
ದೊಡ್ಡಬಳ್ಳಾಪುರ : ರಾತ್ರಿ ಸುರಿದ ಗುಡುಗು ಸಿಡಿಲು ಸಹಿತ ಜಡಿ ಮಳೆಗೆ ಮನೆಯೊಂದರ ಗೋಡೆ ಕುಸಿದಿರುವ ಘಟನೆ ತಾಲ್ಲೂಕಿನ ಮುಕ್ಕಡಿಘಟ್ಟ ಗ್ರಾಮದಲ್ಲಿ ನೆಡೆದಿದೆ.
ಗ್ರಾಮದ ಗಂಗರಾಜ್ ಎಂಬುವವರಿಗೆ ಸೇರಿದ ಮನೆಗೆ ಸಿಡಿಲು ಬಡಿದ ಕಾರಣ ಮನೆಯ ಗೋಡೆ ಕುಸಿತವಾಗಿದೆ.
ಘಟನಾ ವೇಳೆ ಮನೆಯ ಕುಟುಂಬಸ್ಥರು
ಬೇರೆ ಕೋಣೆಯಲ್ಲಿದ್ದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೆ
ಮನೆಯಲ್ಲಿದ್ದ ವಸ್ತುಗಳು ಗೋಡೆ ಕುಸಿದ ಕಾರಣ ಸಂಪೂರ್ಣ ಹನಿಗೋಳಗಾಗಿದೆ ಎಂದು ತಿಳಿದು ಬಂದಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.