ಮೈಸೂರು ವಿಶ್ವವಿದ್ಯಾನಿಲಯದ ಪೆವಿಲಿಯನ್ ಯೋಗ ಸಂಭಾಗಣದಲ್ಲಿ ಅಕ್ಟೋಬರ್ 3 ರಿಂದ 6 ತನಕ ನಡೆಯಲಿರುವ ದಸರಾ ಸಿಎಂ ಕಪ್ ಯೋಗ ಸ್ಪರ್ಧೆ 2024 ಪಂದ್ಯಾವಳಿಗೆ ದೊಡ್ಡಬಳ್ಳಾಪುರ ನವ್ಯಶ್ರೀ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ಯೋಗ ವಿದ್ಯಾರ್ಥಿಗಳಾದ ಎಸ್.ಅದ್ವೈತ್, ಆರ್.ನಿರೂಪಗೌಡ , ಬಿ.ಎಂ.ಕೀರ್ತನ, ಎಸ್.ಪಾವನಿ, ಆರ್. ವರ್ಷ ಮತ್ತು ತೃಪ್ತಿ ಎನ್ ಶರತ್ ಶಿವಮೊಗ್ಗದಲ್ಲಿ ನಡೆದ ವಿಭಾಗೀಯ ಮಟ್ಟದ ದಸರಾ ಯೋಗ ಸ್ಪರ್ಧೆಯಲ್ಲಿ ವಿಜೇರಾಗುವ ಮೂಲಕ ಮೈಸೂರಿನಲ್ಲಿ ನಡೆಯುವ ದಸರಾ ಸಿಎಂ ಕಪ್ ಯೋಗ 2024 ಕ್ಕೆ ಆಯ್ಕೆಯಾಗಿದ್ದಾರೆ.
ದಸರಾ ವಿಭಾಗೀಯ ಮಟ್ಟದ ಬಾಲಕರ ವಿಭಾಗದಲ್ಲಿ ಅದ್ವೈತ್ . ಎಸ್ ಮತ್ತು ನಿರೂಪ ಗೌಡ . ಆರ್ (ಆರ್ಟಿಸ್ಟಿಕ್ ಪೇರ್ ಯೋಗ ಪ್ರಥಮ ಸ್ಥಾನ ) , ಕೀರ್ತನ ಬಿ.ಎಂ ಮತ್ತು ಪಾವನಿ .ಎಸ್ (ಬಾಲಕಿಯರ ರಿದಮಿಕ್ ಪೇರ್ ಯೋಗ ದ್ವಿತೀಯ ಸ್ಥಾನ) , ವರ್ಷ .ಆರ್ ಮತ್ತು ತೃಪ್ತಿ ಎನ್ ಶರತ್ (ಬಾಲಕಿಯರ ಆರ್ಟಿಸ್ಟಿಕ್ ಪೇರ್ ಯೋಗ ತೃತೀಯ ಸ್ಥಾನ) ಪಡೆದುಕೊಂಡಿದ್ದಾರೆ ಬಹುಮಾನ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಅಕಾಡೆಮಿಯ ತರಬೇತಿದಾರರಾದ ನವ್ಯಶ್ರೀರವರು ಅಭಿನಂದಿಸಿದ್ದಾರೆ.
