ದೊಡ್ಡಬಳ್ಳಾಪುರ ಅ. 05 (ವಿಜಯಮಿತ್ರ ) : ತಾಲ್ಲೂಕಿನ ಯುವ ಮುಖಂಡ, ತಾಲ್ಲೂಕು ಭೋವಿ ಸಮುದಾಯ(occ ) ಘಟಕದ ಅಧ್ಯಕ್ಷ ರಾಮಕೃಷ್ಣ ರವರ 37 ನೇ ಹುಟ್ಟುಹಬ್ಬದ ಆಚರಣೆಯನ್ನು ತಾಲ್ಲೂಕಿನ OCC ಕಚೇರಿಯಲ್ಲಿ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದರು.

ಕಾರ್ಯಕ್ರಮದಲ್ಲಿ ಭೋವಿ ಸಮುದಾಯದ ರಾಜ್ಯ ಹಿರಿಯ ಮುಖಂಡ ಮಾಕಳಿ ರವಿ ಸೇರಿದಂತೆ ಹಲವು ಮುಖಂಡರು ಸಮಾಜಸೇವಕರು ಭಾಗವಹಿಸಿ ರಾಮಕೃಷ್ಣ ಅವರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಧ್ಯಮಗಳೊಂದಿಗೆ ಮಾಕಳಿ ರವಿ ಮಾತನಾಡಿ ರಾಜ್ಯದಾದ್ಯಂತ ನಮ್ಮ ಭೋವಿ ಸಮುದಾಯದ ಬಂಧುಗಳನ್ನು ಒಟ್ಟುಗೂಡಿಸುವಲ್ಲಿ ನಮ್ಮ ಸಂಘಟನೆ ಶ್ರಮಿಸುತ್ತಿದ್ದೂ, ಪೂಜ್ಯ ಗುರುಗಳು ನಮ್ಮೊಂದಿಗೆ ಸಹಕಾರ ನೀಡಿರುವುದು ಸಂತಸದ ವಿಷಯವಾಗಿದೆ.ಜೊತೆಗೆ ನಮ್ಮ ಯುವ ಮುಖಂಡ ರಾಮಕೃಷ್ಣ ರವರು ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ಭೋವಿ ಸಂಘಟನೆ ಬಲಿಷ್ಠಗೊಳಿಸುವ ಮೂಲಕ ಸಮುದಾಯದ ಕಾರ್ಯಾಚಟುವಟಿಕೆಗೆ ತಾಲ್ಲೂಕಿನಲ್ಲಿ ಹೊಸ ಸ್ಫೂರ್ತಿ ತರುವುದಲ್ಲದೇ ಸಮುದಾಯಕ್ಕೆ ಶಕ್ತಿ ತುಂಬಿದ್ದಾರೆ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಅವರು ಮತ್ತಷ್ಟು ಉತ್ತಮ ಸೇವೆಗಳನ್ನು ಸಮಾಜಕ್ಕೆ ಸಲ್ಲಿಸುವ ಮೂಲಕ ಖ್ಯಾತಿಗಳಿಸಲಿ ಎಂದು ಶುಭ ಹಾರೈಸಿದರು.
ಮುಖಂಡರಾದ ಮುನಿರಾಜು ಮಾತನಾಡಿ ಸಮಾಜದಲ್ಲಿ ಕೇವಲ ಒಂದು ಸಮುದಾಯಕ್ಕೆ ಸೀಮಿತರಾಗದೆ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಎಲ್ಲರ ಮನೆ ಮಾತಾಗಿರುವ ರಾಮಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.ಸಾಮಾನ್ಯ ರೈತ ಕುಟುಂಬದಿಂದ ಬಂದ ಯುವಕ ಇಂದು ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ತನ್ನ ಅಭಿಮಾನಿಬಳಗ ಹೊಂದಿರುವುದು ಸಂತೋಷದ ವಿಷಯ,ಅವರ ಸೇವೆ ಹೀಗೆ ಮುಂದುವರೆಯಲಿ ಮುಂದೆ ಅವರಿಗೆ ಉತ್ತಮ ಸ್ಥಾನ ಮನ ದೊರೆಯುವ ಮೂಲಕ ತಾಲ್ಲೂಕಿನ ಜನತೆಗೆ ಮತ್ತಷ್ಟು ಸೇವೆ ಸಲ್ಲಿಸುವಂತಾಗಲಿ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಮಾತನಾಡಿ ನನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮಿಸುತ್ತಿರುವುದು ನನ್ನ ಭಾಗ್ಯ, ಜನತೆಯ ಸೇವೆಯನ್ನು ಸದಾ ಯಾವುದೇ ಅಪೇಕ್ಷೆ ಇಲ್ಲದೆ ನಿರಂತರ ಮಾಡುತ್ತಾ ಬಂದಿದ್ದೇನೆ. ಮುಂದೆ ಮತ್ತಷ್ಟು ಸೇವೆ ಸಲ್ಲಿಸಲು ಪ್ರಯತ್ನಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು, ಅಭಿಮಾನಿಗಳು,ಉಪಸ್ಥಿತರಿದ್ದರು.
