
ದೊಡ್ಡಬಳ್ಳಾಪುರ : 49ನೇಯ ಸಬ್ ಜೂನಿಯರ್ ಅಂಡ್ ಜೂನಿಯರ್ ರಾಷ್ಟ್ರೀಯ ಯೋಗಾಸನ ಕ್ರೀಡಾ ಚಂಪಿಯನ್ಷಿಪ್,2024 ಸ್ಪರ್ಧೆಗೆ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಯೋಗರಾಜ್ ತಿಳಿಸಿದ್ದಾರೆ.
ಯೋಗ ಫೆಡರೇಷನ್ ಆಫ್ ಇಂಡಿಯಾ ಮತ್ತು ಹಿಮಾಚಲ ಯೋಗ ಅಸೋಸಿಯೇಷನ್ಆಶ್ರಯದಲ್ಲಿ ದಿನಾಂಕ 24-10-2024 ರಿಂದ 27-10-2024ರವರೆಗೆ ಹಿಮಾಚಲ ಪ್ರದೇಶದ ಊನ ಜಿಲ್ಲೆಯ ಇಂದಿರಾಗಾಂಧಿ ಇಂಡೋರ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ 49ನೇಯ ಸಬ್ ಜೂನಿಯರ್ ಅಂಡ್ ಜೂನಿಯರ್ ರಾಷ್ಟ್ರೀಯ ಯೋಗಾಸನ ಕ್ರೀಡಾ ಚಂಪಿಯನ್ಷಿಪ್,2024 ಸ್ಪರ್ಧೆಗೆ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರ (ರಿ), ಯೋಗಪಟುಗಳಾದ ಬಾಲಕರ ವಿಭಾಗದಲ್ಲಿ ಜೆ.ಸಿ.ಪ್ರಥಮಶೆಟ್ಟಿ, ಯಶ್ವಿನ್.ಎಸ್, ಕುಶಲ್ ಎಸ್, ನೀರಜ್ ಎಲ್, ಶಶಾಂಕ್ ಪಿ.ಎಸ್, ಕೆ ಎನ್ ವಿಶ್ವನಾಥ್, ಬಾಲಕೀಯರ ವಿಭಾಗದಲ್ಲಿ ಎಸ್.ಅಪೂರ್ವ, ಎನ್ ಖುಷಿಪ್ರಿಯ, ಗೌತಮಿ.ಹೆಚ್,ಆರ್,.ಯಶಸ್ವಿನಿ,.ಟಿ,.ಹಿತಶ್ರೀ ಕೆ.ಎಂ, ಮಧುಶಾಲಿನಿ.ಡಿ.ಎಸ್, ಎಂ.ಆರ್.ಜಾಹ್ನವಿ, 49ನೇ ರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಹಾಗೂ ಕರ್ನಾಟಕ ರಾಜ್ಯ ಬಾಲಕೀಯರ ತಂಡದ ನಾಯಕಿಯಾಗಿ ಎಂ ಆರ್ ಜಾಹ್ನವಿ ಮತ್ತು ಬಾಲಕರ ತಂಡದ ಮ್ಯಾನೇಜರ್ ಆಗಿ ಎಸ್ ಸಿ ಶಿವಕುಮಾರ್ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ಆಯ್ಕೆಯಾದ ಯೋಗಪಟುಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಮೇಚುರ್ ಯೋಗ ಸಂಸ್ಥೆಯ ಅಧ್ಯಕ್ಷರಾದ ಎಂ ಜಿ ಅಮರ್ನಾಥ್, ಕಾರ್ಯದರ್ಶಿ ಎ ನಟರಾಜ್, ಖಜಾಂಚಿ ಕೆ ಆರ್ ಶ್ಯಾಮಸುಂದರ್, ಹೆಚ್ ಆರ್ ಪುಷ್ಪಕ್ ರವೀಂದ್ರ ಮತ್ತು ನಿಸರ್ಗ ಯೋಗ ಕೇಂದ್ರದ ಪದಾಧಿಕಾರಿಗಳು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಶುಭ ಶುಭ ಹಾರೈಸಿದರು.