
ಬೆಂಗಳೂರು : ಕಲರ್ಸ್ ಕನ್ನಡ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಆದ ಬಿಗ್ ಬಾಸ್ 11 ಕಾರ್ಯಕ್ರಮವು (ಫಿನಾಲೆ ವಾರ) ಮುಕ್ತಾಯದ ಹಂತ ತಲುಪಿದ್ದು ಈ ಬಾರಿ ಬಿಗ್ ಬಾಸ್ ಕಿರೀಟ ಹೊತ್ತುಕೊಳ್ಳುವಲ್ಲಿ ಉತ್ತರ ಕರ್ನಾಟಕದ ಗಾನ ಪ್ರತಿಭೆ ಹನುಮಂತ ಯಶಸ್ವಿಯಾಗಿದ್ದಾರೆ .
ಸಂಗೀತದ ಮೂಲಕ ಜನರ ಮನಸ್ಸು ಗೆದ್ದಿರುವ ಗಾಯಕ ಹನುಮಂತ ಈ ಬಾರಿ ಬಿಗ್ ಬಾಸ್ ಪಟ್ಟ ( BBK11 WINNER )ಗೆದ್ದಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಹನುಮಂತ ತನ್ನ ಮುಗ್ಧತೆ ಹಾಗೂ ಚಾಣಾಕ್ಷತನದಿಂದ ಬಿಗ್ ಬಾಸ್ ಅಭಿಮಾನಿಗಳ (ಜನರ )ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಬಿಗ್ ಬಾಸ್ 11 ರಲ್ಲಿ ಹನುಮಂತ ಮೊದಲನೇ ಸ್ಥಾನ ಪಡೆದುಕೊಂಡಿದ್ದು ಎರಡನೇ( 1st RUNNER UP) ಸ್ಥಾನವನ್ನು ತ್ರಿವಿಕ್ರಮ ಪಡೆದುಕೊಂಡಿದ್ದಾರೆ. ಇನ್ನೂ ( 2nd RUNNERUP ) ಮೂರನೇ ಸ್ಥಾನಕ್ಕೆ ರಜತ್ ತೃಪ್ತಿ ಪಟ್ಟುಕೊಂಡಿದ್ದಾರೆ.