ದೊಡ್ಡಬಳ್ಳಾಪುರ : ತಾಲ್ಲೂಕಿನ ಕೆರೆಕುಂಟೆಗಳು ಈಗಾಗಲೇ ನಶಿಸಿಹೋಗಿವೆ , ಕಾರ್ಖಾನೆಗಳು ಹೊರಸೂಸುವ ತ್ಯಾಜ್ಯ ನೀರು ಸ್ಥಳೀಯ ಜಲ ಮೂಲಗಳನ್ನು ಸೇರಿ ಅಂತರ್ಜಾಲ ಸಂಪೂರ್ಣ ಹಾಳಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ನಗರಕ್ಕೆ ಕೂಗಳತೆ ದೂರದಲ್ಲಿರುವ ಬಾಂಬೆ ರಯಾನ್ ಫ್ಯಾಷನ್ (ಬಟನ್ ತಯಾರಿಕ ಘಟಕ )ಕಾರ್ಖಾನೆಯಿಂದ ಮಳೆ ಬಂದ ಸಮಯದಲ್ಲಿ ತಮ್ಮ ಕಾರ್ಖಾನೆಯಲ್ಲಿ ಇರುವ ವಾಷಿಂಗ್ ಮಾಡಲಾದ ತ್ಯಾಜ್ಯದ ನೀರು ಕಾರ್ಖಾನೆ ಪಕ್ಕದಲ್ಲಿ ಇರುವ ಕಾಲುವೆಗೆ ಹರಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಕಾಲುವೆಯ ನೀರು ( ಕಲುಷಿತ ನೀರು )ಬಾಶೆಟ್ಟಹಳ್ಳಿ ಹಾಗೂ ದೊಡ್ಡತುಮಕೂರು ಕೆರೆಗಳಿಗೆ ಸೇರುತ್ತಿರುವುದು ಕಂಡು ಬಂದಿದೆ.ಈ ನೀರನ್ನು ಬಳಸುವ ಸಾರ್ವಜನಿಕರು ಮಾರಕ ರೋಗಳಿಗೆ ಬಲಿಯಾಗುತ್ತಿದ್ದಾರೆ. ಅಲ್ಲದೇ ಬಿಪಿ ಮದುಮೇಹ ಕ್ಯಾನ್ಸರ್ ಇಂತಹ ಮಾರಾಂತಿಕ ಖಾಯಿಲೆಗಳಿಗೆ ಒಳಗಾಗುತ್ತಿದ್ದು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
