
ನಗರದ ಜೂನಿಯರ್ ಕಾಲೇಜು ಮುಂಭಾಗದ ರಸ್ತೆ ಯಿಂದ ತಾಲ್ಲೂಕು ಕಚೇರಿ ಮುಂಭಾಗದವರೆಗೂ ದಾರಿದೀಪಗಳ ಅವ್ಯವಸ್ಥೆ ಕಾರಣ ರಸ್ತೆಯು ಸಂಪೂರ್ಣ ಕತ್ತಲಿನಿಂದ ಆವರಿಸಿದೆ.
ತಾಲ್ಲೂಕುದಂಡಾಧಿಕಾರಿಗಳ ಕಛೇರಿ ಮುಂಭಾಗವೇ ದಾರಿದೀಪಗಳು ಬೆಳಕು ನೀಡದೆ ಕೆಟ್ಟು ನಿಂತಿರುವುದು ಚರ್ಚೆಗೆ ಕಾರಣವಾಗಿದೆ, ರಸ್ತೆಯ ವಿದ್ಯುತ್ ಕಂಬಗಳು ಬೆಳಕು ನೀಡುವುದಕ್ಕಿಂತ ಕೆಟ್ಟು ನಿಂತಿರುವುದೇ ಹೆಚ್ಚು, ಈ ಕಂಬಗಳು ರಾಜಕೀಯ ಹಾಗೂ ಸಂಭ್ರಮಾಚರಣೆಯ ಬ್ಯಾನರ್ ಕಟ್ಟುವ ಪೋಲ್ ಗಳಾಗಿವೆ ಎಂಬುದು ಸಾರ್ವಜನಿಕರ ಆಕ್ರೋಶದ ಮಾತು.
ಈ ರಸ್ತೆಗಳ ಕತ್ತಲಿನಲ್ಲಿ ಪಾದಚಾರಿಗಳು ಸಂಚರಿಸುವುದು ಕಷ್ಟ ಸಾಧ್ಯವಾಗಿದೆ, ತಾಲ್ಲೂಕು ಕಚೇರಿ ಮುಂಭಾಗದಲ್ಲಿ ರಸ್ತೆ ಹಾಗೂ ದಾರಿದೀಪಗಳ ಸಮಸ್ಯೆ ತಪ್ಪಿದ್ದಲ್ಲ, ಅಧಿಕಾರಿಗಳು ಇನ್ನಾದರೂ ಈ ಕುರಿತು ಗಮನಹರಿಸಿ ಶೀಘ್ರವಾಗಿ ದಾರಿದೀಪಗಳನ್ನು ಸರಿಪಡಿಸಲಿ ಎಂಬುದು ಸಾರ್ವಜನಿಕರ ಅಗ್ರಹವಾಗಿದೆ.