
ದೊಡ್ಡಬಳ್ಳಾಪುರ : ಕೆ ಆರ್ ಎಸ್ ಪಕ್ಷದ ಸದಸ್ಯರು ಯಾವುದೇ ಭತ್ಯೆ, ಗೌರವಧನ ಪಡೆಯದೆ ಅನುಷ್ಠಾನ ಸಮಿತಿಯಲ್ಲಿ ಸ್ವಯಂಸೇವಕರ ಕಾರ್ಯನಿರ್ವಹಿಸಲು ಸಿದ್ದರಿದ್ದೇವೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ತನ್ನ ಪಂಚ ಗ್ಯಾರೆಂಟಿ ಯೋಜನೆಗಳನ್ನು ಸಮಪರ್ಕವಾಗಿ ಅನುಷ್ಠಾನ ಮಾಡಬೇಕೆಂಬ ಉದ್ದೇಶ ಇದ್ದರೆ ಕೆ ಆರ್ ಎಸ್ ಪಕ್ಷದ ಸೈನಿಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಸಾರ್ವಜನಿಕ ಹಣವನ್ನು ಉಳಿಸಲಿ ಇಲ್ಲಾ ತಕ್ಷಣವೇ ಈ ಗ್ಯಾರೆಂಟಿ ಅನುಷ್ಠಾನ ಸಮಿತಿಗಳನ್ನು ರದ್ದುಪಡಿಸಲಿ ಎಂದು ಆರ್ ಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ ಶಿವಶಂಕರ್ ಆಗ್ರಹಿಸಿದರು.
ತಾಲೂಕಿನ ಕೆ ಆರ್ ಎಸ್ ಪಕ್ಷದ ಕಛೇರಿಯಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿ ಮಾಡುವ ಕಾರಣ ನಿಟ್ಟಿನಲ್ಲಿ “ಗ್ಯಾರಂಟಿ ಅನುಷ್ಠಾನ ಸಮಿತಿ”ಗಳನ್ನು ರಚಿಸಿದೆ ಸಮಿತಿಯ ಪದಾಧಿಕಾರಿಗಳಿಗೆ ಮಾಸಿಕ ವೇತನ ಮತ್ತು ಸದಸ್ಯರುಗಳಿಗೆ ಸಭಾ ಭತ್ಯೆ ನೀಡಲಾಗುತ್ತಿದ್ದು, ಇದರಿಂದ ಈ ತಿಂಗಳು ಅಂದಾಜು 2 ಕೋಟಿ ಸರ್ಕಾರಕ್ಕೆ ಹೊರೆಯಾಗುತ್ತಿದೆ. ಸರ್ಕಾರದಲ್ಲಿ ಹಣವಿಲ್ಲದೆ, ಗ್ಯಾರಂಟಿ ಯೋಜನೆಗಳಿಗೆ ಬಿಡುಗಡೆ ಮಾಡಲಾಗುತ್ತಿಲ್ಲ, ಆದರೆ, ವಾರ್ಷಿಕವಾಗಿ 30 ಕೋಟಿ ಹಣವನ್ನು ಸರ್ಕಾರ ಈ ಸಮಿತಿಗೆ ವೆಚ್ಚ ಮಾಡುತ್ತಿದೆ.ಗ್ಯಾರೆಂಟಿ ಅನುಷ್ಠಾನ ಸಮಿತಿಯಲ್ಲಿ ಉಚಿತವಾಗಿ ಕೆ ಆರ್ ಎಸ್ ಕಾರ್ಯಕರ್ತರು ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಗ್ಯಾರೆಂಟಿ ಯೋಜನೆಯ ಭಾಗವಾಗಿ ಸಾರಿಗೆ ನಿಗಮಗಳಿಗೆ 900 ಕೋಟಿಗೂ ಅಧಿಕ ಹಣ ಪಾವತಿಸಬೇಕಿದೆ, ಇನ್ನೂ ಎರಡು ತಿಂಗಳ ಗೃಹಲಕ್ಷ್ಮಿ ಹಣ ರಾಜ್ಯದ ಮಹಿಳೆಯರಿಗೆ ತಲುಪಿಲ್ಲ, ಆದರೂ ಕಾಂಗ್ರೆಸ್ ಕಾರ್ಯಕರ್ತರ ಓಲೈಕೆಗೆ ಹಣ ವೆಚ್ಚ ಮಾಡಲಾಗುತ್ತಿದೆ. ಇನ್ನು ರಾಜ್ಯದ ಹಲವಾರು ಕೆರೆ ಅಭಿವೃದ್ಧಿಗಾಗಿ ಒಂದೆರಡು ಕೋಟಿಯ ಯೋಜನೆಗಳಿಗೆ ಹಣ ಇಲ್ಲವೆಂದು ಸರ್ಕಾರ ಪ್ರಸ್ತಾವನೆಗಳ ತಿರಸ್ಕರಿಸಿದೆ, ವಿದ್ಯಾರ್ಥಿ ವೇತನ ನೀಡಲು ಹಣವಿಲ್ಲ, ಆದರೆ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲು ಹಣ ಇದೆ ಎಂದು ಆರೋಪಿಸಿದರು.
ಸರ್ಕಾರದ ಆಡಳಿತ ಯಂತ್ರ ಸುಸ್ಥಿಯಲ್ಲಿದ್ದರೆ ಮತ್ತು ಶಾಸಕರು ತಮ್ಮ ಕರ್ತವ್ಯವನ್ನು ಸೂಕ್ತವಾಗಿ ನಿಭಾಯಿಸಿದರೆ ಸಮಿತಿಗಳ ಅಗತ್ಯವೇ ಇರುವುದಿಲ್ಲ. ಗ್ಯಾರಂಟಿ ಅನುಷ್ಠಾನ ಸಮಿತಿಗಳ ಉದ್ದೇಶ ಸಾರ್ವಜನಿಕ ಹಿತಾಸಕ್ತಿಯೇ ಆಗಿದ್ದರೆ ಕೆ ಆರ್ ಎಸ್ ಪಕ್ಷದ ಸದಸ್ಯರು ಯಾವುದೇ ಭತ್ಯೆ, ಗೌರವಧನ ಪಡೆಯದೆ ಅನುಷ್ಠಾನ ಸಮಿತಿಯಲ್ಲಿ ಸ್ವಯಂಸೇವಕರ ಕಾರ್ಯನಿರ್ವಹಿಸಲು ಸಿದ್ದರಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಿ.ಶಿವಶಂಕರ್ , ಕಾರ್ಮಿಕ ಘಟಕ ಜಿಲ್ಲಾ ಕಾರ್ಯದರ್ಶಿ ಲೀಲಾ ರಾಮ್, ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಮಾರುತಿ, ತಾಲೂಕು ಪ್ರಧಾನ ಕಾರ್ಯದರ್ಶಿ ಮುರಾರಿ ದೊಡ್ಡಬಳ್ಳಾಪುರ , ದೊಡ್ಡಬಳ್ಳಾಪುರ ತಾಲೂಕು ಮಹಿಳಾ ಅಧ್ಯಕ್ಷರಾದ ಚಂದ್ರಿಕಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.