
ದೊಡ್ಡಬಳ್ಳಾಪುರ :ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವತಿಯಿಂದ ನಡೆದ ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟ 2024 ರಲ್ಲಿ ಭಾಗವಹಿಸಿ ಜಯಗಳಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಪಟುಗಳನ್ನು ಕಾಲೇಜಿನ ಸಿಬ್ಬಂದಿ ವರ್ಗ ಅಭಿನಂದಿಸಿ ಶುಭಹಾರೈಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಪಟುಗಳು ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟ 2024ದಲ್ಲಿ ಭಾಗವಹಿಸಿ ಚಿನ್ನದ ಪದಕ (10),ಬೆಳ್ಳಿ ಪದಕ – (6), ಕಂಚು ಪದಕ – (4 ) ಗಳನ್ನು ಗಳಿಸಿ 122 ಅಂಕಗಳನ್ನು ಪಡೆಯುವ ಮೂಲಕ ಪುರುಷ ವಿಭಾಗದಲ್ಲಿ ಚಾಂಪಿಯನ್ ಶಿಪ್ ಪ್ರಶಸ್ತಿ ಗಳಿಸಿದ್ದಾರೆ.
ಇದರೊಂದಿಗೆ ವಿಶ್ವವಿದ್ಯಾಲಯ ಮಟ್ಟದ 8 ಹೊಸ ದಾಖಲೆಗಳನ್ನು ಮಾಡಿ ಸಾಧನೆ ಮಾಡಿದ್ದಾರೆ. ರೋಹನ್ ವೆಂಕಟೇಶ ಕಟ್ವ ಉತ್ತಮ ಅಥ್ಲೆಟಿಕ್ ಪ್ರಶಸ್ತಿಗಳಿಸಿದ್ದಾರೆ .
ಕ್ರೀಡೆಯಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲ ಡಾ.ಸದಾಶಿವರಾಮಚಂದ್ರಗೌಡ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಶ್ರೀನಿವಾಸ.ಜಿ, ಪ್ರಾಧ್ಯಾಪಕರಾದ ಪ್ರಕಾಶ್ ಮಂಟೇದ, ಉಮೇಶ್, ಮಧುಸೂಧನ್ ರೆಡ್ಡಿ ವಿಶೇಷವಾಗಿ ಅಭಿನಂದಿಸಿದರು.
ಕ್ರೀಡಾಪಟುಗಳ ವಿವರ :
ಚಿನ್ನದ ಪದಕ : ರೋಹನ್ ವೆಂಕಟೇಶ ಕಟ್ವ (100 ಮೀ) ಸೈಯದ್ ಇರ್ಫಾನ್(400 ಮೀ), ರೋಹಿತ್ ಚೌಹಾಣ್ (110 ಹರ್ಡಲ್ಸ್) ,ಅಕ್ಷಯ್. ಎಂ. ಚೌಹಾಣ್(400 ಹರ್ಡಲ್ಸ್), ಉಜ್ವಲ್.ಕೆ. ವಿ (ಲಾಂಗ್ ಜಂಪ್ ,ಹೈ ಜಂಪ್) ಪುನೀತ್.ಎಸ್ (ತ್ರಿ ವಿಧ ಜಿಗಿತ), ಚಿರೇಷ್ಗೌಡ ಎಂ (ಹಾಫ್ ಮ್ಯಾರಥಾನ್), ಪುರುಷರು (4 *100 ರಿಲೇ) ಪುರುಷರು (4 * 400 ರಿಲೇ)
ಬೆಳ್ಳಿ ಪದಕ :
ಸಚಿನ್ .ಬಿ.ಬಿ (400 ಮೀ ಮತ್ತು 400 ಮೀ ಹರ್ಡಲ್ಸ್) , ಸೈಯದ್ ಇರ್ಫಾನ್ (800 ಮೀ ) , ರೋಹಿತ್ ಚೌಹಾಣ್ (ಎತ್ತರ ಜಿಗಿತ ) ಮಂಜುನಾಥ್ .ಎಸ್ .ಬಿ (ಗುಂಡು ಎಸೆತ) , ಮಿಕ್ಸಡ್ (4 * 400 ರಿಲೇ – ದ್ವಿತೀಯ) , ಲಕ್ಷ್ಮಿ (5000 ಮೀ)
ಕಂಚು ಪದಕ :
ಹೃತಿಕ್ ಸೂರ್ಯ (100 ಮೀ ಮತ್ತು 200 ಮೀ ), ಮಂಜುನಾಥ್.ಎಸ್.ಬಿ (ತ್ರಿ ವಿಧ ಜಿಗಿತ) ,ಶ್ರೇಯಸ್ಕುಮಾರ್ (1500 ಮೀ)