ದೊಡ್ಡಬಳ್ಳಾಪುರ ತೂಬಗೆರೆ : ಸಂಪೂರ್ಣ ಹಾಳಾಗಿದ್ದ ರಸ್ತೆಯನ್ನು ವಾಹನ ಸವಾರರು ಪಾದಚಾರಿಗಳು ಸಂಚರಿಸಲು ಸಹಕಾರಿಯಾಗುವಂತೆ ಸಚಿವರ ಸಹಕಾರದಿಂದ ಉತ್ತಮ ಕಾಂಕ್ರೀಟ್ ರಸ್ತೆ ನಿರ್ಮಿಸುವ ಮೂಲಕ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ತೂಬಗೆರೆ ಗ್ರಾಮಸ್ಥರು ಸ್ಥಳೀಯ 3ನೇ ವಾರ್ಡ್ ನ ಸದಸ್ಯರಾದ ಲೋಕೇಶ್ವರಿ ರವಿಸಿದ್ದಪ್ಪ ಅವರನ್ನು ಅಭಿನಂದಿಸಿದ್ದಾರೆ.

ತೂಬಗೆರೆ ಗ್ರಾಮದ ಅಂಗಡಿ ಬೀದಿಯ ರಸ್ತೆಗಳು ಹಲವು ವರ್ಷಗಳಿಂದ ಯಾವುದೇ ರೀತಿಯ ಅಭಿವೃದ್ಧಿ ಕಾಣದೆ ಸಂಪೂರ್ಣ ಹಳ್ಳಗಳಿಂದ ಕೂಡಿದ್ದು, ಸಾರ್ವಜನಿಕರು ಸಂಚರಿಸಲು ಪರದಾಡುತ್ತಿದ್ದೆವು, ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಹಲವು ಬಾರಿ ಮನವಿ ಸಲ್ಲಿಸಿದರು ಸಹ ಯಾವುದೇ ಪ್ರಯೋಜನವಾಗಿರಲಿಲ್ಲ , ಆದರೆ ಪ್ರಸ್ತುತ 3ನೇ ವಾರ್ಡ್ ನ ಮುಖಂಡರಾದ ರವಿ ಸಿದ್ದಪ್ಪರವರು ವೈಯಕ್ತಿಕವಾಗಿ ಸ್ಥಳೀಯ ರಸ್ತೆಗಳ ಅಭಿವೃದ್ಧಿ ಕುರಿತು ಸಚಿವರ ಗಮನಕ್ಕೆ ತರುವ ಮೂಲಕ ರಸ್ತೆ ಸರಿಪಡಿಸಿರುವುದು ಸಂತಸದ ವಿಷಯವಾಗಿದೆ ಎಂದರು.


ಕೇವಲ ರಸ್ತೆ ಅಷ್ಟೇ ಅಲ್ಲದೆ , ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಶೀಘ್ರದಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಅವರ ಕಾರ್ಯವೈಕರಿ ಶ್ಲಾಘನೀಯವಾದದ್ದು, ಅವರ ಈ ಸಮಾಜಮುಖಿ ಕಾರ್ಯಗಳು ಮತ್ತಷ್ಟು ಹೆಚ್ಚಾಗಲಿ ಎಂದು ಗ್ರಾಮಸ್ಥರು ಹಾರೈಸಿದ್ದಾರೆ.
