ದೊಡ್ಡಬಳ್ಳಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ಇವರ ವತಿಯಿಂದ ದೊಡ್ಡಬಳ್ಳಾಪುರ ವಲಯದ ಅಂಚರಹಳ್ಳಿ ಗ್ರಾಮದಲ್ಲಿ ಪ್ರಕೃತಿ ಮಾತೆ ಜ್ಞಾನ ವಿಕಾಸ ಕೇಂದ್ರದ ಟೈಲರಿಂಗ್ ಕ್ಲಾಸ್ ತರಬೇತಿಗೆ ಚಾಲನೆ ನೀಡಲಾಯಿತು
ಈ ಕಾರ್ಯಕ್ರಮವನ್ನು ತಾಲ್ಲೂಕಿನ ಯೋಜನಾಧಿಕಾರಿಗಳಾದ ಸುಧಾಭಾಸ್ಕರ್ ಉದ್ಘಾಟಿಸಿ ಮಾತನಾಡಿದರು ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ ನೀಡಿ ಅವರನ್ನು ಸಮಾಜದ ಮುನ್ನೆಲೆಗೆ ತರಬೇಕು,ಇಂದಿನ ಪರಿಸ್ಥಿತಿಯಲ್ಲಿ ಸ್ವ ಉದ್ಯೋಗ ಅತ್ಯುತ್ತಮ ಆಯ್ಕೆ ಆಗಿದ್ದು ಟೈಲರಿಂಗ್ ತರಬೇತಿ ಪಡೆದುಕೊಂಡು ಸ್ವ ಉದ್ಯೋಗ ಮಾಡುವ ಮೂಲಕ ಪ್ರತಿ ಮಹಿಳೆಯು ಸಮಾಜದಲ್ಲಿ ಉತ್ತಮ ಜೀವನ ಸಾಗಿಸುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ್ ಸದಸ್ಯರಾದ ಬಸವರಾಜ್ , ವಲಯದ ಮೇಲ್ವಿಚಾರಕರಾದ ರಘು , ಹೊಲಿಗೆ ತರಬೇತಿ ಶಿಕ್ಷಕರಾದ ಸುಜಾತಾ,ತಾಲ್ಲೂಕು ಸಮನ್ವಯದಿಕಾರಿ ಛಾಯ ಕುಮಾರಿ ಹಾಗೂ ಸೇವಾಪ್ರತಿನಿಧಿ ಪುಷ್ಪ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.
