
ಬಿಗ್ ಬಾಸ್ ಕನ್ನಡ (Bigg Boss Kannada) ಕಾರ್ಯಕ್ರಮ ನಿರೂಪಣೆ ಬಗ್ಗೆ ಕಿಚ್ಚ ಸುದೀಪ್ (Kiccha Sudeep) ಮಾಡಿದ ಆ ಒಂದು ಎಕ್ಸ್ ಸಂದೇಶ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದೆ.
ಕಳೆದ 10 ಸೀಸನ್ ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಸುದೀಪ್ 11ನೇ ಸೀಸನ್ ಆರಂಭದಲ್ಲೇ ಇದು ನನ್ನ ಕೊನೆಯ ಸೀಸನ್ ಎಂದು ಹೇಳಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು ಇದರ ಹಿಂದಿನ ಕಾರಣವೇನು ಎಂಬುದರ ಬಗ್ಗೆ ಹಲವಾರು ಊಹಾಪೋಹಗಳು ಚರ್ಚೆಗಳು ಪ್ರಾರಂಭವಾದವು.
ಬಿಗ್ ಬಾಸ್ ನಲ್ಲಿ ಕನ್ನಡ ಹೆಚ್ಚಾಗಿ ಬಳಕೆ ಆಗುತ್ತಿಲ್ಲ. ಕಾರ್ಯಕ್ರಮದ ನಿರ್ದೇಶಕರು ಬದಲಾಗಿದ್ದು, ಅವರು ತಮಿಳಿನವರಾಗಿದ್ದಾರೆ. ಶೋ ಆಯೋಜಕಿ ಮರಾಠಿಯವರಾಗಿದ್ದಾರೆ. ಹಾಗಾಗಿ ಅಲ್ಲಿ ಕನ್ನಡ ಹೆಚ್ಚು ಬಳಕೆ ಆಗುತ್ತಿಲ್ಲ. ಸ್ವರ್ಗ – ನರಕದ ಕಾನ್ಸೆಪ್ಟ್ ಬಗ್ಗೆ ಸುದೀಪ್ ರವರಿಗೆ ಮೊದಲಿನಿಂದಲೂ ಅಸಮಾಧಾನ ಇತ್ತು ಎಂಬ ಹಲವು ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.
Ad
ಇದರ ಬೆನ್ನಲ್ಲೇ ಕಿಚ್ಚ ಸುದೀಪ್ ಅವರು ಎಲ್ಲಾ ಗೊಂದಲಕ್ಕೂ ತೆರೆ ಎಳೆಯುವ ನಿಟ್ಟಿನಲ್ಲಿ ಟ್ವೀಟ್ ಮಾಡಿದ್ದಾರೆ.
ಕಿಚ್ಚನ ಸಂದೇಶದಲ್ಲಿ ಏನಿದೆ?:
“ನಾನು ಇತ್ತೀಚೆಗೆ ಮಾಡಿದ ಟ್ವೀಟ್ ಬಗ್ಗೆ ನೀವೆಲ್ಲ ತೋರಿಸಿದ ಬೆಂಬಲ ಹಾಗೂ ಪ್ರೀತಿಯನ್ನು ಪ್ರಶಂಸಿಸುತ್ತೇನೆ. ಆದರೆ ಚಾನೆಲ್ ಮತ್ತು ನನ್ನ ನಡುವೆ ಯಾವುದೇ ರೀತಿಯ ಗೊಂದಲ ಇರುವಂತೆ ಊಹಿಸಿ ಮಾತನಾಡುವುದನ್ನು, ವಿಡಿಯೋ ಮಾಡಿ ಮಾತನಾಡುವುದನ್ನು ದಯವಿಟ್ಟು ನಿಲ್ಲಿಸಿ. ನನ್ನ ಹಾಗೂ ಚಾನೆಲ್ ನಡುವೆ ಒಂದು ಸುದೀರ್ಘ ಪಾಸಿಟಿವ್ ಜರ್ನಿಯಿದೆ. ಈ ಪಯಣಕ್ಕೆ ʼಅಗೌರವʼವನ್ನು ಸೇರಿಸಿ ಮಾತನಾಡಬೇಡಿ. ನೀವೆಲ್ಲ ಊಹಿಸುತ್ತಿರುವ ವಿಚಾರ ಆಧಾರರಹಿತವಾಗಿದೆ. ನಾನು ಮಾಡಿರುವ ಟ್ವೀಟ್ ನೇರ ಮತ್ತು ಪ್ರಾಮಾಣಿಕವಾಗಿದೆ. ನನ್ನ ಹಾಗೂ ಕಲರ್ಸ್ ನಡುವಿನ ಬಾಂಧವ್ಯ ಅದ್ಭುತವಾಗಿದೆ. ನನ್ನನ್ನು ಅವರು ಯಾವಾಗಲೂ ಗೌರವದಿಂದಲೇ ನಡೆಸಿಕೊಂಡಿದ್ದಾರೆ. ಕಾರ್ಯಕ್ರಮ ನಿರ್ದೇಶಕರಾಗಿರುವ ಪ್ರಕಾಶ್ ಅವರು ಒಬ್ಬ ಪ್ರತಿಭಾವಂತ ವ್ಯಕ್ತಿ. ನಾನು ಅವರ ತುಂಬಾ ಗೌರವವನ್ನು ಹೊಂದಿದ್ದೇನೆ. ನಾನು ಕೆಲಸ ಮಾಡುತ್ತಿರುವ ತಂಡವು ಅನಗತ್ಯ ಆರೋಪಗಳನ್ನು ಎದುರಿಸುತ್ತಿರುವಾಗ ಸುಮ್ಮನೆ ಕುಳಿತು ಆನಂದಿಸು ವ್ಯಕ್ತಿ ನನ್ನಲ್ಲ” ಸುದೀಪ್ ಬರೆದುಕೊಂಡಿದ್ದಾರೆ.