
ದೊಡ್ಡಬಳ್ಳಾಪುರ ಮೇ 11 ( ವಿಜಯಮಿತ್ರ ) : ನಮ್ಮ ಬದುಕಿಗೆ ಆಧಾರವಾಗಿದ್ದ ಭೂಮಿಯನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಪರಿಶಿಷ್ಟ ಜಾತಿಗೆ ಸೇರಿದ್ದೇವೆ ಎಂಬ ಕಾರಣಕ್ಕೆ ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ.ಎಲ್ಲವೂ ತಿಳಿದಿದ್ದರೂ ಅಧಿಕಾರಿಗಳು ಮೌನವಹಿಸಿರುವುದು ವಿಪರ್ಯಾಸ ಎಂದು ರೈತ ಮುನಿರಾಜು ತಮ್ಮ ನೋವನ್ನು ವ್ಯಕ್ತಪಡಿಸಿದರು
ಖಾಸಗಿ ಸರ್ವೆ ಅಧಿಕಾರಿಗಳ ಸಹಾಯದಿಂದ ನಮ್ಮ ಸ್ಥಳ ಸರ್ವೇ ನಂಬರ್ 191 ರಲ್ಲಿ ಅನಧಿಕೃತ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ನಮ್ಮ ಸ್ಥಳಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದು. ನ್ಯಾಯ ಕೇಳಲು ಹೋದ ನಮ್ಮ ಮೇಲೆ ಗೂಂಡಗಳಂತೆ ವರ್ತಿಸುತ್ತಿದ್ದಾರೆ. ರಕ್ಷಣೆ ನೀಡಬೇಕಿದ್ದ ಪೊಲೀಸ್ ಅಧಿಕಾರಿಗಳು ಮೌನ ವಹಿಸಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದ್ದೆ. ಸಾಜಿದ್ ಅಲಿ ಹಾಗೂ ಸಹಚರರು ರಾಥೋರಾತ್ರಿ ಕಾಂಪೌಂಡ್ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿದ್ದು ನಮಗೆ ಸೇರಿರುವ ಸರ್ವೇ ನಂಬರ್ ಜಾಗವನ್ನು ದಿನೇ ದಿನೇ ಆಕ್ರಮಿಸಿಕೊಳ್ಳುತ್ತಿದ್ದಾರೆ ಈ ಕುರಿತು ನಮಗೆ ನ್ಯಾಯ ಬೇಕಿದೆ ವ್ಯವಸಾಯ ಒಂದೇ ನಮ್ಮ ಜೀವನೋಪಾಯಕ್ಕೆ ಮಾರ್ಗವಾಗಿದ್ದು. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿ ಮಾಡಿದರು.
ರೈತ ಮಹಿಳೆ ಪುನೀತ ಮಾತನಾಡಿ ಕಳೆದ ಎಂಟು ತಿಂಗಳಿನಿಂದ ಈ ಸಮಸ್ಯೆ ಉದ್ಭವವಾಗಿದ್ದು ಬೆಂಗಳೂರಿನ ಮೂಲದವರಾದ ಸಾಜಿದ್ ಅಲಿ ಎಂಬುವರು ಸರ್ವೆ ನಂಬರ್ ಜಾಗವನ್ನು ಖರೀದಿ ಮಾಡಿದ್ದು ಈಗ ತಮ್ಮ ಅಧಿಕಾರದ ಬಲ ಹಾಗೂ ಧನ ಬಲದಿಂದ ನಮ್ಮ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡುತ್ತಿದ್ದಾರೆ. ದಿನೇ ದಿನೇ ನಮಗೆ ಭಯ ಹೆಚ್ಚಾಗುತ್ತಿದ್ದು ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಪ್ರತಿದಿನದ ಈ ಬೆಳವಣಿಗೆ ಕಾಣುತ್ತಿದ್ದರೆ ನಮ್ಮ ಜೀವಕ್ಕೆ ಕುತ್ತು ಬರಬಹುದು ಎಂಬ ಭಯ ಹೆಚ್ಚಾಗುತ್ತಿದೆ. ಈಗಾಗಲೇ ಒಂದು ಎಕರೆಯಷ್ಟು ಭೂಮಿಯನ್ನು ಅತಿಕ್ರಮ ಪ್ರವೇಶ ಮಾಡಿದ್ದು ಮುಂದೆ ಏನಾಗುವುದು ಎಂಬ ಭಯ ಕಾಡುತ್ತಿದೆ. ಇದೇ ಭೂಮಿಯಲ್ಲಿ ನಾವು ರಾಗಿ, ಜೋಳ ಸೇರಿದಂತೆ ಹಲವು ಬೆಳೆ ಬೆಳೆಯುವ ಮೂಲಕ ನಮ್ಮ ಜೀವನ ಸಾಗಿಸಿದ್ದೇವೆ ಇಂದು ನಮ್ಮ ಭೂಮಿ ಕೈತಪ್ಪಿ ಹೋಗುತ್ತಿದೆ ನಮ್ಮ ಜೀವನಕ್ಕೆ ಆಧಾರವಾಗಿರುವ ಭೂಮಿಯನ್ನು ಉಳಿಸಿಕೊಡಿ ಎಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ನಂದಗುಂದ ವೆಂಕಟೇಶ ಸೇರಿದಂತೆ ಹಲವರು ಉಪಸಿತರಿದ್ದರು.