
ಜಾತಿಗಣತಿ ವಿಚಾರವಾಗಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ಎಲ್ಲರಿಗೂ ಅವರವರ ಅಭಿಪ್ರಾಯ ಹೇಳಿದ್ದಾರೆ ಚರ್ಚೆ ಮುಂದುವರಿದಿದೆ ಎಲ್ಲರ ಅಭಿಪ್ರಾಯ ಕೇಳಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ, ಇದು ಒಬ್ಬರ ನಿರ್ಧಾರ ಅಲ್ಲ. ಕ್ಯಾಬಿನೆಟ್ ನಿರ್ಧಾರ ಆಗಿರುತ್ತದೆ ಎಂದರು
ಜಾತಿ ಗಣತಿ ಸರ್ವೆಯ ಉದ್ದೇಶ ಸಾಮಾಜಿಕ ಶೈಕ್ಷಣಿಕ, ಆರ್ಥಿಕವಾಗಿ ಸಮುದಾಯಗಳ ಸ್ಥಿತಿ ಗತಿ ತಿಳಿಯುವುದು ಜಾತಿ ಪ್ರಮಾಣ ಎಷ್ಟಿದೆ ಎಂಬ ಮಾಹಿತಿ ಈಗಾಗಲೇ ಸರ್ಕಾರಕ್ಕೆ ಸಿಕ್ಕಿದ್ದು, ಸರ್ಕಾರವು ಆ ಆಧಾರದ ಮೇಲೆ ಕಾರ್ಯಕ್ರಮ ರೂಪಿಸಬೇಕಿದೆ ಎಂದರು.
ಆದರೆ ಕೆಲ ಸಮುದಾಯದ ಮುಖಂಡರು ತಮ್ಮ ಸಮುದಾಯ ಹೆಚ್ಚಿರಬೇಕಿತ್ತು ಅಂತ ಆತಂಕ ವ್ಯಕ್ತಪಡಿಸಿದ್ದಾರೆ, ಆದರೆ ಈಗ ಲಭ್ಯವಾಗಿರುವ ಮಾಹಿತಿಯನ್ನು ನಾನು ಅದ್ಯಯನ ಮಾಡಿದ ನಂತರ ಇದು ಅತ್ಯಂತ ವೈಜ್ಞಾನಿಕ ಸಮೀಕ್ಷೆ ಎಂದು ನನಗೆ ಅನಿಸಿದೆ ಕಾರಣ ಯಾಕಂದ್ರೆ ಒಬ್ಬ ಬೋರ್ ವೆಲ್ ಹಾಕಿದ್ರೆ ಅಲ್ಲಿ ನೀರು ಬಂತಾ ಇಲ್ವಾ? ಒಣಗಿಹೋಗಿದ್ಯಾ ಅಂತಲೂ ಮಾಹಿತಿ ಕಲೆ ಹಾಕಿದ್ದಾರೆ ಅಲ್ಲದೇ ಇಂತಹ ಮನೆಯ ಡಾಟಾ ಸಂಗ್ರಹಿಸಿ ಅವರ ಕೈಯಲ್ಲಿ ಸಹಿ ಮಾಡಿಸಿದ್ದಾರೆ ಜೊತೆಗೆ ಸೂಪರ್ ವೈಸರ್ ಕೂಡ ಸಹಿ ಮಾಡಿದ್ದಾರೆ ಒಟ್ಟು 1.37 ಕೋಟಿ ಕುಟುಂಬಗಳ ಡಾಟಾ ನಮ್ಮ ಬಳಿ ಇದೆ ಎಂದರು.
*ಒಳಮೀಸಲಾತಿ ಗೆ ಜಾತಿಗಣತಿ ವರದಿ ಬಳಸೋ ಚರ್ಚೆ ವಿಚಾರ*
ನಾಗಮೋಹನ್ ದಾಸ್ ರವರಿಗೆ ಮಾಹಿತಿ ಕಲೆ ಹಾಕಲು ತಿಳಿಸಲಾಗಿದೆ, ಅವರು ಸಲ್ಲಿಸುವ ವರದಿ ಜೊತೆಗೆ ಜಾತಿಗಣತಿ ವರದಿಯನ್ನು ಹೋಲಿಕೆ ಮಾಡಲಾಗುತ್ತದೆ ಸಮೀಕ್ಷೆ ಡಬಲ್ ಆದ್ರೆ ಒಳ್ಳೆಯದಲ್ವಾ? ಕಮೀಷನ್ ಈಗಾಗಲೇ ಡಾಟಾ ಮಾಹಿತಿ ಕಲೆಕ್ಟ್ ಮಾಡಲು ಶುರು ಮಾಡಿದೆಈಗ ನಿಲ್ಲಿಸಿ ಅಂತ ಹೇಳೋದು ಸರಿಯಲ್ಲ ಎಂದರು.