
ಬೆಂಗಳೂರು ಗ್ರಾಮಾಂತರ ಜಿಲ್ಲೆ ಏಪ್ರಿಲ್ 18(ವಿಜಯಮಿತ್ರ ): ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿ/ನೌಕರರಿಗೆ 2 ನೇ ಹಂತದ ತರಬೇತಿಯನ್ನು ಏಪ್ರಿಲ್ 20 ರಂದು ಹಮ್ಮಿಕೊಳ್ಳಲಾಗಿದ್ದು 04 ವಿಧಾನಸಭಾ ಕ್ಷೇತ್ರವಾರು ಆಯಾ ತಾಲೂಕು ಕೇಂದ್ರಗಳಲ್ಲಿ ನಿಯೋಜಿಸಲಾದ ಮತಗಟ್ಟೆ ಮಟ್ಟದ ಅಧಿಕಾರಿಗಳು, ವಿವಿಧ ತಾಲೂಕುಗಳಿಂದ ಆಯಾ ನಿಯೋಜಿತ ತರಬೇತಿ ಸ್ಥಳಗಳಿಗೆ ಹಾಜರಾಗುವ ಸಲುವಾಗಿ ಜಿಲ್ಲೆಯ 04 ತಾಲೂಕು ಕೇಂದ್ರಗಳಿಂದ ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರಗಳಿಗೆ ತೆರಳಲು ಏಪ್ರಿಲ್ 20 ರಂದು ಬೆಳಿಗ್ಗೆ 07:00 ರಿಂದ 07:30 ಗಂಟೆಗೆ ತಾಲೂಕು ಕೇಂದ್ರಗಳಿಂದ ಬಸ್ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಲಾಗಿದೆ.
ಹೊಸಕೋಟೆ ತಾಲೂಕು ಕೇಂದ್ರದಿಂದ 7 ಬಸ್ಸುಗಳು, ದೇವನಹಳ್ಳಿ ತಾಲೂಕು ಕೇಂದ್ರದಿಂದ 12 ಬಸ್ಸುಗಳು, ದೊಡ್ಡಬಳ್ಳಾಪುರ ತಾಲೂಕು ಕೇಂದ್ರದಿಂದ 12 ಬಸ್ಸುಗಳು, ನೆಲಮಂಗಲ ತಾಲೂಕು ಕೇಂದ್ರದಿಂದ 11 ಬಸ್ಸುಗಳು ಸೇರಿ ಒಟ್ಟು 42 ಬಸ್ಸುಗಳು ವ್ಯವಸ್ಥೆ ಮಾಡಲಾಗಿದೆ. ಜತೆಗೆ ಬೇರೆ ತಾಲೂಕುಗಳಿಗೆ ಪ್ರಯಾಣಿಸಲಿರುವ ಮತಗಟ್ಟೆ ಸಿಬ್ಬಂದಿಗಳು ಏಪ್ರಿಲ್ 20 ರಂದು ಬೆಳಿಗ್ಗೆ 6:30 ರಿಂದ 7:30 ಗಂಟೆಯ ಸಂದರ್ಭದಲ್ಲಿ ಹೊಸಕೋಟೆ ತಾಲೂಕು ಕೇಂದ್ರದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಕೋಟೆ ಟೌನ್, ದೇವನಹಳ್ಳಿ ತಾಲೂಕು ಕೇಂದ್ರದಿಂದ ತಾಲೂಕು ಕಛೇರಿ ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲೂಕು ಕೇಂದ್ರದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರ, ಮಾದಗೊಂಡನಹಳ್ಳಿ ಮುಖ್ಯ ರಸ್ತೆ ದೊಡ್ಡಬಳ್ಳಾಪುರ, ನೆಲಮಂಗಲ ತಾಲೂಕು ಕೇಂದ್ರದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೆಲಮಂಗಲ ಟೌನ್ ಈ ಸ್ಥಳಗಳಲ್ಲಿ ಹಾಜರಿದ್ದು, ತಮಗೆ ನಿಯೋಜಿಸಲಾದ ತಾಲೂಕು ಕೇಂದ್ರಗಳಿಗೆ ಪ್ರಯಾಣಿಸಲ ಬಸ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಚುನಾವಣಾ ಅಧಿಕಾರಿಗಳು/ಸಿಬ್ಬಂದಿಗಳು ತರಬೇತಿಗೆ ಕಡ್ಡಾಯವಾಗಿ ಹಾಜರಿರಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.