
ದೊಡ್ಡಬಳ್ಳಾಪುರ:ವಿಶ್ವಮಾನ್ಯ ಅಟಲ್ ಬಿಹಾರಿ ವಾಜಪೇಯಿ ಸನ್ಮಾನ ಸಮಿತಿ ವತಿಯಿಂದ ಹಿರಿಯ ಅಶಕ್ತ ಸಂಘ ಪರಿವಾರದ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಗೌರವ ಸನ್ಮಾನ ಸಮಾರಂಭವನ್ನು ನಗರದ ಕೆ. ಎಂ. ಹೆಚ್. ಕಾನ್ವೆಂಶನ್ ಹಾಲ್ ನಲ್ಲಿ ನಡೆಸಲಾಯಿತು.
ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರ ಸನ್ಮಾನ ಸಮಿತಿ ವತಿಯಿಂದ ಭಾರತೀಯ ಜನತಾ ಪಾರ್ಟಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಘ ದಲ್ಲಿ 40-50 ವರ್ಷ ಗಳಿಂದ ಅಮೋಘ ಸೇವೆ ಸಲ್ಲಿಸಿದ 60ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಬಿಜೆಪಿ ಹಿರಿಯ ಮುಖಂಡರಾದ ಕೆ ಎಂ ಹನುಮಂತರಾಯಪ್ಪ ರವರ ನೇತೃತ್ವ ದಲ್ಲಿ ಅಭಿನಂದಿಸಿ ತಲಾ 10.000/- ರೂಗಳ ಧನ ಸಹಾಯ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಮಾರಂಭದ ಆಯೋಜಕರಾದ ಹಿರಿಯ ಬಿಜೆಪಿ ಮುಖಂಡ ಕೆ. ಎಂ. ಹನುಮಂತರಾಯಪ್ಪ, ಪುಷ್ಪಾoಡಜ ಶ್ರೀಗಳು, ಮಾಜಿ ಪುರಸಭಾ ಉಪಾಧ್ಯಕ್ಷ ಡಿ. ವಿ. ನಾರಾಯಣ ಶರ್ಮ ಎಂ. ಪಿ. ನಾಗರಾಜ್ ಎಸ್. ನಂಜಪ್ಪ , ಮಾಜಿ ನಗರಸಭಾಧ್ಯಕ್ಷ ರಾಜೇಂದ್ರ, ಪವಾಡ ಭಂಜಕ ಹುಲಿಕಲ್ ನಟರಾಜ್, ನಾ. ಮಲ್ಲಿಕಾರ್ಜುನ್, ಲಯನ್ಸ್ ಕ್ಲಬ್ ಅಧ್ಯಕ್ಷೆ ಮಂಗಳ ಗೌರಮ್ಮ ಪರ್ವತಯ್ಯ, ಬಮುಲ್ ನಿರ್ದೇಶಕ ಬಿ. ಸಿ. ಆನಂದ್, ಎ. ಪಿ. ಎಂ. ಸಿ. ಮಾಜಿ ಅಧ್ಯಕ್ಷ ತಿ. ರಂಗರಾಜು, ತಾಲೂಕು ಬಿಜೆಪಿ ಅಧ್ಯಕ್ಷ ನಾಗೇಶ್, ನಗರಸಭಾ ಸದಸ್ಯರಾದ ಬಂತಿ ವೆಂಕಟೇಶ್, ವತ್ಸಲಾ, ಕೆ. ಹೆಚ್. ರಂಗರಾಜ್, ವೆಂಕಟರಾಜ್, ನಾಗರಾಜ್, ಸೀತಾರಾಮು, ಟಿ. ಜಿ. ಮಂಜುನಾಥ್(LIC), ಕೆ. ವಿ. ರಾಜಣ್ಣ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಭಾಗವಹಿಸಿದ್ದರು.