
ಆರ್ ಆರ್ ನಗರದ ಮನೆಯಿಂದ ಸ್ಯಾಂಡಲ್ ವುಡ್ ನಟ ದರ್ಶನ್ ಅರಸ್ಟ್ ಆಗಿದ್ದಾರೆ.ಕಾಮಾಕ್ಷಿ ಪಾಳ್ಯ ಪೊಲೀಸರಿಂದ ಡಿ ಸಿ ಪಿ ಗಿರೀಶ್ ನೇತೃತ್ವದ ಪೊಲೀಸರಿಂದ ನಟ ದರ್ಶನ್ ಅರಸ್ಟ್ ಆಗಿದ್ದಾರೆ
ನಟ ದರ್ಶನ್ ಪರಿಚಯಸ್ಥ ಮಹಿಳೆಗೆ ಚಿತ್ರದುರ್ಗ ಮೂಲದ ಯುವಕ ರೇಣುಕಾಸ್ವಾಮಿ ಮೇಸಜ್ ಮಾಡುತ್ತಿದ್ದು. ಅಶ್ಲೀಲ ಮೆಸೇಜ್ ಮಾಡಿ ತನ್ನನ್ನು ಮದುವೆ ಆಗುವಂತೆ ಪೀಡಿಸುತ್ತಿದ್ದ ಎಂಬ ವಿಚಾರಕ್ಕೆ ಬುದ್ದಿವಾದ ಹೇಳಲು ಕರೆಸಿ ನಟ ದರ್ಶನ್ ಹಾಗೂ ಬೌನ್ಸರ್ಸ್ ಹಲ್ಲೆ ನೆಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆವೇಳೆ ಯುವಕನ ಗುಪ್ತಾಂಗಕ್ಕೆ ಹೊಡೆತಬಿದ್ದಿರುವ ಕಾರಣ ಯುವಕ ಸಾವನಪ್ಪಿದ್ದಾನೆ ಈ ಕುರಿತು ಪ್ರಕರಣ ದಾಖಲಾಗಿದ್ದು. ಕಾಮಾಕ್ಷಿ ಪಾಳ್ಯ ಪೊಲೀಸ್ ನಟ ದರ್ಶನ್ ರನ್ನು ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಮೇಲೆ ಕೊಲೆ ಆರೋಪ ಕೇಳಿಬಂದಿದ್ದು, ಸತ್ಯ ಸತ್ಯತೆ ಎಂಬುದು ಪೂರ್ಣ ತನಿಖೆ ಮೂಲಕ ಹೊರಬೀಳಬೇಕಿದೆ.