ದೊಡ್ಡಬಳ್ಳಾಪುರ : ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕಾರೇತರ ನಾಮನಿರ್ದೇಶಿತರು ಇಂದು (ಡಿ. 09) ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯಕ್ಕೆ ಭೇಟಿಕೊಟ್ಟು ಅಧಿಕಾರ ಸ್ವೀಕರಿಸಿದರು.

ತಾಲ್ಲೂಕಿನ ಪ್ರಸಿದ್ಧ ದೇವಾಲಯ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಕೆಳಕಂಡ 05 ಮಂದಿ ಅಧಿಕಾರೇತರ ನಾಮನಿರ್ದೇಶಿತರಾಗಿ .ಎನ್.ರಂಗಪ್ಪ ಬಿನ್ ನಾರಾಯಣಸ್ವಾಮಪ್ಪ, ರವಿ ಕೆ.ಎಸ್ ಬಿನ್ ಸೀತಾರಾಮ ರಾವ್,ಲಕ್ಷ ನಾಯಕ ಬಿನ್ ಕಡಿಮೆ ನಾಯಕ,ಮಹೇಶ್ ಕುಮಾರ್, ಆರ್.ವಿ ಬಿನ್ ವೆಂಕಟೇಶ ಆರ್.ವಿ, ಹೇಮಲತ ಎಂ ಕೋಂ ರಮೇಶ್ ಎಂ.ಎಲ್. ರವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನಗೊಳಿಸಿ ಆದೇಶಿಸಿದೆ.

ಘಾಟಿ ಸುಬ್ರಮಣ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ನಾಮನಿರ್ದೇಶಿತರಾಗಿ ಆಯ್ಕೆಯಾಗಿರುವ ಆರ್ ವಿ ಮಹೇಶ್ ಮಾತನಾಡಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸಲು ಅವಕಾಶ ಕಲ್ಪಿಸಲಾಗಿದೆ, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸದಸ್ಯರ ಸಹಕಾರ ಹಿರಿಯರ ಮಾರ್ಗದರ್ಶನದೊಂದಿಗೆ ನಿರ್ವಹಿಸಲಾಗುವುದು ಎಂದರು. ನೂತನ ಸದಸ್ಯರಿಗೆ ಶುಭ ಕೋರಿದರು.

ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸದಸ್ಯರು 5 ಮಂದಿ ಘಾಟಿ ಸನ್ನಿಧಾನದಲ್ಲಿ ಪದಗ್ರಹಣ ನಡೆಸಿದರು, ನೂತನ ಸದಸ್ಯರಿಗೆ ಮುಖಂಡರು ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದರು.

ಈ ವೇಳೆ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಚುಂಚೇಗೌಡ, ಸದಸ್ಯರಾದ ಅಪ್ಪಿ ವೆಂಕಟೇಶ್, ಕಾಂಗ್ರೆಸ್ ಮುಖಂಡರಾದ ರಾಜಘಟ್ಟ ನಾರಾಯಣಸ್ವಾಮಿ, ಗಂಗಸಂದ್ರ ಶೀಧರ್, ಕಾಂತರಾಜು, ಗೋಪಾಲ ನಾಯಕ್, ವಕೀಲರಾದ ಆರ್.ವಿ.ಮನುಕುಮಾರ್, ವಕೀಲರಾದ ಆರ್ ವಿ ಶಿವಕುಮಾರ್ ಇದ್ದರು.
