
ಬೆಂಗಳೂರು ಗ್ರಾಮಾಂತರ : ನೂತನ ಜಿಲ್ಲಾಧಿಕಾರಿ ರವರನ್ನು ಸ್ವಾಗತ ಕೋರಿದ ಜಿಲ್ಲಾ ಸಪಾಯಿ ಕರ್ಮಚಾರಿ ಸಮಿತಿಯ ಸದಸ್ಯರಾದ ಆರ್ ವಿ ಮನು ಹಾಗೂ ಜಿಲ್ಲಾಧಿಕಾರಿ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಫಾಯಿ ಕರ್ಮಚಾರಿ ಪುನರ್ ವಸತಿ ಸಮಿತಿ ಸಭೆ ನೆಡೆಯಿತು
ಸಭೆಗೆ ಮುನ್ನ ನೂತನ ಜಿಲ್ಲಾಧಿಕಾರಿಗಳನ್ನು ಜಿಲ್ಲಾ ಸಪಾಯಿ ಕರ್ಮಚಾರಿ ಸಮಿತಿಯ ಸದಸ್ಯರಾದ ಆರ್ ವಿ ಮನು ಮತ್ತು ಇತರೆ ಸದಸ್ಯರು ಸಸಿ ನೀಡಿ ಸ್ವಾಗತಿಸಿದರು.
ಈ ಕುರಿತು ಜಿಲ್ಲಾ ಸಪಾಯಿ ಕರ್ಮಚಾರಿ ಸಮಿತಿಯ ಸದಸ್ಯರಾದ ಆರ್ ವಿ ಮನು ಮಾತನಾಡಿ ಸಭೆಯಲ್ಲಿ ಸಪಾಯಿ ಕರ್ಮಚಾರಿಗಳ ಹಲವು ಸಮಸ್ಯೆಗಳನ್ನು ಒಳಗೊಂಡಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿತ್ತು.ಸಪಾಯಿ ಕರ್ಮಚಾರಿಗಳ ಅಭಿವೃದ್ಧಿಗಾಗಿ ಹಾಗೂ ಅವರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು ಎಂದರು.
ಸರ್ಕಾರದ ಆದೇಶದಂತೆ ಶ್ರೀ ಶ್ರೀ ಯೋಗಿ ನಾರಾಯಣ ಶ್ರೀ ಕೈವಾರ ತಾತಯ್ಯನವರ ಪೂಜೆಯಲ್ಲಿ ಜಿಲ್ಲಾ ಸಪಾಯಿ ಕರ್ಮಚಾರಿ ಸಮಿತಿಯ ಸದಸ್ಯರಾದ ಮನು ಆರ್ ವಿ, ಮ್ಯಾಥೋ ಮುನಿಯಪ್ಪ,ರವಿ,ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಈ ಸಮಯದಲ್ಲಿ ಹಾಜರಿದ್ದರು.