ಯುವತಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಕಾರಣಕ್ಕೆ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಕುಶಾಲ್ ಎಂಬ ಯುವಕನನ್ನು 8-10 ಮಂದಿ ಯುವಕರು ಅಪಹರಿಸಿ ಚಿತ್ರಹಿಂಸೆ ನೀಡಿದ್ದಾರೆ.
ಸೋಲದೇವನಹಳ್ಳಿಯ ಈ ಕಿಡ್ನ್ಯಾಪ್ ಪ್ರಕರಣ ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣ ನೆನಪಿಸುವಂತಿದೆ ರೇಣುಕಾಸ್ವಾಮಿಗೆ ಹಲ್ಲೆ ನಡೆಸಿದಂತೆ ಈ ಪ್ರಕರಣದಲ್ಲಿ ಕೂಡ ಕುಶಾಲ್ ಬಟ್ಟೆ ಬಿಚ್ಚಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮರ್ಮಾಂಗ ತುಳಿದು, ವೀಡಿಯೋ ಮಾಡಿ ಅಟ್ಟಹಾಸ ಮೆರೆದಿದ್ದಾರೆ. “ಇದು ಕೂಡ ರೇಣುಕಾಸ್ವಾಮಿ ಕೊಲೆ ಕೇಸ್ ತರ ಆಗತ್ತೆ” ಎಂದು ಹಲ್ಲೆ ನಡೆಸಿರುವ ಯುವಕರು ಮಾತನಾಡಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ಕುಶಾಲ್ ಎಂಬಾತನನ್ನು ಅಪಹರಿಸಿ ಚಿತ್ರಹಿಂಸೆ ಕೊಟ್ಟಿರುವುದು ಆಘಾತ ತಂದಿದೆ. ಒಂದು ಹುಡುಗಿಯ ವಿಚಾರಕ್ಕೆ ಈ ಕೃತ್ಯ ನಡೆದಿದೆ. ಯುವತಿಗೆ ಕುಶಾಲ್ ಅಶ್ಲೀಲ ಮೆಸೇಜ್ ಕಳುಹಿಸಿ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಏನಿದು ಕೇಸ್….???
ಕುಶಾಲ್ ಕಾಲೇಜಿಗೆ ಹೋಗುವಾಗ ಯುವತಿಯೊಬ್ಬಳ ಜೊತೆ ಪ್ರೀತಿ ಮೂಡಿತ್ತು. 2 ವರ್ಷಗಳ ಬಳಿಕ ಆ ಪ್ರೀತಿ ಮುರಿದು ಬಿದ್ದಿತ್ತು. ಬಳಿಕ ಯುವತಿ ಬೇರೆ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಚಾರ ಕುಶಾಲ್‌ಗೆ ಗೊತ್ತಾಗಿದೆ. ಆಕೆಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದಾನೆ. ಇದನ್ನು ಆಕೆ ತನ್ನ ಪ್ರಿಯಕರನಿಗೆ ತಿಳಿಸಿದ್ದಾಳೆ. ಕೋಪಗೊಂಡ ಆತ ತನ್ನ ಸ್ನೇಹಿತರ ಜೊತೆ ಸೇರಿ ಕುಶಾಲ್‌ನನ್ನು ಮಾತನಾಡಿ ಎಲ್ಲಾ ಬಗೆಹರಿಸಿಕೊಳ್ಳೋಣ ಎಂದು ಕರೆಸಿ ಬಳಿಕ ಕಾರಿನಲ್ಲಿ ಅಪಹರಿಸಿದ್ದಾರೆ.
ಕುಶಾಲ್‌ನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮನಬಂದಂತೆ ತಳಿಸಿದ್ದಾರೆ ಎನ್ನಲಾಗಿದೆ. ಬಟ್ಟೆ ಬಿಚ್ಚಿಸಿ ಚಿತ್ರಹಿಂಸೆ ನೀಡಿದ್ದಾರೆ ಅದನ್ನೆಲ್ಲಾ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಘಟನೆ ಸಂಬಂಧ ಈಗಾಗಲೇ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಸೇರಿ ಶಿವಶಂಕರ್, ಶಶಾಂಕ್ ಗೌಡ, ಹೇಮಂತ್, ಯಶ್ವಂತ್ ಎಂಬ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕುಶಾಲ್‌ನನ್ನು ಯುವಕರು ಥಳಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ರೇಣುಕಾಸ್ವಾಮಿ ಅಪಹರಣ, ಹಲ್ಲೆ ಘಟನೆಯನ್ನು ಹೀಗೆ ಯುವಕರು ಸ್ಫೂರ್ತಿಯಾಗಿ ತೆಗೆದುಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿ.
