ದೊಡ್ಡಬಳ್ಳಾಪುರ ಸೆ. 30(ವಿಜಯಮಿತ್ರ): ಅಸತ್ಯವಾದ ಆರೋಪಮಾಡಿ ದೂರು ದಾಖಲಿಸಿರುವ ಬಗ್ಗೆ ದೊಡ್ಡಬಳ್ಳಾಪುರ ಉಪವಿಭಾಗ ಪೋಲೀಸ್ ಉಪಾಧೀಕ್ಷಕರಿಗೆ ಕೆಆರ್ ಎಸ್ ಪಕ್ಷದ ವತಿಯಿಂದ ಬಿ.ಶಿವಶಂಕರ್ ಹಾಗೂ ಸಂಗಡಿಗರು ಮನವಿ ಸಲ್ಲಿಸಿದರು.

ನಂತರ ಕೆ ಆರ್ ಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಿ. ಶಿವಶಂಕರ್ ಮಾಧ್ಯಮಗಳೊಂದಿಗೆ ಮಾತನಾಡಿ ಸೆಪ್ಟೆಂಬರ್ 24ರಂದು ನನ್ನ ಸ್ನೇಹಿತರು ನನಗೆ ಕರೆಮಾಡಿ ಈ ದಿನ ಮದ್ಯಾಹ್ನ 3-00 ಗಂಟೆಗೆ ತಾಲ್ಲೂಕು ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ತಿಳಿಸಿದರು ಇದಕ್ಕೆ ಸಂಬಂಧಪಟ್ಟಂತೆ ನಾನು ತಹಸೀಲ್ದಾರ್ ರವರ ಕಛೇರಿಗೆ ಭೇಟಿ ಮಾಡಿ ವಿಚಾರಿಸಲಾಗಿ ಸೆಪ್ಟೆಂಬರ್ 21 ಮೇಲಿನನಾಯ್ಕರಾಂಡ ಹಳ್ಳಿಯಲ್ಲಿ ಒಂದೇ ಸಮುದಾಯದ ಒಂದೇ ಕುಟುಂಬಕ್ಕೆ ಸಂಬಂಧಪಟ್ಟ ಕೆಲವರು ಪಿತ್ರಾರ್ಜಿತ ಆಸ್ತಿಗಾಗಿ ಆಗಿಂದಾಗ್ಗೆ ಗಲಾಟೆ ಮಾಡಿಕೊಂಡಿರುತ್ತಾರೆ ಎಂದು ನನ್ನನ್ನು ಸೇರಿಸಿ, ಒಂಭತ್ತು ಜನರ ಮೇಲೆ ಆರೋಪ ಹೊರಿಸಿ ಮೊಕದ್ದಮೆ ದಾಖಲಾಗಿದೆ ಎಂದು ತಿಳಿದು ಬಂದಿದ್ದು.ಈ ಮೊಕದ್ದಮೆಗೆ ಸಂಬಂಧಪಟ್ಟಂತೆ ಕಾನೂನಿಗೆ ತಲೆಬಾಗಿ ನನ್ನ ತಪ್ಪಿಲ್ಲದೆ ಇದ್ದರೂ ನಾನು ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಹಾಜರಾಗಿ ಮುಚ್ಚಳಿಕೆ ಬರೆದುಕೊಟ್ಟು ಬಂದಿರುತ್ತೇನೆ.
ಆದರೆ ಸತ್ಯಂಶವೇನೆಂದರೆ ನನಗೂ ಈ ಮೊಕದ್ದಮೆಗೂ ಯಾವುದೇ ಸಂಬಂಧವಿಲ್ಲದಿದ್ದರೂ ನನ್ನ ಹೆಸರನ್ನು ಸೇರಿಸಲಾಗಿದೆ.ಈ ಮೊಕದ್ದಮ್ಮೆಯಲ್ಲಿ ನಮೂದಿಸಿರುವ ಹೆಸರುಗಳಲ್ಲಿ ಯಾರು ಸಹ ಒಂದೇ ಕುಟುಂಬದವರಾಗಲೀ ಅಥವಾ ಪಿತ್ರಾರ್ಜಿತ ಆಸ್ತಿಗಾಗಿ ಗಲಾಟೆ ಮಾಡಿಕೊಂಡಿರುವುದಿಲ್ಲ. ಹೀಗಿದ್ದರೂ ಒಂದೇ ಸಮುದಾಯದ ನಮ್ಮಲ್ಲಿ ಉದ್ದೇಶ ಪೂರ್ವಕವಾಗಿ ದ್ವೇಶ ಬೆಳೆಸಿಕೊಳ್ಳಲು ಈ ರೀತಿ ಷಡ್ಯಂತರ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಮೊಕದ್ದಮೆ ಕುರಿತಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೆಆರ್ಎಸ್ ಪಕ್ಷದ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
