ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿ ಯದ್ದಲಹಳ್ಳಿ ಸಮೀಪವಿರುವ ಮಲೆನಾಡಿನ ಅನುಭವ ನೀಡುವ, ಪ್ರಕೃತಿ ರಮಣೀಯತೆಗೆ ಹೆಸರಾಗಿರುವ ಬೆನಕನಹಳ್ಳ ಶ್ರೀ ಬೆನಕಪ್ಪ ಸ್ವಾಮಿ ದೇವಸ್ಥಾನದಲ್ಲಿ ಯುಗಾದಿ ಅಮಾವಾಸ್ಯೆಯ ದಿನ ವಾಮಾಚಾರ ಮಾಡಿ ನಿಧಿ ಕಳ್ಳರು ಪುರಾತನ ಛತ್ರ ವಿರೂಪಗೊಳಿಸಿ ಹಳ್ಳ ತೆಗೆದು ಹುಡುಕಾಟ ನಡೆಸಿರುವ ಘಟನೆ ನಡೆದಿದೆ.

ನಿರ್ಜನ ಪ್ರದೇಶದಲ್ಲಿರುವ ಬೆನಕಪ್ಪ ದೇವಾಲಯದ ಛತ್ರದಲ್ಲಿ ನಿಧಿ ಶೋಧಕ್ಕಾಗಿ ದಿಗ್ಭಂಧನ, ಪೂಜೆ, ಮಾಟ, ಮಂತ್ರ ಮಾಡಲಾಗಿದೆ. ಗುಂಡಿ ತೋಡಿ ಕುಡಿಕೆ,ಅರಿಶಿಣ, ಕುಂಕುಮ ಹಾಗೂ ವಾಮಾಚಾರಕ್ಕೆ ಬಳಸುವ ವಸ್ತುಗಳನ್ನು ಉಪಯೋಗಿಸಿ ಶೋಧಕಾರ್ಯ ನಡೆಸಿದ್ದಾರೆ. ಈ ಘಟನೆಯಿಂದ ದೇವಾಲಯದ ಬಳಿ ಗ್ರಾಮಸ್ಥರು ತೆರಳು ಭಯ ಭೀತರಾಗಿದ್ದಾರೆ.
Ad
Ad
Ad
ದೇವಸ್ಥಾನದ ಅರ್ಚಕ ಕುಟುಂಬದ ಉದಯ ಆರಾಧ್ಯ ಮಾತಾನಾಡಿ, ತಾಲೂಕಿನಾದ್ಯಂತ ದೇವಾಲಯಗಳ ಹುಂಡಿ ಕಳ್ಳತನ ಪ್ರಕರಣಗಳು ಹೆಚ್ಚಾಗಿರುವ ಜೂತೆಗೆ ಈಗ ನಿಧಿ ಕಳ್ಳರು ಹಾವಳಿ ಶುರುವಾಗಿದೆ. ಇತ್ತೀಚಿಗೆ ಘಾಟಿ ಸುಬ್ರಹ್ಮಣ್ಯ ರಸ್ತೆಯ ದೇವರ ಬೆಟ್ಟದಲ್ಲಿರುವ ಗುಟ್ಟೆನರಸಿಂಹಸ್ವಮಿ ದೇವಾಲದಲ್ಲೂ ಇದೇ ಮಾದರಿಯ ಶೋಧ ನಡೆಸಿ ಕಲ್ಲಿನ ಮೂರ್ತಿಯನ್ನೇ ಅಪಹರಿಸಿದ್ದರು.
ಸರ್ಕಾರ ನಿರ್ಜನ ಪ್ರದೇಶದಲ್ಲಿರುವ ದೇವಸ್ಥಾನಗಳಿಗೆ ಸೂಕ್ತ ಭದ್ರತೆ ಹೊದಗಿಸಬೇ ಮನವಿ ಮಾಡುತ್ತೇನೆ ಎಂದರು. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

