
ದೊಡ್ಡಬಳ್ಳಾಪುರ :ನಿರಂತರವಾಗಿ ಹಸಿದವರ ಹೊಟ್ಟೆಯನ್ನು ತುಂಬಿಸುವ ಕಾರ್ಯವನ್ನು ಮಲ್ಲೇಶ್ ಮತ್ತು ತಂಡ ಮಾಡುತ್ತಿದ್ದು. ಇಂದು ನನ್ನ ವಿಶೇಷ ದಿನವನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಲು ನಿರ್ಧರಿಸಿ ಈ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ ಎಂದು ಎಸ್ ವಿ ಮುನಿರಾಜು( ಎಸ್ ಎಲ್ ವಿ ) ತಿಳಿಸಿದರು.
1546 ನೇ ದಿನದ ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಹಲವಾರು ದಿನಗಳಿಂದ ನನ್ನ ಪರಿಚಯಸ್ಥರು ತಮ್ಮ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ನನ್ನ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದೇನೆ. ಹಣವನ್ನು ದುಂದು ವೆಚ್ಚ ಮಾಡದೆ ಹಸಿದವರಿಗೆ ಆಹಾರ ನೀಡುವ ಮೂಲಕ ಈ ವಿಶೇಷ ದಿನವನ್ನು ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.
ಮಹಾ ನಾಯಕ ಕಾರ್ಮಿಕ ಹಿತರಕ್ಷಣಾ ವೇದಿಕೆಯ ಉಪಾಧ್ಯಕ್ಷ ನಾಗರಾಜು ಮಾತನಾಡಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅನ್ನದಾಸೋಹ ಮಾಡುವ ಜೊತೆಗೆ ಶಾಲಾ ಮಕ್ಕಳಿಗೆ ಪುಸ್ತಕ, ಪೆನ್, ಬ್ಯಾಗ್ ವಿತರಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಅನ್ನದಾಸೋಹ ಸಮಿತಿ ಒಟ್ಟಿಗೆ ಮಾಡಿದ್ದೇವೆ. ಇಂದು ಆತ್ಮೀಯ ಗೆಳೆಯರಾದ ಮುನಿರಾಜುರವರ ಹುಟ್ಟು ಹಬ್ಬದ ಆಚರಣೆಯನ್ನು ಅನ್ನದ ಸಮಿತಿಯೊಂದಿಗೆ ಆಚರಿಸುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ತಮ್ಮ ವಿಶೇಷ ದಿನವನ್ನು ಸಮಾಜ ಸೇವೆ ಮಾಡುವ ಮೂಲಕ ಆಚರಿಸಿಕೊಂಡ ಮುನಿರಾಜುರವರಿಗೆ ಶುಭವಾಗಲಿ ಎಂದು ಹಾರೈಸಿದರು.
ಮಹಾ ನಾಯಕ ಕಾರ್ಮಿಕ ಹಿತ ರಕ್ಷಣಾ ವೇದಿಕೆಯ ರಾಜ್ಯ ನಿರ್ದೇಶಕರಾದ ಮುನಿರಾಜು ಮಾರಸಂದ್ರ ಮಾತನಾಡಿ ಅನ್ನದಾಸೋಹ ಕಾರ್ಯಕ್ರಮ ಅಷ್ಟು ಸುಲಭದ ಕೆಲಸವಲ್ಲ, ಆದರೆ ಅನ್ನ ದಾಸೋಹಿ ಮಲ್ಲೇಶ್ ರವರು ನಿರಂತರವಾಗಿ 1500ಕ್ಕೂ ಅಧಿಕ ದಿನಗಳಿಂದ ಈ ಕಾರ್ಯಕ್ರಮವನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಈ ಕಾರ್ಯ ಮತ್ತಷ್ಟು ಮುಂದುವರೆಯಲಿ ಬಡವರಿಗೆ ಹಸಿದವರಿಗೆ ಮತ್ತಷ್ಟು ಆಹಾರ ದೊರೆಯುವಂತಾಗಲಿ . ತಮ್ಮ ವಿಶೇಷ ದಿನವನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಿಕೊಂಡ ಮುನಿರಾಜು ಮತ್ತು ಕುಟುಂಬಕ್ಕೆ ಶುಭವಾಗಲಿ ಎಂದು ಹಾರೈಸಿದರು.
ಆನಂದ್ ಮಾರನೋರ್ ಮಾತನಾಡಿ ಹಲವಾರು ಕಡೆ ಹಲವಾರು ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಆದರೆ ನಿರಂತರ ಅನ್ನದಾಸೋಹ ಕಾರ್ಯಕ್ರಮ ವಿಶೇಷತೆಯಿಂದ ಕೂಡಿದ್ದು. ದಾನಿಗಳೇ ಸ್ವತಃ ಹಸಿದವರಿಗೆ ಆಹಾರ ವಿತರಣೆ ಮಾಡುವುದು ಇಲ್ಲಿನ ವಿಶೇಷ. ನೂರಾರು ಹಸಿದ ಹೊಟ್ಟೆಗಳಿಗೆ ಆಹಾರ ಒದಗಿಸುವ ಕಾರ್ಯವನ್ನು ದಾನಿಗಳ ನೆರವಿನಿಂದ ಮಲ್ಲೇಶ್ ರವರು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ ಅವರಿಗೆ ಶುಭವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ನಾಗರಾಜ್ ( ಕಾಮೆನ ಹಳ್ಳಿ),ಮುನಿರಾಜಣ್ಣ (ಮಾರಸಂದ್ರ,),ಮುನಿಕೆಂಪಣ್ಣ,ಧನರಾಜ್,ಅಂಬರೀಶ್,ಪಾಪಣ್ಣ, ಜೈ ಭೀಮ್ ಚಂದ್ರು,ಪ್ರಕಾಶ್,ಆನಂದ್(ಸಾದೇನ ಹಳ್ಳಿ) ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.