
ದೊಡ್ಡಬಳ್ಳಾಪುರ ಆಗಸ್ಟ್ 04 ( ವಿಜಯಮಿತ್ರ) : ಪ್ರೊಫೆಸರ್ ಬಿ ಕೃಷ್ಣಪ್ಪರವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ. ಸಂಖ್ಯೆ. 47/74-75) ಯ ಚಳವಳಿಗೆ 50 ವರ್ಷಗಳು ಪೂರ್ಣಗೊಂಡಿದ್ದು ಸಂಭ್ರಮೋತ್ಸವದ ಕರಪತ್ರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕು ಶಾಖಾ ಸಂಚಾಲಕ ರಾಮಮೂರ್ತಿ ( ರಾಮು )ನೇರಳೆಘಟ್ಟ ಬಿಡುಗಡೆ ಮಾಡಿದರು.
ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕದ ದಲಿತ ಚಳವಳಿ 50 ವರ್ಷಗಳನ್ನು ಪೂರೈಸಿದ್ದು ಸಂಭ್ರಮೋತ್ಸವನ್ನು ಆಗಸ್ಟ್ 7ರಂದು ಬೆಂಗಳೂರಿನ ವಸಂತ ನಗರದ ಮಿಲ್ಲರ್ಸ್ ರಸ್ತೆಯ ಡಾ.ಅಂಬೇಡ್ಕರ್ಭವನದಲ್ಲಿ ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಕರಪತ್ರವನ್ನು ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಬಿಡುಗಡೆ ಮಾಡಲಾಯಿತು.
ನಂತರ ಮಧ್ಯಮಗಳೊಂದಿಗೆ ಮಾತನಾಡಿದ ಅವರು ನಮ್ಮ ತಾಲ್ಲೂಕಿನಿಂದ 200-300 ಜನರನ್ನು ಸಮಾರಂಭಕ್ಕೆ ಕರೆದೊಯ್ಯಲು ನಿರ್ಧರಿಸಲಾಗಿದೆ.ರಾಜ್ಯ ಸಮಿತಿ ನೇತೃತ್ವದಲ್ಲಿ ನೆಡೆಯುತ್ತಿರುವ ಸಂಭ್ರಮೋತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಂಡಿದ್ದೇವೆ ಎಂದರು.
ಬೆಂಗಳೂರು ಗ್ರಾಮಾಂತರ,ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮಾಂತರ ಭಾಗದಿಂದ ತಾಲ್ಲೂಕಿನ ಪದಾಧಿಕಾರಿಗಳು, ಮುಖಂಡರು, ಸಮಾಜ ಬಾಂಧವರು ಕಾರ್ಯಕ್ರಮಕ್ಕೆ ತೆರಳಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಪ್ರಮುಖರಾದ ನಂದಿಗುಂದ ಮೈಲಾರಪ್ಪ,ಮದುರೆ ನರಸಿಂಹಮೂರ್ತಿ, ನರಸಿಂಹಮೂರ್ತಿ ದೊಡ್ಡ ಕುಕ್ಕನಹಳ್ಳಿ, ನಾಗರತ್ನಮ್ಮ ಮಲ್ಲೋಹಳ್ಳಿ, ಮನು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.