ದೊಡ್ಡಬಳ್ಳಾಪುರ ( ವಿಜಯಮಿತ್ರ) : ತಾಲ್ಲೂಕಿನ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕೈಗಾರಿಕ ಪ್ರದೇಶದ ವಿಗ್ನೇಷ್ ಟೆಕ್ ಪ್ಯಾಕ್ ಪ್ರವೈಟ್ ಲಿಮಿಟೆಡ್ ಕಾರ್ಖಾನೆಯು ಇಂದು ಸುಮಾರು 4 ಗಂಟೆಯಿಂದ ಸುರಿಯುತ್ತಿರುವ ಮಳೆ ನೀರಿಗೆ ಕಿಮಿಕಲ್ ನೀರು ಮತ್ತು ಕಲುಷಿತ ನೀರನ್ನು ಹರಿದು ಬಿಟ್ಟಿದ್ದಾರೆ ಇಂದು ಸ್ಥಳೀಯರು ಆರೋಪಿಸಿದ್ದಾರೆ.

ಜನಧ್ವನಿ ವೇದಿಕೆಯ ಮುಖಂಡರಾದ ರಾಜೇಂದ್ರ ಮಾತನಾಡಿ ಮಳೆ ಬೀಳುವ ಸಮಯ ಗಮನಿಸಿರುವ ಕಾರ್ಖಾನೆಯ HR. ಮೇನೇಜರ್ ಲೋಕೇಶ್ ರವರು ತಾವೂ ಶೇಖರಿಸಿದ್ದ ಕಲುಷಿತ ನೀರನ್ನು ಓಬದೇನಹಳ್ಳಿ ಕೆರೆಗೆ ಮಳೆಯ ನೀರಿನ ಜೊತೆಗೆ ಬಿಟ್ಟಿದ್ದಾರೆ ಇದನ್ನು ಗಮನಿಸಿದ ನಮ್ಮ ಓಬದೇನಹಳ್ಳಿ ಜನಧ್ವನಿ ವೇದಿಕೆಯ ನವೀನಅಜಯ್ ಕುಮಾರ್.ಕುಮಾರ್,ಕಾಂತರಾಜು,
ಅರ್ನಾಲ್ಡ್ ಮುನಿರಾಜು ರವರು ಕಾರ್ಖಾನೆಯ ಮ್ಯಾನೇಜರ್ ರವರಿಗೆ ಈ ಕುರಿತು ಏಕೆ ಈ ರೀತಿ ಮಳೆಯ ನೀರಿನ ಜೊತೆಗೆ ಕಲುಷಿತ ನೀರನ್ನು ಬಿಟ್ಟು ಚೆನ್ನಾಗಿರುವ ನೀರನ್ನು ಕಲುಷಿತಗೊಳಿಸುತ್ತಿದ್ದೀರಿ ಎಂದು ಪ್ರಶ್ನೆ ಮಾಡಲಾಗಿ ಲೋಕೇಶ್ ರವರು ಕೂಡಲೇ ಕಾರ್ಖಾನೆಯ ಗೇಟ್ ನ್ನು ಮುಚ್ಚಿ ನೀವೂ ನಮಗೆ ಕೇಳುವ ಅವಶ್ಯಕತೆ ಇಲ್ಲ ಕೆಐಎಡಿಬಿಯನ್ನು ಪ್ರಶ್ನಿಸಿ ಅಥವಾ ಪರಿಸರ ಮಾಲಿನ್ಯ ಕೇಂದ್ರ ಕ್ಕೆ ದೂರು ನೀಡಿ ಎಂಬ ಉತ್ತರವನ್ನು ದೌರ್ಜನ್ಯದಿಂದ ಬೇಜವಾಬ್ದಾರಿಯುತವಾಗಿ ನೀಡಿದ್ದಾರೆ ಎಂದು ತಿಳಿಸಿದರು.

ಮಳೆ ನೀರಿಗೆ ಕಲುಷಿತ ನೀರನ್ನು ಬಿಡುತ್ತಿರುವ ಕಾರ್ಖಾನೆಯ ವಿರುದ್ದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಪರಿಸರ ವನ್ನು ಕಾಪಾಡಬೇಕು ಎಂದು ಜನಧ್ವನಿ ವೇದಿಕೆಯ ಮುಖಂಡರು ಆಗ್ರಹಿಸುತ್ತೇವೆ . ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದ ಪಕ್ಷದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಕೇಂದ್ರದ ಮುಂದೆ ದರಣಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
