
ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಂಪಿಯನ್ಷಿಪ್,2025 ರಲ್ಲಿ ನಡೆದ ಯೋಗಾ ಚಾಂಪಿಯನ್ ಶಿಪ್ ಪಂದ್ಯದಲ್ಲಿ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರ ಯೋಗಪಟುಗಳು ಅತಿ ಹೆಚ್ವು ಬಹುಮಾನಗಳನ್ನು ಗೆಲ್ಲುವ ಮೂಲಕ ಅದ್ಬುತ ಸಾಧನೆ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಅಮೆಚ್ಯೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಮತ್ತು ಶಿವಮೊಗ್ಗ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ ಮತ್ತು ಗುರುಕುಲಮ್ ಯೋಗ ವಿದ್ಯಾ ಶಾಲಾ ಆಶ್ರಯದಲ್ಲಿ ಸಾಗರದ ಈಡಿಗರ ಸಮೂದಾಯ ಭವನದಲ್ಲಿ ನಡೆದ ಯೋಗಾ ಸ್ಪರ್ದೆಯಲ್ಲಿ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳು ಭಾಗವಹಿಸಿ 8ರಿಂದ10ನೇ ವರ್ಷದ ಬಾಲಕರ ವಿಭಾಗದಲ್ಲಿ ಆರ್ಯ ತೃತೀಯ ಸ್ಥಾನ,ಕೆ.ಆರ್.ಭುವನ್ 5 ಸ್ಥಾನ,8 ರಿಂದ10 ವರ್ಷದ ಬಾಲಕೀಯರ ವಿಭಾಗದಲ್ಲಿ ಸಾನ್ವಿ ಎಂ.ರಾಜು 6ನೇ ಸ್ಥಾನ, 10ರಿಂದ12ನೇ ವರ್ಷದ ಬಾಲಕರ ವಿಭಾಗದಲ್ಲಿ ಹಿತೇಶ್.ಎ ಪ್ರಥಮ ಸ್ಥಾನ,ನೀರಜ್.ಎಲ್ ದ್ವಿತೀಯ ಸ್ಥಾನ,10ರಿಂದ12ನೇ ವರ್ಷದ ಬಾಲಕೀಯರ ವಿಭಾಗದಲ್ಲಿ ಎಸ್.ಅಪೂರ್ವ ದ್ವಿತೀಯ ಸ್ಥಾನ,ಯಶಸ್ವಿನಿ.ಟಿ. ತೃತೀಯ ಸ್ಥಾನ, ಅಖಿಲ.ಎಮ್ 6ನೇ ಸ್ಥಾನ,12ರಿಂದ14 ಬಾಲಕರ ವಿಭಾಗದಲ್ಲಿ ವೇದಿಕ್ ಶೆಟ್ಟಿ.ಜೆ.ಸಿ ದ್ವಿತೀಯ ಸ್ಥಾನ, 12ರಿಂದ14 ಬಾಲಕೀಯರ ವಿಭಾಗದಲ್ಲಿ ಹಿತಶ್ರೀ ಕೆ.ಎಂ ಪ್ರಥಮ ಸ್ಥಾನ,ಗೌತಮಿ.ಹೆಚ್,ಆರ್. 4ನೇ ಸ್ಥಾನ,14ರಿಂದ16 ವರ್ಷದ ಬಾಲಕರ ವಿಭಾಗದಲ್ಲಿ ಶಶಾಂಕ್.ಪಿ.ಎಸ್ ದ್ವಿತೀಯ ಸ್ಥಾನ, ಕೆ.ಎನ್.ವಿಶ್ವನಾಥ್ 5ನೆ ಸ್ಥಾನ, 14ರಿಂದ16 ವರ್ಷದ ಬಾಲಕೀಯರ ವಿಭಾಗದಲ್ಲಿ ಅರ್ಪಿತ.ಆರ್ ತೃತೀಯ ಸ್ಥಾನ, 16ರಿಂದ18 ವರ್ಷದ ಯುವಕರ ವಿಭಾದಲ್ಲಿ ಜೇಷ್ಠ.ಎಸ್. ದ್ವಿತೀಯ ಸ್ಥಾನ,16ರಿಂದ18 ವರ್ಷದ ಯುವತಿಯರು ಎಂ.ಆರ್.ಜಾಹ್ನವಿ ದ್ವಿತೀಯ ಸ್ಥಾನ, 18ರಿಂದ 21 ವರ್ಶದ ಯುವಕರ ವಿಭಾಗದಲ್ಲಿ ಕೆ.ವಿನಯ್ ಕುಮಾರ್ ಪ್ರಥಮ ಸ್ಥಾನ, 18ರಿಂದ21 ವರ್ಷದ ಯುವತಿಯರ ವಿಭಾಗದಲ್ಲಿ ಸುಧಾ 4ನೇ ಸ್ಥಾನ,21ರಿಂದ 25 ವರ್ಷದ ಯುವಕರ ವಿಭಾಗದಲ್ಲಿ ವರಪ್ರಸಾದ್.ವಿ ದ್ವಿತೀಯ ಸ್ಥಾನ,21ರಿಂದ25 ವರ್ಷದ ಯುವತಿಯರ ವಿಭಾಗದಲ್ಲಿ ಗಾನಶ್ರೀ.ಎ ದ್ವಿತೀಯ ಸ್ಥಾನವನ್ನು ಪಡೆದು 3 ಚಿನ್ನ, 7 ಬೆಳ್ಳಿ, 3 ಕಂಚು ಒಟ್ಟು 20 ಯೋಗ ಪಟುಗಳು ಬಹುಮಾನವನ್ನು ಪಡೆದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಮೆಚೂರ್ ಯೋಗ ಸಂಸ್ಥೆಯ ಅಧ್ಯಕ್ಷರಾದ ಪ್ರೊಫೆಸರ್ ಎಮ್.ಜಿ.ಅಮರ್ನಾಥ್ ನಿಸರ್ಗ ಯೋಗ ಕೇಂದ್ರದ ಕಾರ್ಯದರ್ಶಿ ಯೋಗ ನಟರಾಜ್.ಎ ಮತ್ತು ಖಜಾಂಚಿ ಶ್ಯಾಮಸುಂದರ್.ಕೆ.ಆರ್ ಹಾಗೂ ನಿಸರ್ಗ ಯೋಗ ಕೇಂದ್ರದ ಪದಾಧಿಕಾರಿಗಳು,ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸಾದನೆ ಮಾಡಿದ ಯೋಗಾ ಪಟುಗಳನ್ನು ಅಭಿನಂದಿಸಿದ್ದಾರೆ.