
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ18 ( ವಿಜಯಮಿತ್ರ ): ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು(ಜಿ.ಟಿ.ಟಿ.ಸಿ) ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ದೇವನಹಳ್ಳಿ ಜಿ.ಟಿ.ಟಿ.ಸಿ ಕೇಂದ್ರದಲ್ಲಿ 2024-25 ನೇ ಶೈಕ್ಷಣಿಕ ಸಾಲಿನ ಡಿಪ್ಲೊಮಾ ಕೋರ್ಸ್ಗಳ ದಾಖಲಾತಿ ಪ್ರಾರಂಭವಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆ.ಇ.ಎ) ಮೂಲಕ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನ.
*ಕೋರ್ಸ್ಗಳ ವಿವರ*
1) ಡಿಪ್ಲೋಮೊ ಇನ್ ಟೂಲ್ & ಡೈ ಮೇಕಿಂಗ್(ಡಿ.ಟಿ.ಡಿ.ಎಮ್) 2) ಡಿಪ್ಲೋಮ ಇನ್ ಮೆಕಾಟ್ರಾನಿಕ್ಸ್, (ಡಿ.ಎಮ್.ಸಿ.ಹೆಚ್)
3) ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ (ಡಿ.ಇ.ಇ.ಇ)
4) ಡಿಪ್ಲೋಮೊ ಆಫ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ & ಮಿಷಿನ್ ಲರ್ನಿಂಗ್.(ಡಿ.ಎ.ಐ&ಎಮ್.ಎಲ್).
ಮೇಲಿನ 04 ಕೋರ್ಸ್ ಗಳಿಗೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆ ಉತ್ತೀಣ೯ರಾದವರು ಅರ್ಹರಾಗಿರುತ್ತಾರೆ. ಈ ಡಿಪ್ಲೋಮೋ ಕೋರ್ಸ್ ಗಳ ಅವಧಿ 3+1(ಕಡ್ಡಾಯ ಒಂದು ವರ್ಷದ ಸ್ಟೈಫಂಡ್ ಸಹಿತ ಇಂಟರ್ನ್ಶಿಪ್ ತರಬೇತಿ) ವರ್ಷ. ಈ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಐಟಿಐ ಪಾಸಾದ ವಿದ್ಯಾರ್ಥಿಗಳು ಡಿಪ್ಲೋಮೋ ತರಗತಿಗಳಿಗೆ ದಾಖಲಾತಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ 080-266 07666, 9036144417, 9242952017, 9980956422 ಅಥವಾ ಜಿ.ಟಿ.ಟಿ.ಸಿ ದೇವನಹಳ್ಳಿ ತರಬೇತಿ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ದೇವನಹಳ್ಳಿ ಜಿ.ಟಿ.ಟಿ.ಸಿ ಕೇಂದ್ರದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.