
ಶಿವಮೊಗ್ಗದ ರಾಮಕೃಷ್ಣ ವಿವೇಕಾನಂದ ಆಶ್ರಮದ ಮಾರ್ಗದರ್ಶನದಲ್ಲಿ ವಿನೋಬ ನಗರದ ಮೂರನೇ ಹಂತದ 8ನೇ ತಿರುವಿನಲ್ಲಿರುವ ಶ್ರೀ ಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಏಪ್ರಿಲ್ 14ರಿಂದ 20ರವರೆಗೆ 5 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ವಾರದ ವಿಶೇಷ ಬೇಸಿಗೆ ಶಿಬಿರ “ ವಸಂತ ವಿಹಾರ 2025 “ ಹಮ್ಮಿಕೊಳ್ಳಲಾಗಿದೆ.
ಏಪ್ರಿಲ್ 14ರ ಸೋಮವಾರದಿಂದ ಏಪ್ರಿಲ್ 20ರ ಭಾನುವಾರದವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಶಿಬಿರ ನಡೆಯಲಿದೆ. ಧ್ಯಾನ, ದಿವ್ಯತ್ರಯರ ದಿವ್ಯ ಜೀವನ, ಸಂಸ್ಕೃತ ಶ್ಲೋಕಗಳು, ರಾಮಾಯಣ, ಮಹಾಭಾರತದ ಕಥೆಗಳು, ಚಿತ್ರಕಲೆ, ಆರ್ಟ್ ಅಂಡ್ ಕ್ರಾಫ್ಟ್, ಸಂಗೀತ ಮತ್ತು ಭಜನೆ, ಸ್ವಾತಂತ್ರ್ಯ ಹೋರಾಟ, ಮಹಾಪುರುಷರ ಜೀವನ, ಆಟಗಳು, ಕ್ವಿಜ್, ಸೈನಿಕರು ಇವೆಲ್ಲವುಗಳ ಸಂಕ್ಷಿಪ್ತ ಪರಿಚಯವನ್ನು ನುರಿತ ಸಂಪನ್ಮೂಲ ವ್ಯಕ್ತಿಗಳು ಮಾಡಿಕೊಡುವರು. ಉಚಿತ ಶಿಬಿರ ಇದಾಗಿರುತ್ತದೆ.
ಮೊದಲು ನೋಂದಾಯಿಸಿದ 30 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ. 8317443637 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.