
ದೊಡ್ಡಬಳ್ಳಾಪುರ : ತಾಯಿ-ಮಗು ಆಸ್ಪತ್ರೆಯ ವಿವಿಧ ಕಾಮಾಗಾರಿಗಳ ಶಂಕು ಸ್ಥಾಪನೆಗೆ ಆಹ್ವಾನ ನೀಡಿದ್ದ ಅಧಿಕಾರಿಗಳು ಕಾರ್ಯಕ್ರಮವನ್ನು ಏಕಾಏಕಿ ರದ್ದು ಮಾಡಿದ್ದಾರೆ, ಅಧಿಕಾರಿಗಳಿಂದ ಜನಪ್ರತಿನಿಧಿಗಳ ತೋಜೋವಧೆ ಮಾಡಲಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿ ನಗರಸಭಾ ಸದಸ್ಯರು ಪ್ರತಿಭಟನೆ ನಡೆಸಿದರು.
ದೊಡ್ಡಬಳ್ಳಾಪುರ ನಗರದ ತಾಯಿ-ಮಗು ಆಸ್ಪತ್ರೆಯ ಅವರಣದಲ್ಲಿ ಸುಮಾರು 5 ಕೋಟಿ ವೆಚ್ಚದ ಕಾಂಪೌಂಡ್, ಸ್ವಾಗತ ಕಾಮಾನು ಮತ್ತು ಶಿಫ್ಟ್ ಕಾಮಾಗಾರಿಗಳ ಶಂಕುಸ್ಪಾಪನೆಯ ಕಾರ್ಯಕ್ರಮವನ್ನು ಇಂದು(ಆಗಸ್ಟ್ 29)ಬೆಳಗ್ಗೆ ಅಯೋಜನೆ ಮಾಡಲಾಗಿದ್ದು, ಆರೋಗ್ಯಾಧಿಕಾರಿಗಳು ಕಾರ್ಯಕ್ರಮಕ್ಕೆ ಬರುವಂತೆ ಜನಪ್ರತಿನಿಧಿಗಳಿಗೆ ಆಹ್ವಾನವನ್ನು ನೀಡಿದ್ದರು , ಬೆಳಗ್ಗೆ 8 ಗಂಟೆಗೆ ದೊಡ್ಡಬಳ್ಳಾಪುರ ನಗರಸಭಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಸಂದರ್ಭದಲ್ಲಿ ಕಾರ್ಯಕ್ರಮ ರದ್ದಾಗಿರುವ ವಿಚಾರ ತಿಳಿದಿದೆ, ಕಾರ್ಯಕ್ರಮಕ್ಕೆ ಕರೆದು ಅವಮಾನ ಮಾಡಿದ ಅಧಿಕಾರಿಗಳ ವಿರುದ್ಧ ಅಕ್ರೋಶಗೊಂಡ ನಗರಸಭಾ ಸದಸ್ಯರು ಆರೋಗ್ಯಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳು ಬರುವಂತೆ ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಬಂತಿ ವೆಂಕಟೇಶ್ ಮಾತನಾಡಿ ಕಾರ್ಯಕ್ರಮ ರದ್ದಾಗಿರುವ ಬಗ್ಗೆ ಸಣ್ಣದೊಂದು ಮಾಹಿತಿ ನೀಡದೆ ಇಲಾಖೆ ಅಧಿಕಾರಿಗಳು ಶಾಸಕರನ್ನು ಸೇರಿದಂತೆ ಜನಪ್ರತಿನಿಧಿಗಳ ತೋಜೋವಧೆ ಮಾಡಿದ್ದಾರೆ, ಕಾರ್ಯಕ್ರಮ ರದ್ದಾಗಲು ಕಾರಣ ಕೇಳಿದರೆ ಜಿಲ್ಲಾ ಉಸ್ತುವಾರಿಗಳ ನೆಪ ಹೇಳುತ್ತಿದ್ದಾರೆ, ಪದೇ ಪದೇ ಕಾರ್ಯಕ್ರಮವನ್ನ ಮುಂದೂಡಿಕೆ ಮಾಡಿ ಸಾರ್ವಜನಿಕರ ಹಣವನ್ನ ವ್ಯರ್ಥ ಮಾಡುತ್ತಿದ್ದಾರೆ ಅಧಿಕಾರಿಗಳ ವರ್ತನೆಗೆ ಬೇಸತ್ತು ನಾವೇ ಗುದ್ದುಲಿ ಪೂಜೆ ಮಾಡುತ್ತಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ನೆರೆದಿದ್ದ ನಗರಸಭಾ ಸದಸ್ಯರು ತಾವೇ ಗುದ್ದಲಿ ಪೂಜೆ ನೆರವೇರಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾಜಿ ನಗರಸಭಾ ಅಧ್ಯಕ್ಷರಾದ ಸುಧಾಲಕ್ಷ್ಮೀನಾರಾಯಣ್, ನಗರಸಭಾ ಸದಸ್ಯರಾದ ಪದ್ಮನಾಬ್, ಸುಮಿತ್ರ ಆನಂದ್, ಹಂಸಪ್ರಿಯ, ಮುಖಂಡರಾದ ಗೋಪಿ, ಮುದ್ದಪ್ಪ ಭಾಗವಹಿಸಿದ್ದರು.