ದೇವನಹಳ್ಳಿ: ಸಮುದಾಯದ ಉಳಿವಿಗಾಗಿ ಹಾಗೂ ಅಭಿವೃದ್ಧಿಗಾಗಿ ಕರ್ನಾಟಕ ಅಗ್ನಿವಂಶ ಕ್ಷತ್ರಿಯ ( ತಿಗಳರ ) ಗಜಕೇಸರಿ ಸೇನೆಯ (ರಿ.) ನೂತನವಾಗಿ ದೇವನಹಳ್ಳಿ ತಾಲ್ಲೂಕು ಘಟಕವನ್ನು ಉದ್ಘಾಟಿಸಿ ಶುಭ ಹಾರೈಸಿದ್ದೇವೆ ಎಂದು ಸಮುದಾಯದ ಹಿರಿಯ ಮುಖಂಡರಾದ ಜಗದೀಶ್ ತಿಳಿಸಿದರು

ಅರದೇಶನಹಳ್ಳಿ ಹಾಗೂ ಬಸವನಪುರ ಗ್ರಾಮಗಳ ಜಂಟಿ ಸಹಕಾರದೊಂದಿಗೆ ತಿಗಳ ಸಮುದಾಯದ ಮುಖಂಡರು ಒಟ್ಟಾಗಿ ಕರ್ನಾಟಕ ಅಗ್ನಿವಂಶ ಕ್ಷತ್ರಿಯ ( ತಿಗಳರ ) ಗಜಕೇಸರಿ ಸೇನೆಯ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮುದಾಯದ ಉಳಿವಿಗಾಗಿ ಯುವ ಸಮುದಾಯವು ನೂತನ ಕಾರ್ಯಕ್ಕೆ ಮುಂದಾಗಿದೆ ನಮ್ಮ ಸಮುದಾಯದ ಇತಿಹಾಸವನ್ನು ಅರಿತು, ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುವ ಮೂಲಕ ಸಮುದಾಯಕ್ಕೆ ಮತ್ತಷ್ಟು ಉತ್ತಮ ಸ್ಥಾನ ಮಾನ ಸಿಗುವಂತೆ ಯುವ ಸಮುದಾಯವು ಶ್ರಮಿಸಲಿ ಎಂದು ಹಾರೈಸಿದರು.

ಇನ್ನು ಮುಂದೆ ರಾಜ್ಯದ ಪ್ರತಿ ಹಳ್ಳಿ ಹಳ್ಳಿಯಲ್ಲಿ ನಮ್ಮ ಸಂಘಟನೆಯ ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲಾ ಘಟಕಗಳನ್ನು ಉದ್ಘಾಟನೆ ಮಾಡುವ ಮೂಲಕ ಸಮುದಾಯದ ಜನತೆಯಲ್ಲಿ ಜಾಗೃತಿ ಮೂಡಿಸಿ ಸಮುದಾಯದ ಅಭಿವೃದ್ಧಿಗೆ ನೂತನ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಕೆ ಆರ್ ಮಾತನಾಡಿ ಹಿಂದುಳಿದ ನಮ್ಮ ಸಮುದಾಯವನ್ನು ಬಲಪಡಿಸಿ ಒಟ್ಟುಗೂಡಿಸುವ ಕಾರ್ಯವನ್ನು ಕರ್ನಾಟಕ ಅಗ್ನಿವಂಶ ಕ್ಷತ್ರಿಯ ( ತಿಗಳರ ) ಗಜಕೇಸರಿ ಸೇನೆ ಮಾಡುತ್ತಿದೆ. ಇಂದು ದೇವನಹಳ್ಳಿ ವ್ಯಾಪ್ತಿಯ ಆರದೇಶನಹಳ್ಳಿ ಹಾಗೂ ಬಸವನಪುರ ಗ್ರಾಮ ಶಾಖೆಯನ್ನು ಉದ್ಘಾಟಿಸುವ ಮೂಲಕ ಸಮುದಾಯದ ಅಭಿವೃದ್ಧಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಸಂಕೇತಿಕವಾಗಿ ಚಾಲನೆ ನೀಡಲಾಗಿದೆ ಎಂದರು.

ಸ್ಥಳೀಯ ಮುಖಂಡರಾದ ಸುಬ್ರಮಣಿ ಮಾತನಾಡಿ ಇಂದಿನ ಕಾರ್ಯಕ್ರಮ ವಿಶೇಷವಾಗಿದ್ದು ಸಮುದಾಯದ ಮುಖಂಡರು ಹಾಗೂ 18 ಗಡಿ ಯಜಮಾನರಾದ ಜಗದೀಶ್ ರವರು ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿ ನೂತನ ಘಟಕದ ನಾಮಫಲಕ ಅನಾವರಣ ಮಾಡುವ ಮೂಲಕ ಶುಭ ಹಾರೈಸಿದ್ದಾರೆ, ದೇವನಹಳ್ಳಿ ತಾಲೂಕಿನಾದ್ಯಂತ ವಾಸವಿರುವ ಅಗ್ನಿವಂಶ ಕ್ಷತ್ರಿಯ (ತಿಗಳ) ಸಮುದಾಯವನ್ನು ಒಟ್ಟುಗೂಡಿಸುವ ಮುಖ್ಯ ಉದ್ದೇಶದೊಂದಿಗೆ ಈ ಸಂಘಟನೆಯನ್ನು ಉದ್ಘಾಟಿಸಿದ್ದೇವೆ, ಎಲ್ಲರೊಟ್ಟಿಗೆ ಬೆರೆತು ಎಲ್ಲರ ಸಲಹೆ ಸೂಚನೆಗಳನ್ನು ಪಡೆಯುತ್ತಾ ಹಿರಿಯರ ಮಾರ್ಗದರ್ಶನದೊಂದಿಗೆ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವುದು ನಮ್ಮೆಲ್ಲರ ಉದ್ದೇಶವಾಗಿದೆ, ಮುಂದೆ ರಾಜ್ಯಾದ್ಯಂತ ಹಿರಿಯರ ಜೊತೆಗೂಡಿ ಸಂಘಟನೆ ಜೊತೆ ಜೊತೆಗೆ ಸಮುದಾಯದ ಅಭಿವೃದ್ಧಿಯನ್ನು ಮಾಡುತ್ತಾ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ, ಸಮುದಾಯದ ಇತಿಹಾಸ ಹಿನ್ನೆಲೆಯನ್ನು ತಿಳಿಸುವ ಕೆಲಸವನ್ನು ನಮ್ಮ ಯುವ ಸಮುದಾಯ ಮಾಡಲಿದೆ ಎಂದರು.

ಸಂಘಟನೆಯ ರಾಜ್ಯಾಧ್ಯಕ್ಷ ಆರ್ ಉಮೇಶ್ ಮಾತನಾಡಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಒಳಿತಿಗಾಗಿ ಕಟ್ಟಿದ ಸಂಘಟನೆ ಇದಾಗಿದ್ದು, ದೇವನಹಳ್ಳಿ ತಾಲ್ಲೂಕಿನ ಅರದೇಶನಹಳ್ಳಿ ಹಾಗೂ ಬಸವನಪುರ ಗ್ರಾಮದಲ್ಲಿ ಇಂದು ನಮ್ಮ ಸಂಘಟನೆಯ ನೂತನ ಘಟಕ ಉದ್ಘಾಟನೆಗೊಂಡಿರುವುದು ಸಂತಸದೊಂದಿಗೆ ನೂತನ ಪದಾಧಿಕಾರಿಗಳಿಗೆ ಶುಭವಾಗಲಿ ಎಂದು ಹಾರೈಸಿದರು

ಕಾರ್ಯಕ್ರಮದಲ್ಲಿ ಸಮುದಾಯದ ಪ್ರಮುಖ ಯಜಮಾನರುಗಳಲ್ಲಿ ಒಬ್ಬರು 18 ಗಡಿ ಯಜಮಾನರಾದ ಜಗದೀಶ್, ನೆಲಮಂಗಲ ಯಜಮಾನ್ ಉಮೇಶ್, ಗಜಕೇಸರಿ ಸೇನೆಯ ರಾಜ್ಯಾಧ್ಯಕ್ಷ ಆರ್.ಉಮೇಶ್, ಪ್ರಧಾನ ಕಾರ್ಯದರ್ಶಿಗಳಾದ ಮಧುಸೂದನ್ ಕೆ ಆರ್, ನಿರ್ದೇಶಕರಾದ ಶರತ್, ನವೀನ್, ಮುಖಂಡರಾದ ಸುಬ್ರಮಣಿ ಅರದೇಶನ ಹಳ್ಳಿ , ನೂತನ ಘಟಕದ ಅಧ್ಯಕ್ಷ ಹನುಮಂತರಾಜು, ಉಪಾಧ್ಯಕ್ಷ ಬಿ.ಲಕ್ಷ್ಮಯ್ಯಾ ಬಸವನಪುರ , ಕಾರ್ಯಧ್ಯಕ್ಷ ಆರ್,ರಾಮಾಂಜಿನಯ್ಯ ಬಸವನಪುರ, ನಿರ್ದೇಶಕರಾದ ಡಿ.ನಾಗೇಶ್ ಅರದೇಶನಹಳ್ಳಿ ,ಎಲ್.ಚಂದ್ರ ಅರದೇಶನಹಳ್ಳಿ , ವೈ.ಮಾರುತಿ ಅರದೇಶನಹಳ್ಳಿ , ಹೆಚ್. ಮಂಜುನಾಥ್ ಅರದೇಶನ ಹಳ್ಳಿ , ಬಸವರಾಜಪ್ಪ ಬಸವನ ಪುರ, ಎನ್.ಅರುಣ್ ಕುಮಾರ್ ಬಸವನಪುರ , ಪ್ರಕಾಶ್ ಬಸವನಪುರ ,ನಿವೃತ್ತ ಪೊಲೀಸ್ ಅಧಿಕಾರಿ ಗೋವಿಂದರಾಜು ಕೆಸ್ತೂರು, ಹಣಬೆ ಯಜಮಾನರಾದ ರವಿಕುಮಾರ್, ಖಾಸ್ ಬಾಗ್ ಮುದ್ರೆ ಜಯರಾಂ, ಮುತ್ತೂರಿನ ಆನಂದ್, ಹೆಜ್ಜಾಜಿಯ ನಟರಾಜು, ರಮೇಶ್, ಹಾಗೂ ದೇವನಹಳ್ಳಿ ತಾಲ್ಲೂಕಿನ ಅರದೇಶನಹಳ್ಳಿ, ಬಸವನಪುರ ಎರಡು ಗ್ರಾಮಗಳ ಮುಖಂಡರು ಹಾಜರಿದ್ದರು.
