
ಬೆಂಗಳೂರು ಗ್ರಾಮಾಂತರ ಜಿಲ್ಲೆ,ವಿಜಯ ಮಿತ್ರ ವರದಿ : ಸಮಾಜದ ಎಲ್ಲೆಡೆ ಭ್ರಷ್ಟಾಚಾರ ತಂಡದವಾಡುತ್ತಿದ್ದು ಭ್ರಷ್ಟಾಚಾರ ರಹಿತ ರಾಜಕಾರಣ , ಪ್ರಾಮಾಣಿಕ ಜನಸೇವೆ ನನ್ನ ಜೀವನದ ಮುಖ್ಯ ಗುರಿಯಾಗಿದೆ.ಪ್ರತಿಯೊಂದು ಹಳ್ಳಿಗಳಲ್ಲೂ ವಿಶೇಷ ಅಭಿಯಾನಗಳನ್ನು ಆಯೋಜನೆ ಮಾಡುವ ಮೂಲಕ ಜನರಿಗೆ ಚೈತನ್ಯ ತುಂಬಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸುವುದೇ ನನ್ನ ಗುರಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆಆರ್ಎಸ್ ಪಕ್ಷದ ನೂತನ ಅಧ್ಯಕ್ಷ ಶಿವಶಂಕರ್ ತಿಳಿಸಿದರು .
ಬುಧವಾರ ( ಜು. 3 )ದಂದು ನೆಲಮಂಗಲ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕೆಆರ್ಎಸ್ ಪಕ್ಷದ ವತಿಯಿಂದ ಜಿಲ್ಲಾ ಸಮಿತಿಯ ಪುನರ್ ರಚನೆ ಉಸ್ತುವಾರಿ ಗಳಾದ ಗಜೇಂದ್ರ ಗೌಡ ರವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಪುನರ್ ರಚನೆ ಕುರಿತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಬಿ ಶಿವಶಂಕರ್ ಅವಿರೋಧವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರುನಮ್ಮ ಪ್ರಸ್ತುತ ಸಮಾಜವು ನಿರುದ್ಯೋಗ, ಭ್ರಷ್ಟಾಚಾರ ಸೇರಿದಂತೆ ಹಲವು ಸಾಮಾಜಿಕ ಪಿಡುಗುಗಳಿಂದ ತುಂಬಿ ಹೋಗಿದೆ. ಭ್ರಷ್ಟಾಚಾರ ರಹಿತ ಉತ್ತಮ ಆಡಳಿತ ನೀಡುವುದೇ ಕೆಆರ್ಎಸ್ ಪಕ್ಷದ ಮುಖ್ಯ ಉದ್ದೇಶವಾಗಿದೆ. ನಮ್ಮ ಪಕ್ಷದ ಮುಖ್ಯ ಆಶಯವನ್ನು ಸದಾ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇನೆ. ಜಿಲ್ಲೆಯಲ್ಲಿ ಬಡ ರೈತರ ಭೂಕಬಳಿಕೆ, ಸರ್ಕಾರಿ ಸೇವೆ ಸಲ್ಲಿಸಲು ಲಂಚ ಸ್ವೀಕಾರ, ಯುವಕರ ನಿರುದ್ಯೋಗ ಸಮಸ್ಯೆ, ಸಾರ್ವಜನಿಕ ಸ್ಥಳಗಳಲ್ಲಿ ಮೂಲಭೂತ ಸೌಕರ್ಯ ಸಮಸ್ಯೆ ಎದ್ದು ಕಾಣುತ್ತಿದ್ದು, ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಕೆಆರ್ಎಸ್ ಪಕ್ಷವು ಸಾಮಾನ್ಯ ಪ್ರಜೆಯ ಧ್ವನಿಯಾಗಿ ಶ್ರಮಿಸಲಿದೆ ಎಂದರು.
ಕೆಆರ್ಎಸ್ ಪಕ್ಷದ ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಇಂತಿದೆ :
ಗೌರವಧ್ಯಕ್ಷರಾಗಿ ವೆಂಕಟೇಶ್ ಮೂರ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ ಶಿವಶಂಕರ್, ಉಪಾಧ್ಯಕ್ಷ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್ ನಾರನಹಳ್ಳಿ,ಕಾರ್ಯದರ್ಶಿಗಳಾಗಿ ರಮೇಶ್, ಶಶಿಕುಮಾರ್,ವೇಣು, ಸುಬ್ರಮಣಿ, ರಾಮಕೃಷ್ಣ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರು, ನಾಲ್ಕು ತಾಲ್ಲೂಕಿನ ಕೆಆರ್ಎಸ್ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.