಾತನಾಡಿದರು ಸಮ ಸಮಾಜದ ಕಲ್ಪನೆ ಹೊಂದಿದ್ದ ಡಾಕ್ಟರ್ ಬಿ ಆರ್ ಅಂಬೇಡ್ಕರರು ದೇಶದ ಪ್ರತಿ ಪ್ರಜೆಯೂ ಉತ್ತಮ ಜೀವನ ಸಾಗಿಸಲು ಬೇಕಾಗುವ ಅನುಕೂಲಗಳನ್ನು ಸಂವಿಧಾನದ ಮೂಲಕ ಮಾಡಿದ್ದಾರೆ. ಪ್ರತಿ ಮನುಷ್ಯರಿಗೂ ಅರಿವು ತುಂಬಾ ಮುಖ್ಯವಾದದ್ದು. ಅರಿವು ಕೇವಲ ವಿದ್ಯಾಭ್ಯಾಸದಿಂದ ಮಾತ್ರ ಸಾಧ್ಯ ಎಲ್ಲರೂ ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿಸುವ ಅಭಿಲಾಷೆಯನ್ನು ಹೊಂದಿರುತ್ತಾರೆ, ಕೇವಲ ಅಭಿಲಾಷೆ ಇದ್ದರೆ ಸಾಲದು ಉತ್ತಮ ಶಿಕ್ಷಣದಿಂದ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯ, ಬಡತನದಿಂದ ಹೊರಬರಲು ನಮಗಿರುವ ಏಕೈಕ ಮಾರ್ಗ ಶಿಕ್ಷಣ. ಈಗಿನ ಮಕ್ಕಳು ಶಿಕ್ಷಣದ ಪ್ರಾಮುಖ್ಯತೆಯನ್ನು ಅರಿಯಬೇಕಿದೆ. ಶಿಕ್ಷಣಕ್ಕೆ ಪೋಷಕರು ಹೆಚ್ಚು ಹೊತ್ತು ನೀಡಬೇಕೆಂದು ಮನವಿ ಮಾಡಿದರು
21ನೇ ಶತಮಾನದಲ್ಲಿ ಜೀವಿಸುತ್ತಿದ್ದರು. ನಮ್ಮಲ್ಲಿ ಸಮ ಸಮಾಜದ ಪರಿಕಲ್ಪನೆ ಪರಿಪೂರ್ಣವಾಗಿಲ್ಲ… ಅದು ಶಿಕ್ಷಣದಿಂದ ಮಾತ್ರ ಸಾಧ್ಯ, ಸಂವಿಧಾನ ನಮಗೆ ಅನ್ಯಾಯವನ್ನು ಎದುರಿಸುವ ಶಕ್ತಿ ನೀಡುತ್ತದೆ.ನಾವೆಲ್ಲರೂ ಸಂವಿಧಾನದ ಉಳಿವಿಗಾಗಿ ಶ್ರಮಿಸಬೇಕಿದೆ. ಒಟ್ಟಾಗಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕಿದೆ ಎಂದರು.
ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷ ನೇರಳೆ ಘಟ್ಟ ರಾಮು ಮಾತನಾಡಿ ಇಂದು ಸಂಘಟನೆ ಹಾಗೂ ಸ್ಥಳೀಯ ದಲಿತ ಮುಖಂಡರ ಸಹಾಯದಿಂದ 133 ನೇ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ ಅವರು ಸಮುದಾಯದ ಶಕ್ತಿ, ದೇಶ ಕಂಡ ಮಹಾ ನಾಯಕ ಕೇವಲ ಭಾರತ ದೇಶದಲ್ಲಷ್ಟೇ ಅಲ್ಲದೆ, ಪ್ರಾಶ್ಚತ್ಯ ದೇಶಗಳಲ್ಲೂ ಅಂಬೇಡ್ಕರರ ಸವಿನೆನಪು ಕಾಡುತ್ತದೆ. ಅವರ ಆಶಯವೇ ನಮ್ಮ ಜೀವನದ ಗುರಿ, ದಲಿತರ ಉದ್ದಾರ ಸಮ ಸಮಾಜದ ನಿರ್ಮಾಣ ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ರಾಜಕುಮಾರ್, ರವಿ ಸಿದ್ದಪ್ಪ, ರಮೇಶ್, ನಾಗರಾಜ್, ಮುರಳಿ, ಮುನಿರಾಜು ಸೇರಿದಂತೆ ಹಲವು ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.