ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಚಾರ ಹೇಳಿಕೆಯ ವಿರುದ್ಧ ಜಾರಿ ನಿರ್ದೇಶನಾಲಯದ ಆಕ್ಷೇಪಣೆಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಚಾರದ ವೇಳೆಯಲ್ಲಿ ಮಾತನಾಡಿ ಜನರು ಎಎಪಿಗೆ ಮತ ಹಾಕಿದರೆ ಜೂನ್ 2 ರಂದು ಅವರು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ನ್ಯಾಯ ಪೀಠವು ಯಾರಿಗೂ ಯಾವುದೇ ವಿನಾಯಿತಿ ನೀಡಿಲ್ಲ ಮತ್ತು ಸಿಎಂ ಶರಣಾಗಬೇಕಾದ ದಿನಾಂಕದ ಬಗ್ಗೆ ತನ್ನ ತೀರ್ಪಿನ ಸ್ಪಷ್ಟತೆಯನ್ನು ಪುನರುಚ್ಚರಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ತೀರ್ಪಿನ ಟೀಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಾವು ಅದರೊಳಗೆ ಹೋಗುವುದಿಲ್ಲ. ಅವರು ಯಾವಾಗ ಶರಣಾಗಬೇಕು ಎಂಬುದು ನಮ್ಮ ಆದೇಶದಲ್ಲಿ ಸ್ಪಷ್ಟವಾಗಿದೆ. ಇದು ಸುಪ್ರೀಂ ಕೋರ್ಟ್ನ ಆದೇಶ ಮತ್ತು ಕಾನೂನು ನಿಯಮವು ಇದರ ಮೂಲಕ ಆಡಳಿತ ನಡೆಸುತ್ತದೆ. ನಾವು ಯಾರಿಗೂ ವಿನಾಯಿತಿ ನೀಡಿಲ್ಲ. .ನಮ್ಮ ಆದೇಶದಲ್ಲಿ ನಾವು ಸಮರ್ಥನೆಯನ್ನು ಹೊಂದಿದ್ದೇವೆ ಎಂದು ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.
ಕಳೆದ ವಾರ, ಉತ್ತಮ್ ನಗರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಜನರು ತಮಗೆ ಮತ ಹಾಕಿದರೆ ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ ಎಂದು ಹೇಳಿದ್ದರು.
20 ದಿನಗಳ ನಂತರ ನಾನು ಮತ್ತೆ ಜೈಲಿಗೆ ಹೋಗಬೇಕು ಎಂದು ಈ ಜನರು (ಬಿಜೆಪಿ) ಹೇಳುತ್ತಿದ್ದಾರೆ, ನೀವು ಪೊರಕೆ (ಎಎಪಿ ಚುನಾವಣಾ ಚಿಹ್ನೆ) ಮೇಲಿನ ಬಟನ್ ಒತ್ತಿದರೆ ನಾನು ಮತ್ತೆ ಜೈಲಿಗೆ ಹೋಗುವ ಅಗತ್ಯವಿಲ್ಲ. ನಿಮ್ಮ ಕೈಯಲ್ಲಿ ಶಕ್ತಿ ಇದೆ ಎಂದಿದ್ದಾರೆ.
