
ದೊಡ್ಡಬಳ್ಳಾಪುರ: ಕಾರ್ಮಿಕರಿಗೆ ಸೇಪ್ಟಿ ಕಿಟ್ ಟ್ರೈನಿಂಗ್ ಕಾರ್ಯಕ್ರಮವನ್ನು ಕಟ್ಟಡ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘ(ರಿ) ಇದರ ಅಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರು ಭಾಗವಹಿಸಿ ಸೇಫ್ಟಿ ಕಿಟ್ ನ ಬಗ್ಗೆ ಟ್ರೈನಿಂಗ್ ಪಡೆದರು.
ಈ ಸಮಯದಲ್ಲಿ ಕಟ್ಟಡ ಹಾಗೂ ಕೂಲಿ ಕಾರ್ಮಿಕರ ರಾಜ್ಯಾಧ್ಯಕ್ಷರಾದ ಶ್ರೀಮತಿ ಭಾಗ್ಯಲಕ್ಷ್ಮಿ ರವರು ಮಾತನಾಡಿ ಕಾರ್ಮಿಕ ಇಲಾಖೆಯಲ್ಲಿ ಈ ಮೊದಲೇ ನ್ಯೂಟ್ರಿಷನ್ ಕಿಟ್ ಕಾರ್ಮಿಕರಿಗೆ ವಿತರಿಸಿದ್ದು ಕಳಪೆ ಗುಣಮಟ್ಟದ ಕಿಟ್ ಗಳನ್ನು ನೀಡಿರುತ್ತಾರೆ, ಇದರಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜನವಾಗಿಲ್ಲವೆಂದು ಹೇಳುತ್ತಾ ಇದರ ಅವಶ್ಯಕತೆ ಕಾರ್ಮಿಕರಿಗೆ ಇಲ್ಲವೆಂದು ಸಾವಿರಾರು ಕಾರ್ಮಿಕರು ತಿಳಿಸಿರುತ್ತಾರೆ ಮತ್ತು ಇಂತಹ ಕಿಟ್ ಗಳ ಬದಲಾಗಿ ಅದೇ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿದ್ದರೆ ತಮಗೆ ಬೇಕಾದ ಆರೋಗ್ಯ ಸೌಲಭ್ಯವನ್ನು ತಾವೇ ಪಡೆದುಕೊಳ್ಳುತ್ತಿದ್ದೆವು ಎಂದು ತಿಳಿಸಿರುತ್ತಾರೆ ಎಂದು ಹೇಳಿದರು.
ಅದರಂತೆ ಎಲೆಕ್ಟ್ರಿಷಿಯನ್ ಕಿಟ್, ವೆಲ್ಡಿಂಗ್ ಕಿಟ್ಗಳನ್ನು ನೀಡಿದ್ದು ಅದರಲ್ಲಿ ಕಳಪೆ ಮಷೀನ್ ಗಳನ್ನು ಕಾರ್ಮಿಕ ಇಲಾಖೆ ನೀಡಿರುತ್ತದೆ ಈ ಮಿಷಿನ್ ಗಳು ಒಂದು ಬಾರಿ ಉಪಯೋಗಕ್ಕೆ ಮಾತ್ರ ಯೋಗ್ಯವಾಗಿವೆ. ಕಳಪೆ. ಇಂತಹ ಕಳಪೆ ಕಿಟ್ ಗಳನ್ನು ನೀಡಿರುವುದನ್ನ ಗಮನಿಸಿದರೆ ಕಾರ್ಮಿಕ ಇಲಾಖೆಯು ಯಾವುದೋ ಸಂಸ್ಥೆಗಳನ್ನು ಉದ್ದಾರ ಮಾಡಲು ಕೆಲವೊಂದು ಯೋಜನೆಗಳನ್ನು ರೂಪಿಸಿದಂತೆ ಕಾಣುತ್ತಿದೆ ಎಂದು ರಾಜ್ಯಾಧ್ಯಕ್ಷರಾದ ಭಾಗ್ಯಲಕ್ಷ್ಮಿಯವರು ಬೇಸರವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ಸದಸ್ಯರು, ಕೂಲಿ ಕಾರ್ಮಿಕರು ಹಾಜರಿದ್ದರು.