
ದೊಡ್ಡಬಳ್ಳಾಪುರ : ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕಾರೇತರ ನಾಮನಿರ್ದೇಶಿತರಾಗಿ ಆಯ್ಕೆಯಾಗಿರುವ ವಕೀಲರು, ಮುಖಂಡರು ಆದ ಆರ್ ವಿ ಮಹೇಶ್ ರವರನ್ನು ರೋಜಿಪುರ ಯುವಕರು, ಸ್ಥಳೀಯ ಮುಖಂಡರು, ಕನ್ನಡ ಪರ ಹೋರಾಟಗಾರರು ಸನ್ಮಾನಿಸಿ ಗೌರವಿಸಿದರು.
ನಗರದ ರೋಜಿಪುರ ವಾರ್ಡ್ ನ ಮಾರಮ್ಮ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಸ್ಥಳೀಯ ಮುಖಂಡರು ಹಾಗೂ ವಕೀಲರಾದ ಆರ್ ವಿ ಮಹೇಶ್ ರವರಿಗೆ ಪುಷ್ಪಮಾಲೆ ಹಾಕುವ ಮೂಲಕ ಸನ್ಮಾನಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಲಾಯಿತು.
ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರೇತರ ನಾಮನಿರ್ದೇಶಿತರಾಗಿ ನೂತನವಾಗಿ ಆಯ್ಕೆಯಾಗಿರುವ ಆರ್ ವಿ ಮಹೇಶ್ ಮಾತನಾಡಿ ಜಿಲ್ಲಾ ಉಸ್ತುವಾರಿಗಳಾದ ಕೆ ಎಚ್ ಮುನಿಯಪ್ಪ ಜೀ ಹಾಗೂ ತಾಲೂಕಿನ ಜನಪ್ರಿಯ ನಾಯಕರದ ಮಾಜಿ ಶಾಸಕ ವೆಂಕಟರಮಣಯ್ಯ ಅವರ ಮಾರ್ಗದರ್ಶನ ಹಾಗೂ ದೇವರ ಆಶೀರ್ವಾದ ಇಂದು ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಪ್ರಾಧಿಕಾರದಲ್ಲಿ ಉತ್ತಮ ಸ್ಥಾನ ದೊರೆತಿದೆ .ಮತ್ತಷ್ಟು ಅಭಿವೃದ್ಧಿ ಕಾರ್ಯಗಳ ಮೂಲಕ ದೇವಾಲಯದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಲಾಗುವುದು ಹಾಗೂ ನನಗೆ ಸಿಕ್ಕಿರುವ ಯಶಸ್ಸನ್ನು ರೋಜಿಪುರ ಗ್ರಾಮದ ಯುವಕರು, ಸ್ಥಳೀಯ ಮುಖಂಡರು, ಕನ್ನಡ ಪರ ಹೋರಾಟಗಾರರು ಸಂಭ್ರಮಿಸುತ್ತಿರುವ ಪರಿ ನೀಡಿರುವ ಪ್ರೀತಿ,ವಿಶ್ವಾಸಕ್ಕೆ ನಾನು ಸದಾ ಚಿರಋಣಿ ಎಂದರು.
ರೋಜಿಪುರ ದಲಿತ ಸಮುದಾಯಕ್ಕೆ ನೂರು ಮನೆಗಳು ನಿರ್ಮಾಣ
ರೋಜಿಪುರ ಯುವಕರೊಂದಿಗೆ ಆರ್ ವಿ ಮಹೇಶ್ ಮಾತನಾಡುತ್ತಾ ರೋಜಿಪುರ ಕಾಲೋನಿಯು ಸ್ಲಂ ಬೋರ್ಡ್ ಅಡಿಯಲ್ಲಿ ನಮೂದಾಗಿದ್ದು ಸ್ಥಳೀಯ ದಲಿತ ಕುಟುಂಬಗಳಿಗೆ ಮನೆಗಳ ಅವಶ್ಯಕತೆ ಇದೆ , ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಎಚ್ ಮುನಿಯಪ್ಪಜಿ ಅವರ ಬಳಿ ಮನವಿ ಮಾಡಿದ್ದೇನೆ , ಸಚಿವರು ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದು,ಸ್ಥಳೀಯ ವಾರ್ಡ್ ನ ಸದಸ್ಯರೊಂದಿಗೆ ಮಾತುಕತೆ ನಡೆಸಿ ಕಾಲೋನಿಯಲ್ಲಿ ನೂರು ಮನೆಗಳ ನಿರ್ಮಾಣಕ್ಕೆ ಅನುದಾನ ತರಲಾಗುವುದು ಎಂದರು.
ಕರವೇ( ನಾರಾಯಣ ಗೌಡರ ಬಣ ) ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಮಾತನಾಡಿ ವಕೀಲ ವೃತ್ತಿಯಿಂದ ಜನಪ್ರಿಯತೆ ಗಳಿಸಿರುವ ಆರ್ ವಿ ಮಹೇಶ್ ರವರು ಇಂದು ತಾಲೂಕಿನ ಪ್ರಸಿದ್ಧ ದೇವಾಲಯಗಳು ಒಂದಾದ ಘಾಟಿ ಸುಬ್ರಹ್ಮಣ್ಯ ಪ್ರಾಧಿಕಾರದಲ್ಲಿ ಸ್ಥಾನ ಪಡೆದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ, ಮುಂದೆ ಆರ್ ವಿ ಮಹೇಶ್ ಮತ್ತು ಕುಟುಂಬಸ್ಥರಿಂದ ಸಮಾಜಕ್ಕೆ ಮತ್ತಷ್ಟು ಉತ್ತಮ ಸೇವೆಗಳು ಲಭಿಸಲಿ ಎಂದು ಶುಭ ಹಾರೈಸಿದರು.
ವಕೀಲರದ ಆರ್ ವಿ ಮನು ಮಾತನಾಡಿ ನಮ್ಮ ಕುಟುಂಬದ ಸದಸ್ಯರು ಘಾಟಿ ಸುಬ್ರಮಣ್ಯ ಪ್ರಾಧಿಕಾರದಲ್ಲಿ ಸ್ಥಾನ ಪಡೆದಿರುವುದು ಸಂತಸದ ವಿಷಯವಾಗಿದೆ , ದೇವಾಲಯದ ಅಭಿವೃದ್ಧಿ ಕುರಿತಂತೆ ನಮ್ಮ ಕುಟುಂಬದ ಸಹಕಾರ ಸದಾ ಇರುತ್ತದೆ , ಈ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ನಮ್ಮ ಕುಟುಂಬವು ಆಭಾರಿಯಾಗಿರುತ್ತದೆ , ಈ ಯಶಸ್ಸನ್ನು ಸಂಭ್ರಮಿಸುತ್ತಿರುವ ನಮ್ಮ ಹಿತೈಷಿಗಳಿಗೆ ಸ್ನೇಹಿತರಿಗೆ ಬಂಧುಗಳಿಗೆ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ರೋಜಿಪುರ ವಾರ್ಡ್ ನ ಮುಖಂಡರು, ಕಾಲೋನಿಯ ಯುವ ಸಮುದಾಯ, ಆರ್ ವಿ ಮಹೇಶ್ ಅಭಿಮಾನಿಗಳು ಉಪಸ್ಥಿತರಿದ್ದರು.