
ದೊಡ್ಡಬಳ್ಳಾಪುರ : ನಾನು ಚುನಾವಣೆಗೆ ನಿಲ್ಲಬಾರದೆಂಬ ದುರುದ್ದೇಶದಿಂದ ನನ್ನ ಮೇಲೆ ಮಾಡಿದ್ದ ಕೆಲ ಕುತಂತ್ರಗಳ ವಿರುದ್ಧ ನಾನು ನ್ಯಾಯಾಂಗದ ಮೊರೆ ಹೋಗಿದ್ದು, ಈಗ ನ್ಯಾಯಾಂಗ ವ್ಯವಸ್ಥೆಯಲ್ಲಿ ಗೆದ್ದಿದ್ದೇನೆ ಬಮೂಲ್ ಚುನಾವಣೆಯಲ್ಲಿ ಮತದಾನ ಮಾಡಲು ಮತ್ತು ಸ್ಪರ್ದಿಸಲು ನ್ಯಾಯಾಲಯ ಆದೇಶ ನೀಡಿದೆ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಬಿ ಮುನೇಗೌಡ ರವರು ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರೆ ನಾಮಪತ್ರ ಸಲ್ಲಿಸಲು ನಾನು ಸಿದ್ಧ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹುಸ್ಕೂರ್ ಆನಂದ್ ತಿಳಿಸಿದ್ದಾರೆ.
ಈ ಕುರಿತು ಮಾತಾಡಿರುವ ಅವರು ಬಮೂಲ್ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ನಾನು ಸ್ಪರ್ಧಿಸಬಹುದೆಂಬ ಉದ್ದೇಶದಿಂದ ಕೆಲವರು ನನ್ನ ವಿರುದ್ಧ ಕುತಂತ್ರಕ್ಕೆ ಮುಂದಾಗಿದ್ದು, ನಮ್ಮ ಹುಸ್ಕೂರು ಹಾಲು ಉತ್ಪಾದಕರ ಸಂಘವನ್ನು ಸೂಪರ್ ಸೀಡ್ ಮಾಡಲು ಮುಂದಾಗಿದ್ದರು, ಈ ಕುರಿತಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಸ್ತುತ ನ್ಯಾಯಾಂಗ ವ್ಯವಸ್ಥೆಯಲ್ಲಿ ಗೆದ್ದಿದ್ದೇವೆ, ನಾನು ಚುನಾವಣೆಯಲ್ಲಿ ಭಾಗವಹಿಸಬಹುದೆಂಬ ಆದೇಶವು ಬಂದಿದೆ , ಹಾಗಾಗಿ ಈ ಬಾರಿಯ ಬಮೂಲ್ ಚುನಾವಣೆಯಲ್ಲಿ ಮತದಾನ ಮಾಡಲು ಹಾಗೂ ಸ್ಪರ್ಧಿಸಲು ನಾನು ಸಿದ್ಧನಿದ್ದೇನೆ , ಸ್ಥಳೀಯವಾಗಿ ನಮ್ಮ ಪಕ್ಷದ ವರಿಷ್ಠರಾದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ ಮುನೇಗೌಡ ರವರು ಅಭ್ಯರ್ಥಿಯನ್ನಾಗಿ ನನನ್ನು ಘೋಷಣೆ ಮಾಡಿದರೆ ನಾಮಪತ್ರ ಸಲ್ಲಿಸಲು ನಾನು ಸಿದ್ಧ ಎಂದರು.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಬಿ ಮುನೇಗೌಡ ರವರ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷರು ಹಾಗೂ ಸ್ಥಳೀಯ ಶಾಸಕರಾದ ಧೀರಜ್ ಮುನಿರಾಜುರವರನ್ನು ಹಾಗೂ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ತಾಲೂಕಿನ ಮಾಜಿ ಶಾಸಕರಾದ ಟಿ ವೆಂಕಟರಮಣಯ್ಯ ಅವರನ್ನು ಆಹ್ವಾನಿಸಲಾಗುವುದು ಎಂದರು
ಕಾಂಗ್ರೆಸ್ ಪಕ್ಷವು ಈಗಾಗಲೇ ನನಗೆ ನಾಮಿನಿ ನೀಡಿದ್ದು ಸಂತಸದ ವಿಷಯವಾಗಿದೆ, ನನ್ನ ಮೇಲೆ ಭರವಸೆ ಇಟ್ಟ ಕಾಂಗ್ರೆಸ್ ಪಕ್ಷಕ್ಕೆ ನಾನು ಆಭಾರಿಯಾಗಿದ್ದೇನೆ , ಬಮೂಲ್ ಚುನಾವಣೆಯಲ್ಲಿ ವರಿಷ್ಠರ ನಿರ್ಧಾರಕ್ಕೆ ನಾನು ಬದ್ಧನಾಗಿದ್ದು ಪ್ರಸ್ತುತ ನಾನು ಬಮೂಲ್ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಲು ಬೇಕಿರುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದೇನೆ ಎಂದರು.