
ದೊಡ್ಡಬಳ್ಳಾಪುರ : ಪ್ರಜಾಹಿತ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತಾಲ್ಲೂಕಿನ ಕೊಡಿಗೆಹಳ್ಳಿ ಗ್ರಾಮದ ಎಸ್.ಡಿ ರಂಗಸ್ವಾಮಿಯರಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.
ಇತ್ತಿಚೇಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಯಿತು.
ಪ್ರಶಸ್ತಿ ಪುರಸ್ಕೃತ ಎಸ್.ಡಿ ರಂಗದಾಮಯ್ಯ ಅವರನ್ನ ಕೊಡಿಗೆಹಳ್ಳಿ ಗ್ರಾಮ ಪಂಚಾಯತಿ ಮುಖಂಡರು, ಸಾರ್ವಜನಿಕರು ಅಭಿನಂದಿಸಿದರು.
ಈ ವೇಳೆ ಮಾತನಾಡಿದ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಹಸನಘಟ್ಟರವಿ ಮಾತನಾಡಿ ರಂಗದಾಮಯ್ಯ ಅವರು ಸರ್ಕಾರಿ ಸೇವೆಯಲ್ಲಿದ್ದುಕೊಂಡೆ ಕಲಾಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ, ಇವರ ರಂಗಭೂಮಿಯಲ್ಲಿನ ಸೇವೆಯನ್ನ ಗುರುತಿಸಿ ಇಲಾಖೆ ಅಭಿನಂದಿಸಿರುವುದು ಸ್ವಾಗತಾರ್ಹ ಎಂದರು.
ಪ್ರಶಸ್ತಿ ಪುರಸ್ಕೃತ ಎಸ್.ಡಿ ರಂಗದಾಮಯ್ಯ ಮಾತನಾಡಿ ೧೯೮೩ ರಲ್ಲಿ ಕಲಾರಂಗದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಭೀಮ, ದುರ್ಯೋಧನ, ಮಂತ್ರಿ, ಕುಂಬಕರ್ಣ ಹೀಗೆ ಹಲವು ಪಾತ್ರಗಳನ್ನ ಮಾಡಿದ್ದೇನೆ. ಕರ್ತವ್ಯದ ಒತ್ತಡದ ಮಧ್ಯೆ ಬಿಡುವಿನ ಸಮಯದಲ್ಲಿ ಕಲಾಸೇವೆ ಮಾಡುತ್ತಿದ್ದೇನೆ. ನಮ್ಮ ಕುಟುಂಬದ ತಾತ, ಮುತ್ತಾತ ಕಾಲದಿಂದಲೂ ನಾನು ರಂಗಭೂಮಿಯಲ್ಲಿದ್ದೇನೆ. ಅಭಿನಂದಿಸಿದ ಎಲ್ಲಾ ಮುಖಂಡರಿಗೆ ಕೃತಜ್ಞತೆ ಎಂದರು.
ಈ ಸಂದರ್ಭದಲ್ಲಿ ಮಾಜಿ ತಾ.ಪಂ ಸದಸ್ಯ ಹಸನಘಟ್ಟರವಿ, ಕೊಡಿಗೆಹಳ್ಳಿ ಅಧ್ಯಕ್ಷರಾದ ಆಶಾರಾಣಿನಾಗರಾಜು, ಗ್ರಾ.ಪಂ ಸದಸ್ಯರಾದ ಪ್ರೇಮ್ ದಾಸ, ಪಿ.ಆರ್ ವಿಜಯಕುಮಾರ್, ಯಾಕೂಬ್, ವಾಹೀದ್, ಮುನಿರಾಜು, ಆನಂದ್, ಸಿದ್ದಪ್ಪ, ಗೌರಿಶ್ ಮತ್ತಿತ್ತರರು ಇದ್ದರು.