
ದೊಡ್ಡಬಳ್ಳಾಪುರ : ತಾಲೂಕಿನ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಯೂ ಉತ್ತಮ ರೀತಿಯಲ್ಲಿ ನೆಡೆದಿದ್ದು, ಪ್ರತಿ ಗ್ರಾಮದಲ್ಲಿ ಯೋಜನೆಯು ಸಮರ್ಪಕವಾಗಿ ಜನತೆಗೆ ತಲುಪಿದೆ ,ಮುಂದೆ ಪ್ರತಿ ಪಂಚಾಯಿತಿಗೆ 3ಕೋಟಿಗಳಷ್ಟು ಅನುದಾನದ ಕಾಮಗಾರಿ ನೆಡೆಸುವಂತೆ ಸೂಚನೆ ನೀಡಲಾಗಿದೆ ಎಂದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ತಿಳಿಸಿದರು.
ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳನ್ನು ಕುರಿತು ಸ್ಥಳೀಯ ಶಾಸಕ ಧೀರಜ್ ಮುನಿರಾಜು ಸುದ್ದಿಗೊಷ್ಟಿಯಲ್ಲಿ ಮಾತನಾಡಿದರು.
ನಗರದ ಅರ್ಕವತಿ ಬಡಾವಣೆಯ ಶಾಸಕರ ಸ್ವಗೃಹದಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಮುಖ್ಯವಾಗಿ ತಾಲ್ಲೂಕಿನ ಭಕ್ತರಹಳ್ಳಿ,ದೊಡ್ಡ ತುಮಕೂರು, ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹೆಚ್ಚು ಒತ್ತು ನೀಡಲಾಗಿದೆ.RDPR ಇಲಾಖೆಯೊಂದಿಗೆ ಚರ್ಚಿಸಿ ಟೆಂಡರ್ ಪಡೆಯುವ ಗುತ್ತಿಗೆದಾರರಿಗೆ ಸೂಕ್ತ ಷರತ್ತುಗಳೊಂದಿಗೆ ಕರ್ತವ್ಯ ನಿರ್ವಹಿಸುವಂತೆ ತಿಳಿಸಲಾಗಿದೆ ಎಂದರು.
Ad
ರಸ್ತೆ ಕಾಮಗಾರಿಗಳ ಬಗ್ಗೆ ಸ್ಪಷ್ಟನೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಪೈಕಿ ನಮ್ಮ ತಾಲ್ಲೂಕಿನಲ್ಲಿ 1300.km ರಸ್ತೆ ಇದ್ದು , RDPR 30/54 ಯೋಜನೆ ಅಡಿಯಲ್ಲಿ 49ಲಕ್ಷ ಅನುದಾನ ನೀಡಲಾಗಿದ್ದು. 50/54 ರಸ್ತೆ ಜಿಲ್ಲಾ ರಸ್ತೆ ಅಂತರ್ ಜಿಲ್ಲಾ ರಸ್ತೆ ಗಾಗಿ ಲೋಕಪಯೋಗಿ ಇಲಾಖೆ ವತಿಯಿಂದ ರಸ್ತೆ 8 ಕೋಟಿಗಳ ಅನುದಾನ ನೀಡಲಾಗಿದೆ. ರಸ್ತೆಗಳ ಉನ್ನತಿಕರಣಕ್ಕೆ 1.5ಕೋಟಿ ಮಂಜೂರು ಮಾಡಲಾಗಿದೆ.ಅತ್ಯಂತ ಹೆಚ್ಚಿನ ರಸ್ತೆಗಳು ನಮ್ಮಲ್ಲಿದ್ದು ನಿರ್ವಹಣೆ ಕಾರ್ಯಾ ಪ್ರಾರಂಭವಾಗಿದೆ
ಜಿಲ್ಲೆಯಲ್ಲಿ ಮೊದಲಬಾರಿಗೆ ವೈಟ್ ಟ್ಯಾಪಿಂಗ್ ಸಿ ಸಿ ರಸ್ತೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ,ತಾಲ್ಲೂಕಿನ ರಸ್ತೆಗಳ ಅಭಿವೃದ್ಧಿ ಹಾಗೂ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರ್ಣಗೋಳಿಸುತ್ತಿದ್ದು, ವಿಚಾರ ತಿಳಿಯದೆ ಸಾಮಾಜಿಕ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುವುದು ಸರಿಯಲ್ಲ ಎಂದರು.
ಕ್ರಿಯಾ ಯೋಜನೆಯನ್ನು ಬದಲಿಸಿಲ್ಲ ಯಥಾಸ್ಥಿತಿ ಮುಂದುವರೆಸಲಾಗಿದೆ
ನಾನು ತಾಲ್ಲೂಕಿನ ಶಾಸಕನಾಗಿ ಅಭಿವೃದ್ಧಿ ಕಾರ್ಯಗಳ ಕಡೆ ಗಮನ ಹರಿಸಿದ್ದೇನೆ, ಈ ಹಿಂದೆ ಮಾಡಿದ್ದ ಕ್ರಿಯಾಯೋಜನೆಯನ್ನು ಯಥಾವತ್ತಾಗಿ ಕಾರ್ಯರೂಪಕ್ಕೆ ತರುತ್ತಿದ್ದು ಯಾವುದೇ ಬದಲಾವಣೆ ಮಾಡಿಲ್ಲ ನಾನು ದ್ವೇಷ ರಾಜಕಾರಣ ಮಾಡುವುದಿಲ್ಲ, ರಾಜಕೀಯ ಬದಲಾವಣೆಗಳಿಗೆ ಅವಕಾಶ ನೀಡಿಲ್ಲ. ಈ ಹಿಂದೆ ತಾಲ್ಲೂಕಿನಲ್ಲಿ ನಿರ್ಮಿಸಿರುವ ಒಳಚರಂಡಿಗಳು ಇಂದು ಕುಸಿಯುತ್ತಿವೆ , ಒಂದು ಒಳಚರಂಡಿ ಕನಿಷ್ಠ 20ವರ್ಷ ಬಾಳಿಕೆ ಬರಬೇಕಿತ್ತು ಆದರೆ ಇಂದು ಒಳಚರಂಡಿ ಕುಸಿಯುತ್ತಿದೆ ಈ ಪ್ರಶ್ನೆಗೆ ಉತ್ತರವನ್ನು ಕಾಮಗಾರಿ ನಡೆಸಿದ ಗುತ್ತಿಗೆದಾರರೇ ನೀಡಬೇಕಿದೆ ಎಂದರು.
ನಗರಸಭೆಯಲ್ಲಿ ಆದಾಯಕ್ಕಿಂತ ವ್ಯಯ ಹೆಚ್ಚು
27ರಿಂದ 28ಸಾವಿರ ಮನೆಗಳಿರುವ ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಸರ್ಕಾರಿ ಅನುದಾನಗಳ ಕೊರತೆ ಇದೆ, ಪ್ರತಿ ತಿಂಗಳು ಸುಮಾರು 75 ಲಕ್ಷ ಆದಾಯವಿದೆ ಎಂದು ಭಾವಿಸಿದರೆ ನಗರಸಭಾ ವ್ಯಾಪ್ತಿಯ ಜನತೆಗೆ ಸೌಕರ್ಯ ಕಲ್ಪಿಸಲು 1ಕೋಟಿ 40 ಲಕ್ಷದಷ್ಟು ಮೊತ್ತದ ಅವಶ್ಯಕತೆ ಇದೆ, ನಮ್ಮಲ್ಲಿ ಆದಾಯಕ್ಕಿಂತ ವ್ಯಯವೇ ಹೆಚ್ಚಿದೆ ಇಂತಹ ಸಂದರ್ಭದಲ್ಲಿ ನಮ್ಮಲ್ಲಿ ಬರುವ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ. ನಗರ ಭಾಗದ ಒಳಚರಂಡಿ ನಿರ್ವಹಣೆಗೆ 136ಕೋಟಿ ಮೊತ್ತದ ಅನುದಾನವನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದೇನೆ, ಈ ಕುರಿತು ಸದನದಲ್ಲಿ ಈಗಾಗಲೇ ಪ್ರಸ್ತಾಪಿಸಿದ್ದು ಇಲಾಖೆ ಮತ್ತು ಸಚಿವರಿಗೆ ಮನವಿ ಕೂಡ ಸಲ್ಲಿಸಲಾಗಿದೆ ಎಂದರು.
Ad
ತಾಲೂಕಿನ ಜನತೆಯ ಆರೋಗ್ಯಕ್ಕೆ ಹೆಚ್ಚಿನ ಒತ್ತು
ತಾಲ್ಲೂಕಿನ ಜನತೆಯ ಅರೋಗ್ಯ ದೃಷ್ಟಿಯಿಂದ ಜಿಲ್ಲಾಸ್ಪತ್ರೆಗಾಗಿ ಸಿದ್ದೇನಾಯಕನ ಹಳ್ಳಿಯಲ್ಲಿ 9 ಎಕ್ಕರೆ ಪ್ರದೇಶದಲ್ಲಿ ಸುಮಾರು 22ಕೋಟಿ ವೆಚ್ಚದಲ್ಲಿ 50 ಬೆಡ್ ಗಳ ವ್ಯವಸ್ಥೆ ಇರುವ ಕ್ರಿಟಿಕಲ್ ಕೇರ್ ನಿರ್ಮಾಣಕ್ಕೆ ಸಿದ್ದವಾಗಿದೆ.ಈ ಹಿಂದೆ ನಮ್ಮ ತಾಲೂಕಿಗೆ ನೀಡಲಾಗಿದ್ದ ಜಿಲ್ಲಾಸ್ಪತ್ರೆಯನ್ನು ದೇವನಹಳ್ಳಿಗೆ ಸ್ಥಳಾಂತರಿಸುವ ಹುನ್ನಾರ ನೆಡೆದಿತ್ತು,ಆದರೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನೇತೃತ್ವದ ಹೋರಾಟ ಫಲವಾಗಿ ಜಿಲ್ಲಾಸ್ಪತ್ರೆ ನಮ್ಮಲ್ಲಿಯೇ ಉಳಿದಿದೆ 195 ಕೋಟಿ ವೆಚ್ಚದಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣವಾಗಲಿದೆ.
ಪ್ರಸ್ತುತ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಹೆಚ್ಚಾಗಿ ಕಾಣುತ್ತಿದೆ ಈ ಕೊರತೆಯನ್ನು ನೀಗಿಸಲು 6 ಎಕ್ಕರೆ ಪ್ರದೇಶದಲ್ಲಿ ನರ್ಸಿಂಗ್ ಕಾಲೇಜು ನಿರ್ಮಾಣಕ್ಕೆ ಪ್ರಸ್ತಾವನೆ ನೀಡಲಾಗಿದ್ದು, ಸಂಬಂಧಪಟ್ಟ ಇಲಾಖೆ ವತಿಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು.
ತಾಲೂಕಿನಲ್ಲಿ ವಿಶೇಷವಾಗಿ ತಿಪ್ಪಾಪುರ ಸಮೀಪ 10ಕೋಟಿ ವೆಚ್ಚದಲ್ಲಿ ಮಹಿಳಾ ಕಾಲೇಜು ನಿರ್ಮಾಣ,25 ಕೋಟಿ ವೆಚ್ಚದಲ್ಲಿ ಉಪವಿಭಾಗಧಿಕಾರಿ (AC)ಆಫೀಸ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ನೇಕಾರಿಕೆ ಅಭಿವೃದ್ಧಿಗೆ ಹೆಚ್ಚಿನ ಒತ್ತು
ನಮ್ಮ ತಾಲ್ಲೂಕು ನೇಕಾರಿಕೆಗೆ ಪ್ರಸಿದ್ದಿ ಪಡೆದಿದ್ದು ನೇಕಾರರ ಅಭಿವೃದ್ಧಿ ನನ್ನ ಪ್ರಮುಖ ಉದ್ದೇಶ ಈ ನಿಟ್ಟಿನಲ್ಲಿ ಪ್ರಾಥಮಿಕವಾಗಿ 75 ಕೊಟ್ಟಿವೆಚ್ಚದಲ್ಲಿ ತಾಲ್ಲೂಕಿನ ಭಾಷೆಟ್ಟಿಹಳ್ಳಿಯಲ್ಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅಂಡರ್ ಗ್ರೌಂಡ್ ಕರೆಂಟ್ ವ್ಯವಸ್ಥೆ ಕಾಮಗಾರಿಗೆ ಚಾಲನೆ ನೀಡುತ್ತಿದ್ದು ನೇಕಾರರಿಗೆ ಮುಂದೆ ಇದೊಂದು ಉತ್ತಮ ಸೇವೆ ಸಲ್ಲಿಸುವ ಯೋಜನೆಯಾಗಲಿದೆ ಎಂದರು. ತಾಲೂಕಿನ ನೈಕಾರಿಕ್ಕೆ ಉಳಿಸಲು ನೇಕಾರರ ಹಿತರಕ್ಷಣೆ ಕಾಪಾಡುವ ಸಲುವಾಗಿ ಪವರ್ ಲೂಮ್ ಪ್ರೊಟೆಕ್ಷನ್ ಆಕ್ಟ್ ಜಾರಿ ತರಲು ಚಿಂತನೆ ನಡೆಸುತ್ತಿದ್ದೇವೆ, ಈ ಆಕ್ಟ್ ಜಾರಿಗೊಳಿಸಿದರೆ ನೇಕಾರಿಕೆ ಹಾಗೂ ನೇಕಾರರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ದೇವಾಂಗ ಮಂಡಳಿಗೆ ಧನ್ಯವಾದ ಅರ್ಪಿಸಿದ ಶಾಸಕರು.
ಕೊರೋನ ಸಂದರ್ಭದಲ್ಲಿ ವಿದ್ಯುತ್ ಚಿತಾಗಾರದ ಸೇವೆ ಶ್ಲಾಘನಿಯ ದೇವಾಂಗ ಸಮುದಾಯದ ಸೇವೆ ತಾಲ್ಲೂಕಿನ ಜನತೆ ಮರೆಯಲು ಸಾಧ್ಯವಿಲ್ಲ ಇಂದಿಗೂ ಮುಕ್ತಿದಾಮ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಇದಕ್ಕೆ ಪೂರಕವಾಗಿ ತಾಲ್ಲೂಕಿನ ಒಬದೇನಹಳ್ಳಿಯ ಸಮೀಪ 4ಕೋಟಿ ವೆಚ್ಚದಲ್ಲಿ ವಿದ್ಯುತ್ ಚಿತಗಾರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.
ಪೈಪ್ ಲೈನ್ ಮೂಲಕ ದೊಡ್ಡತುಮಕೂರು ಮಜರಾ ಹೊಸಹಳ್ಳಿ ಗ್ರಾಮಗಳಿಗೆ ನೀರು ಪೂರೈಕೆ
ಕಳೆದ ಹಲವು ವರ್ಷಗಳಿಂದ ಶುದ್ಧ ಕುಡಿಯುವ ನೀರಿಗಾಗಿ ದೊಡ್ಡ ತುಮಕೂರು ಹಾಗೂ ಮಜರಾ ಹೊಸಹಳ್ಳಿ ಗ್ರಾಮ ಪಂಚಾಯತಿಯ ಗ್ರಾಮಸ್ಥರು ಹೋರಾಟ ನೆಡೆಸುತ್ತಿದ್ದಾರೆ, ಅವರ ಅನುಕೂಲಕ್ಕಾಗಿ 9.5ಕೋಟಿ ವೆಚ್ಚದಲ್ಲಿ ಕಾಡನೂರು ಗ್ರಾಮದಿಂದ ಪೈಪ್ ಲೈನ್ ಗಳ ಮೂಲಕ ದೊಡ್ಡತುಮಕೂರು,ಮಜರಾ ಹೊಸಹಳ್ಳಿ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಯೋಜನೆ ರೂಪಿಸಲಾಗಿದೆ ಈ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
50 ವರ್ಷ ರಾಜಕಾರಣ ಮಾಡೇ ಮಾಡ್ತೀನಿ…
ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ನವ ದೊಡ್ಡಬಳ್ಳಾಪುರ ಖಂಡಿತ ಮಾಡುತ್ತೇನೆ, ಟೀಕೆ ಮಾಡುವ ಕೆಲವರಿಗೆ ನನ್ನ ಅಭಿವೃದ್ಧಿ ಕಾರ್ಯಗಳಿದ್ದಲೇ ಉತ್ತರಿಸುತ್ತೇನೆ. ರಾಜಕಾರಣದಲ್ಲಿ ಸೋಲು ಗೆಲುವು ಇದ್ದದ್ದೇ ಗೆಲ್ಲಲಿ ಅಥವಾ ಸೋಲಲಿ 50 ವರ್ಷ ರಾಜಕಾರಣ ಮಾಡೇ ಮಾಡ್ತೀನೆ…ಒಂದು ವಿಷಯವನ್ನು ಕುರಿತು ತಮ್ಮ ಅಭಿಪ್ರಾಯ ಮಂಡಿಸುವ ಮುನ್ನ ಒಮ್ಮೆ ವಿಚಾರವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯ ಬಂತಿ ವೆಂಕಟೇಶ್, ಗ್ರಾಮಾಂತರ ಘಟಕ ಅಧ್ಯಕ್ಷ ನಾಗೇಶ್, ನಗರ ಘಟಕ ಅಧ್ಯಕ್ಷ ಮುದ್ದಪ್ಪ, ನಗರಸಭಾ ಸದಸ್ಯ ಪದ್ಮರಾಜು, ಮುಖಂಡರಾದ ಮೋಹನ್, ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.