
ಶಿವಮೊಗ್ಗ (ವಿಜಯಮಿತ್ರ) : ಸೋಮವಾರ (ಜು. 14) ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ (Nithin Gadkari) ಐತಿಹಾಸಿಕ ಸಿಗಂದೂರು ಸೇತುವೆ ಲೋಕಾರ್ಪಣೆಗೊಳಿಸಲಿದ್ದಾರೆ.
ಹತ್ತಾರು ಪ್ರವಾಸಿ ತಾಣಗಳನ್ನ ತನ್ನ ಮಡಿಲಿನಲ್ಲಿ ಇಟ್ಟುಕೊಂಡಿರುವ ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ಹೆಮ್ಮೆ ಸೇರ್ಪಡೆಗೊಳ್ಳುತ್ತಿದೆ. ಅದೇ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣ ಆಗಿರುವ ಸಿಗಂದೂರಿನ ಹೊಸ ಸೇತುವೆ (Sigandur Bridge).
ಶರಾವತಿ ಹಿನ್ನೀರು ಪ್ರದೇಶಗಳಾದ ಕರೂರು ಬಾರಂಗಿ ಹೋಬಳಿಯ ನಾಲ್ಕು ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರಿಗೆ ಹಾಗೂ ಪ್ರಸಿದ್ಧ ಸಿಗಂದೂರು, ಕೊಲ್ಲೂರು ದೇವಾಲಯಗಳ ಸಂಪರ್ಕಕ್ಕಾಗಿ ಲಾಂಚ್ ಒಂದೇ ಆಧಾರವಾಗಿತ್ತು. ಹೀಗಾಗಿ ಕಳೆದ ಆರು ದಶಕಗಳಿಂದ ಈ ಭಾಗದ ಜನರು ಸಿಗಂದೂರು ಸೇತುವೆ ಮಾಡುವಂತೆ ಅಗ್ರಹಿಸಿದ್ದರು .
ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು 450 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು 2019ರಲ್ಲಿ ಉದ್ಘಾಟನೆಯನ್ನು ಮಾಡಿದ್ದರು. 2020ರ ಡಿಸೆಂಬರ್ನಲ್ಲಿ ಪ್ರಾರಂಭವಾಗಿದ್ದ ಕಾಮಗಾರಿಯು ಅಂತ್ಯಗೊಂಡಿದ್ದು , ಇಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಸೇತುವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಈ ಸೇತುವೆಯು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಕೊಲ್ಲೂರು ಮತ್ತು ಸಿಗಂದೂರು ದೇವಸ್ಥಾನಗಳನ್ನು ಸಂಪರ್ಕಿಸಲಿದೆ.
ಈ ಸೇತುವೆ ಸ್ಪೆಷಾಲಿಟಿ ಏನು…??
2.24 ಕಿ.ಮೀ ಉದ್ದದ ದೇಶದಲ್ಲೇ ಎರಡನೇ ಅತಿದೊಡ್ಡ ಕೇಬಲ್ ಆಧಾರಿತ ಸೇತುವೆ ಇದಾಗಿದ್ದು . ಈ ಸೇತುವೆಯ ಸುಮಾರು 2.24ಕಿ.ಮೀ. ಉದ್ದ ಹಾಗೂ 16 ಮೀಟರ್ ಅಗಲವನ್ನು ಹೊಂದಿದೆ. 740 ಮೀ. ಕೇಬಲ್ನ ಆಧಾರದ ಮೇಲೆ ನಿಂತಿರುವ ಸೇತುವೆ ಇದಾಗಿದ್ದು, ರಸ್ತೆಯ ಎರಡು ಬದಿ ಸಾರ್ವಜನಿಕರ ಓಡಾಡಟಕ್ಕೆ ಫುಟ್ ಪಾಥ್ ಕೂಡ ಲಭ್ಯವಿದೆ.
ಮೊದ್ಲು ಹೇಗಿತ್ತು..??
ಇಲ್ಲಿ ಹತ್ತಾರು ವರ್ಷಗಳಿಂದಲೂ ಶರಾವತಿ ಹಿನ್ನೀರು ಪ್ರದೇಶಗಳಾದ ಕರೂರು ಬಾರಂಗಿ ಹೋಬಳಿಯ ಗ್ರಾಮಗಳಿಗೆ ಹಾಗೂ ಪ್ರಸಿದ್ಧ ಸಿಗಂದೂರು, ಕೊಲ್ಲೂರು ದೇವಾಲಯಗಳ ಸಂಪರ್ಕಕ್ಕಾಗಿ ಲಾಂಚ್ ಒಂದೇ ಮಾರ್ಗವಾಗಿತ್ತು, ಈ ಲಾಂಚ್ ಬೆಳಗ್ಗೆ 7ರಿಂದ ಸಂಜೆ 6ವರೆಗೆ ಮಾತ್ರ ಲಭ್ಯವಿರುತ್ತಿತ್ತು, ಈ ಮಾರ್ಗ ಬಿಟ್ಟರೆ ಸರಿಸುಮಾರು 85km ಗಳನ್ನು ಕ್ರಮಿಸುವ ಮೂಲಕ ಸಾಗರ ತಾಲೂಕು ಸೇರಬಹುದಿತ್ತು , ಅಗತ್ಯ ಸಮಯಗಳಲ್ಲಿ ತುರ್ತು ಸಂದರ್ಭಗಳಲ್ಲಿ ಈ ಮಾರ್ಗ ಬಳಸುವುದು ಕಷ್ಟಸದೇವೆ ಸರಿ ಎಂಬುದು ಸ್ಥಳೀಯ ಗ್ರಾಮಸ್ಥರ ಅಭಿಪ್ರಾಯ, ಆದರೆ ಈಗ ಕೇವಲ 36 ನಿಮಿಷಗಳಲ್ಲಿ ತಾಲೂಕು ಸೇರಬಹುದು ಅಲ್ಲದೆ ತುರ್ತು ಅಗತ್ಯ ಸಂದರ್ಭಗಳಲ್ಲಿ ಈ ಸೇತುವೆ ಅತ್ಯಂತ ಸಹಾಯಕಾರಿಯಾಗಲಿದೆ .