Devanahalli : ರೈತನ ಜಮೀನು ಸೈಟ್ ಗಳನ್ನಾಗಿ ಮಾಡುವುದ್ದಾಗಿ ಹೇಳಿ ಅಗ್ರಿಮೆಂಟ್ ಮಾಡಿಸಿಕೊಂಡ್ ಡೆವಲಪರ್ಸ್, 11 ವರ್ಷ ಕಳೆದ್ರು ಜಮೀನು ಅಭಿವೃದ್ಧಿ ಮಾಡದೆ ನಿರ್ಲಕ್ಷ್ಯತೆ ತೋರಿದ್ದಾರೆ, ಡೆವಲಪರ್ಸ್ ವಿರುದ್ಧ ರೈತ ಕೋರ್ಟ್ ನಲ್ಲಿ ದಾವೆ ಹೂಡಿದ, ಡೆವಲಪರ್ಸ್ ಗೆ ಕೋರ್ಟ್ ನೋಟಿಸ್ ನೀಡಿದೆ, ಜಮೀನು ವಿವಾದ ಹಿನ್ನಲೆ ಡೆವಲಪರ್ಸ್ ರೈತನ ಮೇಲೆ ಕೇಸ್ ದಾಖಲಿಸಿದ್ದಾನೆ, ವಿನಾಕಾರಣ ರೈತನ ವಿರುದ್ಧು ಪ್ರಕರಣ ದಾಖಲಿಸಿದ ವಿಶ್ವನಾಥಪುರ ಪೊಲೀಸ್ ಠಾಣೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಬೇಸರ ವ್ಯಕ್ತಪಡಿಸಿದೆ.
ದೇವನಹಲ್ಳಿ ತಾಲ್ಲೂಕಿನ ಶೆಟ್ಟೇರಹಳ್ಳಿ ಸರ್ವೇ ನಂಬರ್ 51/1 ಮತ್ತು 69/2 15 ಎಕರೆ ಜಮೀನು ಹೊನ್ನಪ್ಪನವರಿಗೆ ಸೇರಿದ್ದಾಗಿದ್ದು, ಈ ಜಮೀನಿನ್ನು ಸೈಟ್ ಗಳನ್ನಾಗಿ ಮಾಡುವ ಉದ್ದೇಶಕ್ಕಾಗಿ ವೀರಸ್ವಾಮಿ ಎಂಬುವರಿಗೆ ಜಿ.ಪಿ.ಎ ಮಾಡಿಕೊಟ್ಟಿದ್ದರು, ಈ ವಿಚಾರವಾಗಿ ಠಾಣೆ ಮೆಟ್ಟಿಲೇರಿ ವಿವಾದವಾದ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅನುರಾಧ ರೈತರ ಪರವಾಗಿ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ಪಡೆದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅನುರಾಧ ಮಾತನಾಡಿ, 2013-14 ರಲ್ಲಿ ವೀರಸ್ವಾಮಿ ಎಂಬುವ ಡೆವಲಪರ್ ಹೊನ್ನಪ್ಪನವರ ಕಡೆಯಿಂದ 15 ಎಕರೆ ಜಮೀನನ್ನು ಜಿ.ಪಿ.ಎ ಮಾಡಿಸಿಕೊಂಡರು. ಆದರೆ 6 ವರ್ಷವಾದರೂ ಯಾವುದೇ ಅಭಿವೃದ್ಧಿ ಮಾಡಿರಲಿಲ್ಲ, 2019 ರಲ್ಲಿ ಮತ್ತೆ ಇದೇ ವಿಚಾರವಾಗಿ ಹೊಸದಾಗಿ ಅಗ್ರಿಮೆಂಟ್ ಮಾಡಿಸಿ ಅಭಿವೃದ್ಧಿ ಮಾಡುವುದಾಗಿ ಹೇಳಿದ್ರು, ಇದಾದ 5 ವರ್ಷ ಕಳೆದರೂ ಜಮೀನು ಅಭಿವೃದ್ಧಿ ಮಾಡದೆ ಕಾಲಹರಣ ಮಾಡಿದ್ದಾರೆ, ವೀರಸ್ವಾಮಿ ವಿರುದ್ಧ ಹೊನ್ನಪ್ಪನವರು ಕೋರ್ಟ್ ಮೊರೆ ಹೋದರು, ನ್ಯಾಯಾಲಯವು ವೀರಸ್ವಾಮಿಯವರಿಗೆ ನೋಟೀಸ್ ನೀಡಿದ ನಂತರ ಜಮೀನಿನ ಬಳಿ ಬಂದು ಲೇಔಟ್ ಅಭಿವೃದ್ಧಿ ಪಡಿಸುತ್ತೇವೆ ಎಂದು ಹೊನ್ನಪ್ಪನ ಜಮೀನಿನ ಬಳಿ ಬಂದಿದ್ದಾರೆ, ಜಮೀನು ವಿಚಾರ ಇತ್ಯರ್ಥವಾಗುವವರೆಗೂ ಯಾವ ಕೆಲಸ ಮಾಡಲು ಬಿಡುವುದಿಲ್ಲಾ ಎಂದು ರೈತ ಹೊನ್ನಪ್ಪ ಹೇಳಿದ್ದಾರೆ, ಇದೇ ಕಾರಣಕ್ಕೆ ರೈತನ ವಿರುದ್ಧ ಸುಖಾಸುಮ್ಮನೆ ಕೇಸು ದಾಖಲಿಸಿದರೆ ಎಂದು ಅಕ್ರೋಶ ವ್ಯಕ್ತಪಡಿಸದರು.
ಜಮೀನಿನ ಮಾಲೀಕ ಹೊನ್ನಪ್ಪ ಮಾತನಾಡಿ, ಕಳೆದ 11 ವರ್ಷಗಳಿಂದ ಜಮೀನನ್ನು ಸೈಟುಗಳಾಗಿ ಪರಿವರ್ತಿಸಿ ಅಭಿವೃದ್ಧಿ ಮಾಡುವುದಾಗಿ ಹೇಳುತ್ತಿದ್ದಾರೆ ಹೊರತು ಯಾವುದೇ ಕೆಲಸ ಮಾಡುತ್ತಿಲ್ಲಾ, ಇತ್ತೀಚೆಗೆ ಜಮೀನಿನ ಬಳಿ ಬಂದಾಗ ಕೆಲಸ ಮಾಡಲು ಬಿಡದಾಗ ನಮ್ಮ ಮೇಲೆ ದೂರು ನೀಡಿರುತ್ತಾರೆ. ಇಷ್ಟು ವರ್ಷಗಳಾದರೂ ಅಭಿವೃದ್ಧಿ ಪಡಿಸದಿದ್ದರಿಂದ ನಮ್ಮ ಕುಟುಂಬದ ಸದಸ್ಯರೆಲ್ಲಾ ಅವರಿಗೆ ಜಮೀನು ನೀಡುವುದಿಲ್ಲಾ ಎಂದು ತೀರ್ಮಾನಿಸಿದೆ ಹಾಗೂ ಅವರು ನೀಡಿರುವ ಹಣವನ್ನು ಹಿಂತಿರುಗಿಸಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ರೈತರು ಇದ್ದರು.
