
ದೊಡ್ಡಬಳ್ಳಾಪುರ : ಮಾಜಿ ಶಾಸಕರಾದ ಜೆ.ನರಸಿಂಹಸ್ವಾಮಿಯವರು ನಿಧನರಾಗಿದ್ದು, ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡಪರ ಸಂಘಟನೆಗಳು, ದಲಿತ,ರೈತ, ಕಾರ್ಮಿಕ, ನೇಕಾರ ಹಾಗೂ ಪ್ರಗತಿಪರ ಸಂಘಟನೆಗಳಿಂದ ನುಡಿನಮನ ಕಾರ್ಯಕ್ರಮವನ್ನು ನಗರದ ಕನ್ನಡ ಜಾಗೃತ ಭವನದಲ್ಲಿ ಅಯೋಜನೆ ಮಾಡಲಾಗಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ.ನರಸಿಂಹಸ್ವಾಮಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಚಾರಣೆಯ ಮೂಲಕ ಅವರ ಸಾವಿಗೆ ಸಂತಾಪ ಸೂಚಿಸಲಾಗಿತು.
ಕನ್ನಡಪರ ಹೋರಾಟಗಾರರಾದ ರಾಜಘಟ್ಟ ರವಿ ಮಾತನಾಡಿ, ಜೆ.ನರಸಿಂಹಸ್ವಾಮಿ ತಮ್ಮ ಶಾಸಕರ ಅವಧಿಯಲ್ಲಿ ಯಾರ ಮನಸ್ಸಿಗೂ ನೋವು ತಂದವರಲ್ಲ, ಅಧಿಕಾರಿಗಳು, ಹೋರಾಟಗಾರರ ಜೊತೆ ಮಧುರ ಬಾಂಧವ್ಯವನ್ನು ಹೊಂದಿದ್ದರು, ಆದರೆ ಅವರಿಂದ ಹೆಸರು ಮಾಡಿದವರೇ ಅವರ ಹೆಸರು ಹಾಳು ಮಾಡಿದರು, ಅವರ ಅಂತಿಮ ದಿನಗಳನ್ನು ನೋಡಿದ್ದಾಗ ನನ್ನ ಕಣ್ಣಲ್ಲೇ ನೀರು ಬಂದಿದ್ದು, ಸದಾ ಬಡವರ ಪರವಾಗಿದ್ದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
ಕನ್ನಡಪರ ಹೋರಾಟಗಾರರಾದ ಡಿ.ಪಿ. ಆಂಜನೇಯ ಮಾತನಾಡಿ, ನರಸಿಂಹಸ್ವಾಮಿಯವರು ಅಪರೇಷನ್ ಕಮಲಕ್ಕೆ ಒಳಗಾದ ಸಮಯದಲ್ಲಿ ಯಡಿಯೂರಪ್ಪನವರ ಮುಂದೆ ದೊಡ್ಡಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ಸಂಪರ್ಕ ನೀಡುವಂತೆ ಮನವಿ ಮಾಡಿದರು, ವಿವಿಧ ಸಂಘಟನೆಗಳು ಅವರ ಬೆಂಗಳೂರಿನ ನಿವಾಸಿ ತೆರಳಿ ನರಸಿಂಹಸ್ವಾಮಿಯವರಿಗೆ ಮನವಿ ಮಾಡಲಾಗಿತು, ಅವರು ನೇರವಾಗಿ ನಮ್ಮನ್ನು ಅಂದಿನ ಸಾರಿಗೆ ಸಚಿವರಾಗಿದ್ದ ಆರ್, ಆಶೋಕ್ ಮುಂದೆ ದೊಡ್ಡಬಳ್ಳಾಪುರ ನಗರಕ್ಕೆ ಬಿಎಂಟಿಸಿ ಬಸ್ ಸೌಲಭ್ಯ ನೀಡುವಂತೆ ಮನವಿ ಮಾಡಿದರು, ಆರ್, ಅಶೋಕ್ ಮುಂದೆ ನಿಂತುಕೊಂಡೆ ಅವರು ಮನವಿ ಮಾಡಿದರು, ನರಸಿಂಹಸ್ವಾಮಿಯವರು ಪಟ್ಟು ಹಿಡಿದ ಕಾರಣಕ್ಕೆ ಇವತ್ತು ದೊಡ್ಡಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ಸೌಲಭ್ಯ ಸಿಕ್ಕಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರರಾದ ಸಂಜೀವ್ ನಾಯಕ್, ಪುರುಷೋತ್ತಮ್ ಗೌಡ, ಕಲಾವಿದರಾದ ಮಲ್ಲೇಶ್,ಹನುಮಣ್ಣ,ರವಿಕಿರಣ್, ಸತೀಶ್, ಗುರುರಾಜಪ್ಪ,ತೂಬಗೆರೆ ಷರೀಫ್, ಚಂದ್ರ ಶೇಖರ್ , ಸೇರಿದಂತೆ ಹಲವರು ಮುಖಂಡರು ಹಾಜರಿದ್ದರು.