
ದೊಡ್ಡಬಳ್ಳಾಪುರ : ತಾಲ್ಲೂಕಿನ ರಾಜಘಟ್ಟ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತಕ್ಕೆ ಮಂಗಳವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕ್ರಮವಾಗಿ ಮುನಿಹನುಮಯ್ಯ, ಆನಂದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ, ಚುನಾವಣಾಧಿಕಾರಿ ನಾಗಮಣಿ ಕೆ.ಎನ್ ಘೋಷಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನ ಶಾಸಕ ಧೀರಜ್ ಮುನಿರಾಜು ಅಭಿನಂದಿಸಿ ಮಾತನಾಡಿದರು 2024-29 ನೇ ಸಾಲಿನ ಅವಧಿಗೆ ಈ ಚುನಾವಣೆ ನಡೆದಿದ್ದು ಮುಂದಿನ ಐದು ವರ್ಷಗಳ ಕಾಲ ಸಂಘವು ರೈತರ ಪರವಾಗಿ ನಡೆದುಕೊಂಡು, ಸಂಘವನ್ನ ಲಾಭದತ್ತ ಕೊಂಡೊಯ್ಯಬೇಕು. ರಾಜಘಟ್ಟ ವಿಎಸ್ಎಸ್ಎನ್ ಬಲಿಷ್ಟವಾಗಿ ರೂಪಗೊಳ್ಳಲಿ, ಎಲ್ಲರೂ ಒಗ್ಗಟ್ಟಾಗಿ ಅಭಿವೃದ್ಧಿಗೆ ಶ್ರಮಿಸೋಣ ಎಂದು ಶುಭ ಹಾರೈಸಿದರು.
ದೊಡ್ಡಬಳ್ಳಾಪುರದ ರಾಜಘಟ್ಟ ವಿಎಸ್ಎಸ್ಎನ್ ನೂತನ ಅಧ್ಯಕ್ಷ ಮುನಿಹನುಮಯ್ಯ, ಉಪಾಧ್ಯಕ್ಷ ಆನಂದ್ ರನ್ನ ಶಾಸಕ ಧೀರಜ್ ಮುನಿರಾಜು ಅಭಿನಂದಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಭೈರೇಗೌಡ, ಆಂಜಿನಪ್ಪ, ಬಾಬು, ದೇವರಾಜು, ಮುನಿಯಪ್ಪ, ಕೋಡಿ ನರಸಿಂಹಮೂರ್ತಿ, ಶಾಂತಮ್ಮ, ಓಬಳೇಶ್, ಚನ್ನಪ್ಪ. ಭಾಸ್ಕರ್ ರಾವ್, ಮುನಿರತ್ನಮ್ಮ ಮುಖಂಡರಾದ ಕುಮಾರ್, ಶಿವಕುಮಾರ್, ಅಂಬರೀಶ್, ಹರೀಶ್ , ಶಿವು, ಕಾಂತರಾಜು, ದಾಸಗೊಂಡನಹಳ್ಳಿ ಹರೀಶ್. ಚನ್ನಕೇಶವ ಉಪಸ್ಥಿತರಿದ್ದರು.