
ಬೆಂಗಳೂರು ಆಗಸ್ಟ್ 03 ( ವಿಜಯಮಿತ್ರ) : ರಾಜ್ಯ ಕಾಂಗ್ರೆಸ್ ಸರ್ಕಾರದ ಅಕ್ರಮಗಳ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಒಟ್ಟಾಗಿ ಪ್ರತಿಭಟನೆ ಮುಂದಾಗಿದ್ದು ಪ್ರತಿಭಟನೆಯ ಭಾಗವಾಗಿ ಆಯೋಜನೆ ಮಾಡಿರುವ ಬೃಹತ್ ಪಾದಯಾತ್ರೆ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಜೆಡಿಎಸ್ ಮುಖಂಡರು ಭಾಗಿಯಾದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಎಂ. ಹರೀಶ್ ಗೌಡ ಮಾತನಾಡಿ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಿ, ಕರ್ನಾಟಕವನ್ನು ಉಳಿಸಿ ಎಂಬ ಧ್ಯೆಯ ವಾಕ್ಯದೊಂದಿಗೆ ಪ್ರಾರಂಭಿಸಿರುವ ಪಾದಯಾತ್ರೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾವಿರಾರು ಜೆಡಿಎಸ್ ಕಾರ್ಯಕರ್ತರು
ಕೆಂಗೇರಿ ಜೆಕೆ ಗ್ರಾಂಡ್ ಅರೆನಾ ಸೆಂಟರ್ ಬಳಿ ಆಯೋಜನೆ ಮಾಡಿರುವ ಪಾದಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಯಶಸ್ವೀಗೊಳಿಸಿದ್ದೇವೆ ಎಂದು ತಿಳಿಸಿದರು.
ಇದು ಕಾರ್ಯಕ್ರಮವಲ್ಲ ಇದು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ನಮ್ಮ ಹೋರಾಟವಾಗಿದೆ. ಕರ್ನಾಟಕದ ಜನತೆಗೆ ಆಗುತ್ತಿರುವ ಮೋಸಕ್ಕೆ ತಕ್ಕ ಪಾಠ ಕಲಿಸುವವರೆಗೂ ಪಾದಯಾತ್ರೆ ನಿಲ್ಲಿಸುವ ಮತ್ತೆ ಇಲ್ಲ… ಜೆಡಿಎಸ್ ಪಕ್ಷದ ರಾಷ್ಟ್ರ ನಾಯಕರಾದ ಕುಮಾರಸ್ವಾಮಿ ಯವರ ಬೆಂಬಲವಾಗಿ ಆಸಾಂಖ್ಯಾತ ಅಭಿಮಾನಿಗಳ ಬಳಗ ಈ ಪಾದಯಾತ್ರೆಯಲ್ಲಿ ಸೇರುತ್ತಿದ್ದು. ಹಗರಣಗಳ ಸರಮಾಲೆ ಹೊತ್ತಿರುವ ಭ್ರಷ್ಟ ಸರ್ಕಾರಕ್ಕೆ ಬುದ್ದಿ ಕಲಿಸಿ,ಸ್ವಚ್ಛ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ನಾಂದಿ ಈ ಪಾದಯಾತ್ರೆಯ ಮುಖ್ಯ ಉದ್ದೇಶ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಪ್ರವೀಣ್ ಕುಮಾರ್, ಶಾಂತಿನಗರ ಅಶ್ವತ್ಥಪ್ಪ,ಸಂಜೀವ, ಮಹೇಶ್ ಹಾದ್ರಿಪುರ,. ಉಜ್ಜನಿ ನರಸಿಂಹಗೌಡ,ಕೋದಂಡ ರಾಮ, ಮಧು ಹಾಗೂ ಹಲವು ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.